ಬೆಳಗಾವಿ: ಬಿಜೆಪಿ ನಡೆಸಿದ ಸಮೀಕ್ಷೆಯಲ್ಲೇ ಬಿಜೆಪಿ ಗೆಲ್ಲುವುದಿಲ್ಲ ಎಂದು ವರದಿ ಬಂದಿದೆ ಎಂಬುದಾಗಿ . ಬಿಜೆಪಿ ಸಂಸದರು ಉತ್ತಮವಾಗಿ ಕೆಲಸ ಮಾಡಿದ್ದರೆ 14 ಜನ ಅಭ್ಯರ್ಥಿಗಳನ್ನು ಬದಲಿಸಿದ್ದೇಕೆ? ಸದಾನಂದ ಗೌಡ, ಪ್ರತಾಪ್ ಸಿಂಹ, ಕರಡಿ ಸಂಗಣ್ಣ, ಶ್ರೀನಿವಾಸ್ ಪ್ರಸಾದ್, ಕಟೀಲ್ ಅವರಿಗೆ ಏಕೆ ಕೊಡಲಿಲ್ಲ?
ಶೋಭಕ್ಕ ಅವರಿಗೆ ಗೋ ಬ್ಯಾಕ್ ಎಂದು ಏಕೆ ಕಳುಹಿಸಲಾಯಿತು? ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಕುರುಬರಿಗೆ, ಅಲ್ಪಸಂಖ್ಯಾತರಿಗೆ ಒಂದೇ ಒಂದು ಸ್ಥಾನ ಕೊಟ್ಟಿಲ್ಲ. ಇದು ಸಾಮಾಜಿಕ ನ್ಯಾಯವೇ? ಇದರ ಅರ್ಥ ನಿಮ್ಮ ಸೋಲು ನಿಮಗೆ ಅರ್ಥವಾಗಿದೆ.
“ಕಳೆದ ಒಂದು ವರ್ಷದ ಹಿಂದೆ ಮೈಸೂರಿನ ಅದೇ ಮೈದಾನದಲ್ಲಿ ದೇಶದ ಪ್ರಧಾನಿ ತಂದೆ, ಮಗನ ಬಗ್ಗೆ ಏನು ಮಾತನಾಡಿದರು. ಗೌಡ್ರು ಏನು ಮಾತನಾಡಿದರು, ಬಿಜೆಪಿಯವರು ಏನು ಮಾತನಾಡಿದರು. ಅಮಿತ್ ಶಾ ವಿರುದ್ಧ ಏನೂ ಮಾತನಾಡಿದರು ಎಂದು ಮಾಧ್ಯಮದವರು ಜನರಿಗೆ ತೋರಿಸಬೇಕು ಎಂದರು.
ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂದು ಜೆಡಿಎಸ್ ಗೆ ಬೆಂಬಲ ನೀಡಿದ್ದೆವು. ನಾನು ಕುಮಾರಸ್ವಾಮಿ ಅವರು ಸಿಎಂ ಆಗಲಿ ಎಂದು ಬಯಸಿದ್ದು ನಿಜ. ಅವರಿಂದ ಅಧಿಕಾರ ಉಳಿಸಿಕೊಳ್ಳಲು ಆಗಲಿಲ್ಲ. ಯಾರು ಅವರ ಸರ್ಕಾರವನ್ನು ಕೆಡವಿದರೋ ಅವರ ಜೊತೆಯೇ ಕುಮಾರಸ್ವಾಮಿ ಸೇರಿಕೊಂಡಿದ್ದಾರೆ ಎಂದು ಹೇಳಿದರು.