Ad imageAd image

ಆರೋಗ್ಯಕ್ಕೆ ಒಳ್ಳೆಯದು ಎಂದು ಈ ಬೀಜಗಳನ್ನು ಅತಿಯಾಗಿ ಸೇವಿಸಬೇಡಿ

Bharath Vaibhav
ಆರೋಗ್ಯಕ್ಕೆ ಒಳ್ಳೆಯದು ಎಂದು ಈ ಬೀಜಗಳನ್ನು ಅತಿಯಾಗಿ ಸೇವಿಸಬೇಡಿ
WhatsApp Group Join Now
Telegram Group Join Now

ಕುಂಬಳಕಾಯಿ ಬೀಜಗಳ ಸೇವನೆ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಇವುಗಳ ಅತಿಯಾದ ಸೇವನೆ ಮಾಡಿದರೆ ಇವುಗಳಿಂದ ಸಿಗುವ ಪ್ರಯೋಜನಕ್ಕಿಂತ, ಆರೋಗ್ಯ ಸಮಸ್ಯೆಗಳೇ ಹೆಚ್ಚಾಗಿರುತ್ತದೆ. ಅತಿಯಾಗಿ ಸೇವನೆ ಮಾಡಿದರೆ ಅಮೃತವೇ ವಿಷವಾಗುತ್ತದೆ. ಹಾಗಾಗಿ ಇವುಗಳ ಸೇವನೆ ಬಗ್ಗೆಯೂ ಗಮನವಿರಬೇಕಾಗುತ್ತದೆ. ಈ ಕುಂಬಳಕಾಯಿ ಬೀಜಗಳನ್ನು ಸರಿಯಾದ ರೀತಿಯಲ್ಲಿ ಸೇವಿಸಿದಾಗ ಮಾತ್ರ ಸಂಪೂರ್ಣ ಪ್ರಯೋಜನಗಳು ದೊರೆಯುತ್ತವೆ. ಹಾಗಾದರೆ ಇವುಗಳನ್ನು ಅತಿಯಾಗಿ ಸೇವನೆ ಮಾಡಿದಾಗ ಏನಾಗುತ್ತದೆ? ಯಾವ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಕುಂಬಳಕಾಯಿ ಬೀಜ (Pumpkin Seeds) ಗಳ ಆರೋಗ್ಯ (Health) ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿರಬಹುದು. ಇವುಗಳನ್ನು ನಿಯಮಿತವಾಗಿ ಆಹಾರದಲ್ಲಿ ಬಳಕೆ ಮಾಡುವುದರಿಂದ ಸಾಕಷ್ಟು ರೀತಿಯ ಲಾಭಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಬೀಜಗಳಲ್ಲಿ ವಿಟಮಿನ್ ಐ, ಫೈಬರ್, ಐರನ್, ಕಾಲ್ಶಿಯಂ, ಬಿ 2, ಫೋಲೆಟ್, ಬೀಟಾ ಕೆರೋಟಿನ್, ಮೆಗ್ನೀಷಿಯಂ, ಜಿಂಕ್ ಮುಂತಾದ ಪೌಷ್ಟಿಕಾಂಶಗಳು ಹೇರಳವಾಗಿದೆ. ಇವೆಲ್ಲವೂ ನಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಉಪಯುಕ್ತವಾಗಿವೆ. ಹಾಗಾಗಿ ಇವುಗಳನ್ನು ನಿಯಮಿತವಾಗಿ ಸೇವಿಸುವುದು ತುಂಬಾ ಒಳ್ಳೆಯದು. ಆದರೆ ಒಳ್ಳೆಯದು ಎಂದು ಅತಿಯಾಗಿ ಸೇವನೆ ಮಾಡಿದರೆ ಅಮೃತ ಕೂಡ ವಿಷವಾಗುತ್ತದೆ ಎಂಬ ಮಾತನ್ನು ನೀವು ಕೇಳಿರಬಹುದು. ಹಾಗಯೇ ಕುಂಬಳಕಾಯಿ ಬೀಜ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಅತಿಯಾಗಿ ತಿಂದರೆ ತೀವ್ರ ರೀತಿಯ ಅಡ್ಡ ಪರಿಣಾಮಕ್ಕೆ (Disadvantages of pumpkin seeds) ದಾರಿ ಮಾಡಿಕೊಡಬಹುದು. ಹಾಗಾದರೆ ಇವುಗಳನ್ನು ಅತಿಯಾಗಿ ಸೇವನೆ ಮಾಡಿದರೆ ಏನಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕುಂಬಳಕಾಯಿ ಬೀಜಗಳ ಅಡ್ಡಪರಿಣಾಮ:
ಆರೋಗ್ಯಕ್ಕೆ ಬಹಳ ಒಳ್ಳೆಯದಾಗಿರುವ ಕುಂಬಳಕಾಯಿ ಬೀಜಗಳಲ್ಲಿ ನಾರಿನಾಂಶ ಅಧಿಕವಾಗಿರುತ್ತದೆ. ಆದ್ದರಿಂದ, ಅವುಗಳನ್ನು ಅತಿಯಾಗಿ ತಿನ್ನುವುದರಿಂದ ಹೊಟ್ಟೆ ನೋವು ಮತ್ತು ಅತಿಸಾರಕ್ಕೆ ದಾರಿ ಮಾಡಿಕೊಡಬಹುದು ಎಂದು ತಜ್ಞರು ಹೇಳುತ್ತಾರೆ.
ಕುಂಬಳಕಾಯಿ ಬೀಜಗಳ ಅತಿಯಾದ ಸೇವನೆ ಕೆಲವರಲ್ಲಿ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.

ಕುಂಬಳಕಾಯಿ ಬೀಜಗಳನ್ನು ತಿನ್ನುವುದು ಕೆಲವರಲ್ಲಿ ಅಲರ್ಜಿ ಉಂಟುಮಾಡಬಹುದು. ಸಾಮಾನ್ಯವಾಗಿ ಕುಂಬಳಕಾಯಿ ಬೀಜಗಳ ಸೇವನೆ ಮಾಡಿದಾಗ ಅಲರ್ಜಿಯಾಗುತ್ತಿದ್ದರೆ ಇವುಗಳ ಸೇವನೆ ಕಡಿಮೆ ಮಾಡುವುದು ಬಹಳ ಒಳ್ಳೆಯದು.
ಇನ್ನು ಈ ಬೀಜಗಳ ಅತಿಯಾದ ಸೇವನೆ ತೀವ್ರವಾದ ಗಂಟಲು ನೋವು ಮತ್ತು ಕೆಮ್ಮಿಗೆ ಕಾರಣವಾಗಬಹುದು.

ಕುಂಬಳಕಾಯಿ ಬೀಜಗಳನ್ನು ಪದೇ ಪದೇ ಸೇವಿಸುವುದರಿಂದ ಕೆಲವರಲ್ಲಿ ರಕ್ತದೊತ್ತಡ ಕಡಿಮೆಯಾಗುತ್ತದೆ. ಹಾಗಾಗಿ ಕಡಿಮೆ ರಕ್ತದೊತ್ತಡದಂತಹ ಸಮಸ್ಯೆಗಳಿಂದ ಈಗಾಗಲೇ ಬಳಲುತ್ತಿರುವವರು ಇವುಗಳನ್ನು ಸೇವಿಸದಂತೆ ಸೂಚಿಸಲಾಗುತ್ತದೆ.

ಹೆಚ್ಚುವರಿಯಾಗಿ, ಕುಂಬಳಕಾಯಿ ಬೀಜಗಳನ್ನು ಚಿಕ್ಕ ಮಕ್ಕಳಿಗೆ ನೀಡಬಾರದು ಏಕೆಂದರೆ ಈ ಬೀಜಗಳು ಮಕ್ಕಳ ಗಂಟಲಿನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳಿರುತ್ತದೆ. ವಯಸ್ಕರು ಸಹ ಇದನ್ನು ಸೇವನೆ ಮಾಡುವಾಗ ಸರಿಯಾಗಿ ಜಗಿದು ಆ ಬಳಿಕ ನುಂಗಬೇಕು.

ತಜ್ಞರು ಹೇಳುವ ಪ್ರಕಾರ, ಕುಂಬಳಕಾಯಿ ಬೀಜಗಳನ್ನು ಸರಿಯಾದ ರೀತಿಯಲ್ಲಿ ಸೇವಿಸಿದಾಗ ಮಾತ್ರ ಸಂಪೂರ್ಣ ಪ್ರಯೋಜನಗಳು ದೊರೆಯುತ್ತವೆ. ಇವುಗಳನ್ನು ಅತಿಯಾಗಿ ಸೇವನೆ ಮಾಡಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಹಾಗಾಗಿ ಇವುಗಳ ಸೇವನೆ ಮೇಲೆ ಗಮನವಿರಲಿ. ನೀವು ಕುಂಬಳಕಾಯಿ ಬೀಜಗಳನ್ನು ಸಲಾಡ್‌ಗಳು, ಗ್ರಾನೋಲಾ ಬಾರ್‌ಗಳು ಮತ್ತು ಸ್ಮೂಥಿಗಳಂತಹ ಭಕ್ಷ್ಯಗಳಲ್ಲಿ ಸೇರಿಸಬಹುದು. ಪರ್ಯಾಯವಾಗಿ, ಅವುಗಳನ್ನು ಲಘುವಾಗಿ ಹುರಿದು ಸೇವಿಸಬಹುದು. ಆದರೆ ಇವು ನಾಲಿಗೆಗೆ ರುಚಿ ನೀಡುತ್ತದೆ ಎಂದು ಅತಿಯಾಗಿ ನಿಮ್ಮ ಆಹಾರಗಳಲ್ಲಿ ಬಳಕೆ ಮಾಡಿ ಸೇವನೆ ಮಾಡಬಾರದು.

WhatsApp Group Join Now
Telegram Group Join Now
Share This Article
error: Content is protected !!