Ad imageAd image

ಗಂಡ- ಹೆಂಡತಿ ಸಂಬಂಧ  ಗಟ್ಟಿಯಾಗಿ ಬೆಸೆಯಲು ಹೀಗೆ ಮಾಡಿ

Bharath Vaibhav
ಗಂಡ- ಹೆಂಡತಿ ಸಂಬಂಧ  ಗಟ್ಟಿಯಾಗಿ ಬೆಸೆಯಲು ಹೀಗೆ ಮಾಡಿ
WhatsApp Group Join Now
Telegram Group Join Now

ಜೀವನ ಸುಮಧುರವಾಗಿ ಸಾಗಲು ಗಂಡ- ಹೆಂಡತಿಯರ ನಡುವಿನ ಸಂಬಂಧ ಸುಖಕರವಾಗಿರಬೇಕು. ದಾಂಪತ್ಯದಲ್ಲಿ ಬಿರುಕು ಬರಬಾರದು ಎಂದರೆ, ಸಂಬಂಧ ಅನೊನ್ಯವಾಗಿರಬೇಕು. ಗಂಡ- ಹೆಂಡತಿಯರ ನಡುವೆ ದೈಹಿಕ, ಮಾನಸಿಕ ಸಂಬಂಧ ಗಟ್ಟಿಯಾಗಿರುವುದು ಬಹಳ ಮುಖ್ಯ.

ಗಂಡ- ಹೆಂಡತಿಯರ ಸಂಬಂಧ ಗಟ್ಟಿಯಾಗಿ ಬೆಸೆಯಲು ಕೆಲವು ಟಿಪ್ಸಗಳನ್ನು ಉಪಯೋಗಿಸಿದರೆ ಸಂಬಂಧದಲ್ಲಿ ಬಿರುಕು ಮೂಡದೇ ವಿರಸ ಭಾವನೆಗಳನ್ನು ತೊಡೆದು ಹಾಕಬಹುದು.

ಗಂಡ- ಹೆಂಡತಿ ದೈಹಿಕ ಸಂಬಂಧಗಳನ್ನು ಎಂಜಾಯ್ ಮಾಡಬೇಕು.

ಏನನ್ನಾದರೂ ತಿನ್ನುವಾಗ ಅದರ ರುಚಿಯನ್ನು ಅನುಭವಿಸುತ್ತ ತಿನ್ನುವುದು ಹೇಗೆ ಮುಖ್ಯವೋ ಹಾಗೇ ಗಂಡ- ಹೆಂಡತಿ  ತಮ್ಮ ದೈಹಿಕ, ಮಾನಸಿಕ ಸಂಬಂಧಗಳ ಸುಖವನ್ನು ಎಂಜಾಯ್ ಮಾಡುವುದು ಅಷ್ಟೇ ಮುಖ್ಯ.

ಗಂಡ- ಹೆಂಡತಿಯನ್ನು, ಹೆಂಡತಿ- ಗಂಡನನ್ನು ಮನಸ್ಸೋ ಇಚ್ಚೆ, ಪ್ರೀತಿಸುವುದು ಬಹಳ ಮುಖ್ಯ.

ಪರಸ್ಪರರು ಅವರವರ ಕೆಲಸದಲ್ಲಿ ಸಹಾಯ ಮಾಡುವ ಗುಣ, ಪರಸ್ಪರರ ಸಮಸ್ಯೆ, ಕಷ್ಟಗಳನ್ನು ಆಲಿಸಿ, ಸಮಸ್ಯೆ ಪರಿಹರಸುವ ಗುಣವನ್ನು ಬೆಳೆಸಿಕೊಳ್ಳುವುದು ಕೂಡ ಬಹಳ ಮುಖ್ಯ.

ಒತ್ತಾಯಪೂರ್ವಕ ದೈಹಿಕ ಸಂಬಂಧಗಳನ್ನು ಬೆಳೆಸುವುದು ಗಂಡ- ಹೆಂಡತಿಯರಿಗೆ ತರವಲ್ಲ. ಪರಸ್ಪರರು ಬೇಕಾದಾಗ ಪರಸ್ಪರರ ಒಪ್ಪಿಗೆಯ ಮೇರೆ ಸಂಬಂಧ ಬೆಳೆಸುವುದರಿಂದ ದಂಪತಿಗಳಲ್ಲಿ ನಂಬಿಕೆ,  ವಿಶ್ವಾಸ ವೃದ್ಧಿಸಲು ಸಾಧ್ಯ. ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು ಎಂಬಂತೆ ಇನ್ನು ಹಲವಾರು ಸೂತ್ರಗಳು ಸುಖ ಸಂಸಾರದ ಭಾಗವಾಗಿವೆ. ಅವುಗಳನ್ನು ಪಟ್ಟಿ ಮಾಡುತ್ತ ಹೋದರೆ ಅದು ಮುಗಿಯದ ನಿಘಂಟು ಆಗಿ ಬಿಡುತ್ತದೆ. ಅವರವರು ತಮ್ಮ ಬಾಳ ಸಂಗಾತಿಗೆ ಹೇಗೆಗೂ ಇಷ್ಟವೋ ಹಾಗಿರುವುದು ಸುಖ ಸಂಸಾರಿಗಳ ಲಕ್ಷಣ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!