Ad imageAd image

ಕಲ್ಲಂಗಡಿ ಹಣ್ಣು ತಿಂದ ತಕ್ಷಣ ನೀರು ಕುಡಿಯಲೇಬೇಡಿ!

Bharath Vaibhav
ಕಲ್ಲಂಗಡಿ ಹಣ್ಣು ತಿಂದ ತಕ್ಷಣ ನೀರು ಕುಡಿಯಲೇಬೇಡಿ!
WhatsApp Group Join Now
Telegram Group Join Now

ಯಾವುದೇ ಹಣ್ಣು ತಿಂದ ನಂತರ ನೀರು ಕುಡಿಯಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಇದು ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಅನೇಕ ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇನ್ನು ಕಲ್ಲಂಗಡಿ ಬಗ್ಗೆ ಹೇಳುವುದಾದರೆ, ಇದು ಬೇಸಿಗೆಯ ಅತ್ಯಂತ ಜನಪ್ರಿಯ ಹಾಗೂ ಸಿಹಿಯಾದ ಹಣ್ಣುಗಳಲ್ಲಿ ಒಂದಾಗಿದೆ. ಆದರೆ ಅದನ್ನು ತಿಂದ ತಕ್ಷಣ ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾದರೆ ಕಲ್ಲಂಗಡಿ ಸೇವನೆಯಿಂದ ಯಾವ ಸಮಸ್ಯೆಗಳು ಉಂಟಾಗಬಹುದು ನೋಡೋಣ ಬನ್ನಿ..

ಜೀರ್ಣಕ್ರಿಯೆ ಸಮಸ್ಯೆ: 
ಕಲ್ಲಂಗಡಿ ಹಣ್ಣು ನೀರಿನ ಅಂಶ ಹೆಚ್ಚು ಹೊಂದಿರುವುದರಿಂದ, ಅದನ್ನು ಸೇವಿಸಿದ ಬಳಿಕ ತಕ್ಷಣವೇ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯಲ್ಲಿ ಅಡಚಣೆ ಉಂಟಾಗಬಹುದು. ಇದು ಅಸಿಡಿಟಿ ಅಥವಾ ಊತಕ್ಕೆ ಕಾರಣವಾಗಬಹುದು.ಕಲ್ಲಂಗಡಿ ಹಣ್ಣು ತಿನ್ನುವುದು ವಿಶೇಷವಾಗಿ ಹೊಟ್ಟೆಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಹಣ್ಣು ತಿಂದ ನಂತರ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣವೆಂದರೆ ಕಲ್ಲಂಗಡಿ ದೇಹ ತಂಪಾಗಿಸುವ ಗುಣ ಹೊಂದಿದೆ. ಆದರೆ ನೀರು ಬಿಸಿ ಪರಿಣಾಮವನ್ನು ಬೀರುತ್ತದೆ. ಇವೆರಡರ ಸಂಯೋಜನೆಯು ದೇಹದ ಉಷ್ಣತೆಯನ್ನು ಹದಗೆಡಿಸಬಹುದು ಮತ್ತು ಇದರಿಂದಾಗಿ ಗ್ಯಾಸ್, ಹೊಟ್ಟೆ ನೋವು ಮತ್ತು ಅಜೀರ್ಣದಂತಹ ಅನೇಕ ಸಮಸ್ಯೆಗಳು ಉಂಟಾಗಬಹುದು.

ದೇಹದಲ್ಲಿ ಹೆಚ್ಚಾಗುತ್ತದೆ ಉಷ್ಣತೆ: 
ಕಲ್ಲಂಗಡಿ ತಿಂದ ನಂತರ ನೀರು ಕುಡಿದರೆ ದೇಹದಲ್ಲಿ ಶಾಖ ಉತ್ಪಾದನೆಯಾಗುತ್ತದೆ. ಈ ಸಮಯದಲ್ಲಿ ದೇಹದ ಉಷ್ಣತೆಯು ಹೆಚ್ಚಾಗಬಹುದು, ಇದು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ವಿಶೇಷವಾಗಿ ಬೇಸಿಗೆಯಲ್ಲಿ ಹೊರಗೆ ತುಂಬಾ ಬಿಸಿಲಿರುವಾಗ. ಕಲ್ಲಂಗಡಿ ತಿಂದ ನಂತರ ನೀರು ಕುಡಿಯುವುದರಿಂದ ದೇಹದ ಉಷ್ಣತೆಯು ಇನ್ನಷ್ಟು ಹೆಚ್ಚಾಗುತ್ತದೆ. ಇದರಿಂದಾಗಿ ಡಿಹೈಡ್ರೇಶನ್ ಸಮಸ್ಯೆಯಿಂದ ಬಳಲುತ್ತೀರಿ.

ನೀರು ಕುಡಿದರೆ ವಾಂತಿ: 
ಕಲ್ಲಂಗಡಿ ತಿಂದ ತಕ್ಷಣ ನೀರು ಕುಡಿಯುವುದರಿಂದಲೂ ವಾಂತಿ ಬರುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಾರಣವೆಂದರೆ ಇದು ಹೊಟ್ಟೆಯಲ್ಲಿ ಗ್ಯಾಸ್ ರಚನೆಗೆ ಕಾರಣವಾಗಿ ವಾಂತಿ ಬರುತ್ತದೆ. ನಿಮಗೆ ವಾಂತಿ ಬಂದರೆ, ತಕ್ಷಣ ಚಿಕಿತ್ಸೆ ಪಡೆಯಿರಿ. ಬೇಕಾದರೆ ನೀವು ಶುಂಠಿ ಮತ್ತು ಪುದೀನಾ ಚಹಾವನ್ನು ಸೇವಿಸಬಹುದು. ಇವು ಗ್ಯಾಸ್ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ವಾಂತಿಯನ್ನು ತಡೆಯುತ್ತದೆ.

ಹೊಟ್ಟೆ ಉಬ್ಬರದ ಸಮಸ್ಯೆ: 
ಕಲ್ಲಂಗಡಿ ತಿಂದ ನಂತರ ನೀರು ಕುಡಿದರೆ ಅದು ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು. ಇದರಿಂದ ಹೊಟ್ಟೆ ಉಬ್ಬುತ್ತದೆ ಮತ್ತು ಅನಾನುಕೂಲವಾಗುತ್ತದೆ. ನಿಮಗೆ ಹೊಟ್ಟೆ ಉಬ್ಬರ ಸಮಸ್ಯೆ ಇದ್ದರೆ ಶುಂಠಿ ಸೇವಿಸಿ. ಶುಂಠಿಯಲ್ಲಿರುವ ವಿಶೇಷ ಗುಣಗಳು ವಾಯು ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಹೊಟ್ಟೆಗೆ ಪರಿಹಾರ ನೀಡುತ್ತದೆ. ಇದಲ್ಲದೆ, ಶುಂಠಿಯ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಅಜೀರ್ಣ ಸಮಸ್ಯೆ: 
ಕಲ್ಲಂಗಡಿ ತಿಂದ ನಂತರ ನೀರು ಕುಡಿಯುವುದರಿಂದ ಅಜೀರ್ಣವೂ ಉಂಟಾಗುತ್ತದೆ. ಆದರೆ ಅಜೀರ್ಣ ಸಮಸ್ಯೆ ಯಾವುದೇ ಸಮಯದಲ್ಲಿ ಸಂಭವಿಸಬಹುದು. ಇದು ಎದೆಯುರಿ, ಹೊಟ್ಟೆ ನೋವು, ಗ್ಯಾಸ್ ಮತ್ತು ಹೊಟ್ಟೆಯಲ್ಲಿ ಭಾರವಾದ ಭಾವನೆಯನ್ನು ಉಂಟುಮಾಡಬಹುದು. ಈ ಸಮಸ್ಯೆಯಿಂದ ಪರಿಹಾರ ಪಡೆಯಲು, ಶುಂಠಿಯನ್ನು ಸೇವಿಸಿ. ಶುಂಠಿಯಲ್ಲಿರುವ ವಿಶೇಷ ಗುಣಗಳು ಅಜೀರ್ಣ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಹೊಟ್ಟೆಗೆ ಪರಿಹಾರ ನೀಡುತ್ತದೆ.

ಯಾವಾಗ ಕುಡಿಯಬೇಕು?: 
ಕಲ್ಲಂಗಡಿ ತಿಂದ ನಂತರ 30-45 ನಿಮಿಷಗಳ ನಂತರ ಮಾತ್ರ ನೀರು ಕುಡಿಯಬೇಕು. ಇನ್ನೂ ಕೆಲವರ ಅನುಭವ ಪ್ರಕಾರ ಎಲ್ಲರಿಗೂ ಇದೇ ರೀತಿಯಲ್ಲಿ ಆಗುವುದಿಲ್ಲ. ಆದರೆ ಮುನ್ನೆಚ್ಚರಿಕೆಯಾಗಿ ಪಾಲನೆ ಮಾಡುವುದು ಉತ್ತಮ. ಆಯುರ್ವೇದದ ಪ್ರಕಾರ, ಹಣ್ಣುಗಳು ಮತ್ತು ನೀರನ್ನು ಒಂದೇ ಹೊತ್ತಿನಲ್ಲಿ ಸೇವಿಸುವುದರಿಂದ ‘ಅಮಾ’ (ಅಜೀರ್ಣದಿಂದ ಉಂಟಾಗುವ ವಿಷಕಾರಿ ಅವಶೇಷಗಳು) ಉಂಟಾಗಬಹುದು.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!