ಸಿಂಧನೂರು : ಜೂ.18 ರಂದು ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಟಿ ಎ. ನಾರಾಯಣ ಗೌಡ ಬಣ ಪತ್ರಿಕೆ ಘೋಷ್ಠಿ ನಡೆಸಿ ನಗರದ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ನಾಗರಾಜ್ ಕಾಟ್ವಾ ಅವರನ್ನು ಸಿಂಧನೂರು ಸರ್ಕಾರಿ ಆಸ್ಪತ್ರೆಯಿಂದ ವರ್ಗಾವಣೆ ಯಾಗಿದೆ ಎಂಬ ಸುದ್ದಿ ನಡುವೆ ಕರವೇ ತಾಲೂಕ ಘಟಕ ಅಧ್ಯಕ್ಷ ಲಕ್ಷ್ಮಣ ಬೋವಿ ಅವರ ನೇತೃತ್ವದಲ್ಲಿ ಒತ್ತಾಯಿಸುವುದೇನೆಂದರೆ.
ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದಾಧಿಕಾರಿಯವರು ಅತ್ಯಂತ ದಕ್ಷತೆ ಮತ್ತು ಪ್ರಾಮಾಣಿಕತೆ ಯಿಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು ವಿಶೇಷವಾಗಿ ಹೆರಿಗೆ ಪ್ರಕರಣಗಳಲ್ಲಿ ಇವರು ಅತ್ಯಂತ ನಿಪುಣ ವೈದ್ಯರು ಗರ್ಭಿಣಿ ಸ್ತ್ರೀಯರಿಗೂ ಮತ್ತು ರೋಗಿಗಳಿಗೆ ತುಂಬಾ ಅನುಕೂಲವಾಗುತ್ತದೆ ಸಾರ್ವಜನಿಕರು ಆಸ್ಪತ್ರೆ ಸಿಬ್ಬಂದಿಗಳು ಸೇರಿದಂತೆ ರೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಇಂಥವರ ಸೇವೆಯನ್ನು ಇನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ಅವಶ್ಯ ಕತೆ ಇದೆ ಸಾರ್ವಜನಿಕರ ಹಿತ ದೃಷ್ಟಿಯಿಂದ ಡಾ. ನಾಗರಾಜ್ ಕಾಟ್ವ ಅವರನ್ನು ಯಾವುದೇ ಕಾರಣಕ್ಕೆ ವರ್ಗಾವಣೆ ಮಾಡದೆ ಇವರನ್ನು ಇಲ್ಲಿಯೇ ವಹಿಸಿಕೊಳ್ಳಬೇಕೆಂದು ಕರವೇ ತಾಲೂಕು ಸಮಿತಿ ಸಿಂಧನೂರು ಒತ್ತಾಯಿಸುತ್ತದೆ.
ಈ ಸಂದರ್ಭದಲ್ಲಿ ಕರವೇ ತಾಲೂಕ ಅಧ್ಯಕ್ಷ ಲಕ್ಷ್ಮಣ ಬೋವಿ. ಜಿಲ್ಲಾ ಉಪಾಧ್ಯಕ್ಷ ಎಸ್. ದೇವೇಂದ್ರ ಗೌಡ ಗುಂಜಳ್ಳಿ. ಶಿವಮ್ಮ ಕಬ್ಬೆರ ತಾಲೂಕ ಮಹಿಳಾ ಘಟಕ ಅಧ್ಯಕ್ಷರು. ಶರಣಬಸವ ಮಲ್ಲಾಪುರ ತಾಲೂಕ ಪ್ರಧಾನ ಕಾರ್ಯದರ್ಶಿ. ರಫಿ ಕುನ್ನಟಗಿ ನಗರ ಘಟಕ ಅಧ್ಯಕ್ಷರು. ತಾಲೂಕು ಉಪಾಧ್ಯಕ್ಷರಾದ ಎಲ್. ರಾಜಾಸಾಬ್ ಗಾಂಧಿನಗರ. ಭಾಷಾ ಸಾಬ್. ಬಸವರಾಜ್ ಟೇಲರ್. ಶರಣಪ್ಪ ಭೋವಿ. ಇನ್ನು ಅನೇಕರಿದ್ದರು
ವರದಿ : ಬಸವರಾಜ ಬುಕ್ಕನಹಟ್ಟಿ.




