ಬಳ್ಳಾರಿ : ಮುಡಾ ಅಕ್ರಮ ನಿವೇಶನ ಹಂಚಿಕೆ ಹಗರಣ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಲೆನೋವು ತಂದಿಟ್ಟಿದೆ. ಒಂದೆಡೆ ತನಿಖೆ ಆರಂಭವಾಗಿದ್ರೆ ಮತ್ತೊಂದೆಡೆ ರಾಜೀನಾಮೆ ಪಾಲಿಟಿಕ್ಸ್ ಪ್ರಹಸನ ಜೋರಾಗಿದೆ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಮಾಜಿ ಸಚಿವ, ಶಾಸಕ ಜನಾರ್ಧನ ರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್ ಒಳಗೆ ಮುಸುಕಿನ ಗುದ್ದಾಟ ಆರಂಭವಾಗಿದ್ದು, ಮುಂದಿನ ಸಿಎಂ ನಾನೇ ಎಂಬ ಉತ್ಸಾಹದಲ್ಲಿ ಹಲವು ನಾಯಕರು ರೇಸ್ ನಲ್ಲಿರುವಾಗ, ಶಾಸಕ ಜನಾರ್ಧನ ರೆಡ್ಡಿ ಕಾಂಗ್ರೆಸ್ ನಲ್ಲಿ ತಲ್ಲಣ ಸೃಷಿಸುವ ಹೇಳಿಕೆ ನೀಡಿದ್ದಾರೆ. ಮುಡಾ ಹಗರಣದ ದಾಖಲೆಗಳನ್ನು ಹೊರಗೆ ತೆಗೆಸಿದ್ದೇ ಡಿಸಿಎಂ ಡಿಕೆ ಶಿವಕುಮಾರ್ ಎಂಬ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಬಳ್ಳಾರಿಯಲ್ಲಿ ಮಾತನಾಡಿದ ರೆಡ್ಡಿ, ಕಾಂಗ್ರೆಸ್ ಹೈಕಮಾಂಡ್ ಗೆ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಲು ಸಾಧ್ಯವಿಲ್ಲ. ಡೆಲ್ಲಿ ವರಿಷ್ಠರು ಸಿದ್ದರಾಮಯ್ಯ ಅವರನ್ನು ಇಳಿಸುವ ಪ್ರಯತ್ನ ಮಾಡುವುದಿಲ್ಲ. ಯಾಕಂದ್ರೆ ಅವರಿಗೆ ಸಿದ್ದುವನ್ನು ಇಳಿಸಿದರೆ ಸರ್ಕಾರ ಬೀಳುತ್ತೆ ಅಂತ ಭಯ ಇದೆ ಎಂದು ಹೇಳಿದ್ದಾರೆ.
ಇನ್ನು ವಿರೋಧ ಪಕ್ಷ ಬಿಜೆಪಿ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಯತ್ನ ಮಾಡಿಲ್ಲ, ಬದಲಾಗಿ ಕಾಂಗ್ರೆಸಿಗರೇ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಲು ಯತ್ನಿಸುತ್ತಿದ್ದಾರೆ.
ಮುಡಾ ಹಗರಣ ದಾಖಲೆಗಳನ್ನ ಹೊರಗೆ ತಂದಿದ್ದೆ ಡಿಸಿಎಂ ಡಿಕೆ ಶಿವಕುಮಾರ್.ಅಧಿಕಾರದಲ್ಲಿ ಇದ್ದವರು ಮಾತ್ರ ಆ ರೀತಿ ದಾಖಲೆ ತೆಗೆಯಲು ಸಾಧ್ಯ ಎಂದು ಶಾಸಕ ಜನಾರ್ಧನ ರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ