Ad imageAd image

ಡಿ.ಕೆ.ಶಿವಕುಮಾರ್ ರಿಗೆ ಕರಿಬೆಕ್ಕುಗಳ ಕಾಟ ಹೆಚ್ಚಾಗಿದೆ : ಆರ್ ಅಶೋಕ್ ವ್ಯಂಗ್ಯ

Bharath Vaibhav
WhatsApp Group Join Now
Telegram Group Join Now

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕರಿಬೆಕ್ಕುಗಳ ಕಾಟ ಹೆಚ್ಚಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಡಿ.ಕೆ.ಶಿವಕುಮಾರ್ ಅವರಿಗೆ ಪಕ್ಷದ ನಾಯಕರಿಂದಲೇ ಅಡ್ಡಿ ಶುರುವಾಗಿದೆ.

ರಾಜ್ಯದಲ್ಲಿ ಮಾತ್ರವಲ್ಲ ದೆಹಲಿ ಮಟ್ಟದಲ್ಲಿಯೂ ಆಗುತ್ತಿದೆ. ಈ ಬೆಳವಣಿಗೆ ಗಮನಿಸಿದರೆ ಡಿ.ಕೆ.ಶಿವಕುಮಾರ್ ಏಕನಾಥ್ ಶಿಂಧೆ ಆಗಬಹುದು ಎಂದು ಟಾಂಗ್ ನೀಡಿದ್ದಾರೆ.

ತಮಗೆ ಟ್ಯಾಲೆಂಟ್ ಇದೆ. ಉಪಯೋಗಿಸಿಕೊಳ್ಳಿ ಎಂದು ಹೇಳಿದ್ದಾರೆ. ನವೆಂಬರ್ 16ರ ಮುಹೂರ್ತಕ್ಕೆ ಸಂಘರ್ಷ ಆರಂಭವಾಗಿದೆ. ಒಟ್ಟಾರೆಯಾಗಿ ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ, ಕುರ್ಚಿ ಕಿತ್ತಾಟ ಹೆಚ್ಚಾಗಿದೆ. ನಾಯಕರ ಗುಂಪುಗಾರಿಕೆ ಆಲ್ ಇಂಡಿಯಾ ಲೆವಲ್ ನಲ್ಲಿ ಹೊರಬರುತ್ತಿದೆ ಎಂದು ವಾಗ್ದಾಳಿ ನಡೆಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!