ಅರಸೀಕೆರೆ: ಕರ್ನಾಟಕ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಅರಸೀಕೆರೆ ತಾಲ್ಲೂಕು ವತಿಯಿಂದ ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು
ಅರಸೀಕೆರೆ ತಾಲೂಕು ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಎ.ಪಿ ಚಂದ್ರಯ್ಯ ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಸಂಬಂದವಾಗಿ ಜಾತಿ
ಗಣತಿ ಕಾರ್ಯ ನಡೆಯುತ್ತಿದ್ದು, ಈಗ ಅಸ್ಪೃಶ್ಯರಲ್ಲದ ಬೇಡ ಜಂಗಮ ಸಮುದಾಯವು ಸೃಶ್ಯ ಬೇಡ ಜಂಗಮರೆಂದು
ಅವರನ್ನು ಜಾತಿ ಸಮುದಾಯಯವಾಗಿರುವುದರಿಂದ ಅವರನ್ನು ಜಾತಿ ಗಣತಿಯಲ್ಲಿ ಬೇಡ ಜಂಗಮರೆಂದು ನಮೋದಿಸಬಾರದು. ಈ ವರ್ಗದವರು ಯಾವುದೇ ಸಾಮಾಜಿಕ ತುಳಿತಕ್ಕೆ ಒಳಗಾಗಿ ಅವಮಾನ ನೋವು, ಅಪಮಾನ ಮತ್ತು ಜಾತಿ ನಿಂದನೆ ಪ್ರಕರಣಗಳನ್ನು ಅನುಭವಿಸಿರುವುದಿಲ್ಲ. ಇವರುಗಳು ಸಮುದಾಯದವರೂ ಸೇರಿದ ಆಗಿರುವುದಿಲ್ಲ. ಇವರು ಸ್ಪೃಶ್ಯ ಜಾತಿಗೆ
ಪರಿಶಿಷ್ಟ ಜಾತಿಗೆ ಸೇರಿದದವರಾಗಿರುತ್ತಾರೆ ಎಂದರು.
ಜಿಲ್ಲಾ ಅಧ್ಯಕ್ಷ ಎಂ ಟಿ ವೆಂಕಟೇಶ್ ಮಾತನಾಡಿ, ಅರಸೀಕೆರೆ ತಾಲ್ಲೂಕಿನಾಧ್ಯಂತ ಜಾತಿ ಗಣತಿ ಕಾರ್ಯ
ನಡೆಯುತ್ತಿರುವುದರಿಂದ ಬೇಡ ಜಂಗಮ ಜನಾಂಗದವರು ನಮ್ಮನ್ನು ಪರಿಶಿಷ್ಟ ಜಾತಿಯ ಬೇಡ ಜಂಗಮರು ಸೇರಿಸಿ ಎಂದು ಗಣತಿದಾರರಲ್ಲಿ ಒತ್ತಡ ಏರುತ್ತಿರುವುದು ಕಂಡುಬಂದಿರುತ್ತದೆ.ಆದದುದರಿಂದ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳು ಇಂತಹ ಸುಳ್ಳು ಮಾಹಿತಿ ನೀಡುತ್ತಿರುವವರ
ಮೇಲೆ ಕಠಿಣ ಕಾನನೂನು ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ ಜಾತಿ ಗಣತಿ ಕಾಯರ್ಯವು ನಡೆಯುತ್ತಿದ್ದು, ಮಾದಿಗ ಸಮುದಾಯದವರು ಆದಿಕರ್ನಾಟಕ, ಆದಿದ್ರಾವಿಡ, ಎಂದು ಬರೆಸಿದರೂ ಕೂಡ ಜಾತಿ ಕಾಲಂ 61ರಲ್ಲಿ ಮಾದಿಗ ಎಂದು ಕಡ್ಡಾಯವಾಗಿ ಬರಸಬೇಕು, ಆಗ ಹುಟ್ಟಿದ
ಮಗುವನ್ನು ಗಣತಿಗೆ ಸೇರಿಸಬೇಕು. ಯಾರೂ ಕೂಡ ಜಾತಿ ಗಣತಿಯಿಂದ ಹೊರಗೆ ಉಳಿಯಬಾರದು ಮಾದಿಗ ಜನಾಂಗದ ಮುಂದಿನ ಭವಿಷ್ಯಕ್ಕಾಗಿ ಮೀಸಲಾತಿ, ಉದ್ಯೋಗ, ಶಿಕ್ಷಣ ರಾಜಕೀಯ ಇನ್ನಿತರೇ ಸೌಲಭ್ಯಗಳಿಗಾಗಿ ಅಗತ್ಯವಾಗಿರುವುದರಿಂದ ಎಲ್ಲರೂ ಕೂಡ ಅಂಜಿಕೆ ಇಲ್ಲದೇ ಮಾದಿಗ ಎಂದು ಹೇಳಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು .
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಸಂಕೋಡನಹಳ್ಳಿ ಮಂಜುನಾಥ್ , ನಗರಾಧ್ಯಕ್ಷ ಎನ್ ಜಯಕುಮಾರ್ , ಪ್ರಧಾನ ಕಾರ್ಯದರ್ಶಿ ಕರಿಯಪ್ಪ , ರುದ್ರಮುನಿ , ಮಲದೇವಿಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.
ವರದಿ: ರಾಜು ಅರಸಿಕೆರೆ




