Ad imageAd image

ಸ್ನಾನ ಮಾಡಿ ಬಂದ ತಕ್ಷಣ ನೀರು ಕುಡಿಯಬೇಡಿ, ಈ ರೋಗ ಬರುವುದು ಖಂಡಿತ

Bharath Vaibhav
ಸ್ನಾನ ಮಾಡಿ ಬಂದ ತಕ್ಷಣ ನೀರು ಕುಡಿಯಬೇಡಿ, ಈ ರೋಗ ಬರುವುದು ಖಂಡಿತ
WhatsApp Group Join Now
Telegram Group Join Now

ನಮ್ಮ ದಿನನಿತ್ಯ ಕರ್ಮಗಳಲ್ಲಿ ಈ ತಪ್ಪುಗಳನ್ನು ನಾವು ಮಾಡುತ್ತೇವೆ. ಆದರೆ ಅವುಗಳನ್ನು ಬದಲಾವಣೆ ಮಾಡುವ ಅಥವಾ ಎಚ್ಚರಿಕೆ ವಹಿಸುವ ಕೆಲಸವನ್ನು ಮಾಡಲೇಬೇಕು. ಪ್ರತಿದಿನ ಸ್ನಾನ ಮಾಡಿದ ನಂತರ ತಕ್ಷಣ ಬಂದು ನೀರು ಕುಡಿಯಬೇಡಿ ಎಂದು ಹೇಳಲಾಗುತ್ತದೆ. ಇದರಿಂದ ನಿಮ್ಮ ಆರೋಗ್ಯದ ಮೇಲೆ ಬಹುದೊಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ. ಯಾವೆಲ್ಲ ಆರೋಗ್ಯ ಸಮಸ್ಯೆಗಳು ಬರುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ ನೋಡಿ.

ಸಾನ್ನ ಮಾಡಿದ (bathing) ನಂತರ ಹೊರಗಡೆ ಹೋಗುವಾಗ ನೀರು ಕುಡಿಯದೇ ಹೋಗಬಾರದು ಎಂದು ಹೇಳುತ್ತಾರೆ. ಆದರೆ ಕೆಲವರಿಗೆ ಸ್ನಾನ ಮಾಡಿದ ನಂತರ ನೀರು ಕುಡಿಯುವ ಅಭ್ಯಾಸ ಇದೆ, ಇದು ನಿಮಗೆ ನಕಾರತ್ಮಕ ಸೂಚನೆಗಳನ್ನು ನೀಡುತ್ತದೆ. ದೇಹದಲ್ಲಿರುವ ಉಷ್ಣಾಂಶವನ್ನು ಬದಲಾವಣೆಯನ್ನು ಮಾಡುವ ಸಾಧ್ಯತೆ ಕೂಡ ಇದೆ. ಸ್ನಾನ ಮಾಡಿದ ನಂತರ ನೀರು ಕುಡಿಯುವ ಬಗ್ಗೆ ನೀವು ತಜ್ಞರ ಸಲಹೆಯನ್ನು ಖಂಡಿತ ಪಾಲಿಸಲೇಬೇಕು. ಇದು ನಮ್ಮ ಆರೋಗ್ಯ ಹಾಗೂ ದೇಹದ ಮೇಲೆ ಪರಿಣಾವನ್ನು ಉಂಟು ಮಾಡುಬಹುದು. ಅದಕ್ಕಾಗಿ ಇಲ್ಲಿ ಹೇಳಿರುವ ಕೆಲವೊಂದು ಸಲಹೆಗಳನ್ನು ಪಾಲಿಸಿ.

ನೀವು ಪ್ರತಿದಿನ ಸ್ನಾನ ಮಾಡಿದ ಬಂದ ನಂತರ ನಿಮ್ಮ ದೇಹದ ಉಷ್ಣಾಂಶ ಬದಲಾವಣೆ ಆಗುತ್ತದೆ. ಈ ವೇಳೆ ನೀವು ಬಂದು ಬಿಸಿ ನೀರು ಕುಡಿದರೆ ನಿಮ್ಮ ದೇಹದ ಉಷ್ಣಾಂಶ ಮತ್ತೆ ಬದಲಾಗುತ್ತದೆ. ಇದು ನಿಮ್ಮ ಆರೋಗ್ಯದ ಮೇಲೆ ಪೆಟ್ಟು ನೀಡುತ್ತದೆ. ನಿಮ್ಮ ದೇಹವು ಒಂದು ಉಷ್ಣಾಂಶಕ್ಕೆ ಹೊಂದಿಕೊಂಡಿರುತ್ತದೆ. ಇದು ಸ್ನಾನ ಮಾಡಿದಾಗ ಗಮನಿಸಬೇಕಾದ ವಿಷಯ, ಒಂದು ವೇಳೆ ಸ್ನಾನ ಮಾಡಿ ಬಂದ ಮೇಲೆ ನೀರು ಕುಡಿದರೆ, ಮತ್ತೆ ನಿಮ್ಮ ದೇಹದ ಉಷ್ಣಾಂಶ ಬದಲಾಗುತ್ತದೆ. ಅದಕ್ಕಾಗಿ ಅದನ್ನು ಸಮವಾಗಿ ಇಟ್ಟುಕೊಂಡಿರಬೇಕು. ಒಂದು ವೇಳೆ ಬದಲಾವಣೆಯಾದರೆ, ನಿಮ್ಮ ದೇಹದಲ್ಲಿ ರಕ್ತ ಪರಿಚಲನೆ ವೇಗವಾಗುತ್ತದೆ. ಇದು ಹೃದಯಕ್ಕೂ ಒತ್ತಡವನ್ನು ಉಂಟು ಮಾಡುತ್ತದೆ.

ಯಾವೆಲ್ಲ ಸಮಸ್ಯೆಗಳು ಉಂಟಾಗಬಹುದು:
ಸ್ನಾನ ಮಾಡಿದ ನಂತರ, ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ.

ರಕ್ತನಾಳಗಳ ಮೇಲೆ ಒತ್ತಡ ಹೆಚ್ಚಿ ಶೀತ ಉಂಟಾಗುವ ಅಪಾಯವಿದೆ.

ಇದು ತಲೆನೋವು, ಆಲಸ್ಯ ಮತ್ತು ಆಯಾಸದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ಒಂದು 10-15 ನಿಮಿಷದಿಂದ ನಂತರ ನೀರು ಕುಡಿಯಿರಿ

ಇನ್ನು ಸ್ನಾನ ಮಾಡಿದ ನಂತರ ಮಾತ್ರವಲ್ಲ, ಊಟ ಮಾಡುವಾಗಲು ಕೂಡ ಇದನ್ನು ಪಾಲಿಸಬೇಕು. ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ತಿಂದ ಆಹಾರ ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆ ಸಮಯದಲ್ಲಿ ನೀರು ಕುಡಿಯುವುದರಿಂದ ಹೊಟ್ಟೆಯ ಆಮ್ಲಗಳು ದುರ್ಬಲಗೊಳ್ಳುತ್ತವೆ. ಜತೆಗೆ ಇದು ಅಜೀರ್ಣ, ಅನಿಲ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.

ಹಲವು ತಜ್ಞರು ಹೇಳುವ ಪ್ರಕಾರ, ಊಟವಾದ 30-45 ನಿಮಿಷಗಳ ನಂತರ ಮಾತ್ರ ನೀರು ಕುಡಿಯಬೇಕು. ಹೀಗೆ ಮಾಡುವುದರಿಂದ ಜೀರ್ಣಕ್ರಿಯೆ ಸ್ವಾಭಾವಿಕವಾಗಿ ನಡೆದು ದೇಹಕ್ಕೆ ಪೋಷಕಾಂಶಗಳು ದೊರೆಯುತ್ತವೆ. ಬಿಸಿಲಿನಲ್ಲಿ ಸಮಯ ಕಳೆದು ಮನೆಗೆ ಬಂದ ತಕ್ಷಣ ಅನೇಕ ಜನರಿಗೆ ತಣ್ಣೀರು ಕುಡಿಯಬೇಕೆಂದು ಅನಿಸುತ್ತದೆ. ಆದರೆ ಇದು ದೇಹಕ್ಕೆ ಒಳ್ಳೆಯದಲ್ಲ. ನಾವು ಸೂರ್ಯನಲ್ಲಿ ದೀರ್ಘಕಾಲ ಕಳೆದಾಗ, ನಮ್ಮ ದೇಹದ ಉಷ್ಣತೆಯು ಹೆಚ್ಚಾಗುತ್ತದೆ. ಅಂತಹ ಸಮಯದಲ್ಲಿ, ಒಂದೇ ಬಾರಿಗೆ ತಣ್ಣೀರು ಕುಡಿಯುವುದರಿಂದ ದೇಹದ ಉಷ್ಣತೆಯು ಇದ್ದಕ್ಕಿದ್ದಂತೆ ಕಡಿಮೆಯಾಗುತ್ತದೆ. ಇದು ತಲೆನೋವು, ಶೀತ ಮತ್ತು ಜ್ವರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.

ಸ್ನಾನ ಹಾಗೂ ಊಟದ ಸಮಯದಲ್ಲಿ ನೀರು ಕುಡಿಯಲು 10ರಿಂದ 15 ಅಂತರದಲ್ಲಿ ಬಿಟ್ಟು ಕುಡಿಯಬೇಕು. ಇದರ ಜೆತೆಗೆ ಹೊರಗಿನಿಂದ ಮನೆಗೆ ಬಂದ ತಕ್ಷಣ ತಣ್ಣೀರು ಕುಡಿಯಬಾರದು. ಸ್ವಲ್ಪ ವಿರಾಮ ತೆಗೆದುಕೊಂಡು ಉಗುರು ಬೆಚ್ಚಗಿನ ನೀರು ಕುಡಿಯಿರಿ. ಹೊರಗಿನಿಂದ ಮನೆಗೆ ಬಂದ ತಕ್ಷಣ ತಣ್ಣೀರು ಕುಡಿಯಬಾರದು. ಸ್ವಲ್ಪ ವಿರಾಮ ತೆಗೆದುಕೊಂಡು ಉಗುರು ಬೆಚ್ಚಗಿನ ನೀರು ಕುಡಿಯಿರಿ.

WhatsApp Group Join Now
Telegram Group Join Now
Share This Article
error: Content is protected !!