Ad imageAd image

ದೀರ್ಘ ಸಮಯದವರೆಗೆ ಸೌಂದರ್ಯವತಿಯಾಗಿ ಕಾಣಲು ರಾತ್ರಿ ಈ ಕೆಲಸ ಮಾಡಿ

Bharath Vaibhav
ದೀರ್ಘ ಸಮಯದವರೆಗೆ ಸೌಂದರ್ಯವತಿಯಾಗಿ ಕಾಣಲು ರಾತ್ರಿ ಈ ಕೆಲಸ ಮಾಡಿ
WhatsApp Group Join Now
Telegram Group Join Now

ಆಧುನಿಕ ಜೀವನಶೈಲಿಯಿಂದಾಗಿ 30ನೇ ವಯಸ್ಸಿನಲ್ಲಿಯೇ ಮುಖದ ಕಾಂತಿ ಕಳೆದುಕೊಳ್ಳಲು ಆರಂಭಿಸುತ್ತದೆ. ನೀವು ದೀರ್ಘಕಾಲದವರೆಗೆ ಸೌಂದರ್ಯವತಿಯಾಗಿ ಕಾಣಲು ಬಯಸಿದ್ರೆ ದಿನನಿತ್ಯ ಕೆಲವೊಂದ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ರಾತ್ರಿಯ ಚರ್ಮದ ಆರೈಕೆ ಮುಖದ ಕಾಂತಿ ಹೆಚ್ಚಾಗಲು ತುಂಬಾನೇ ಪ್ರಮುಖ ಕಾರಣವಾಗುತ್ತದೆ.

ಈ ಲೇಖನ ಪ್ರತಿನಿತ್ಯ ರಾತ್ರಿ ಹೇಗೆ ಚರ್ಮದ ಆರೈಕೆ ಮಾಡಿಕೊಳ್ಳಬೇಕು ಎಂಬುದರ ಮಾಹಿತಿಯನ್ನು ಒಳಗೊಂಡಿದೆ. ಈ ಸಲಹೆಗಳನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಂಡರೆ ನೀವು ದೀರ್ಘ ಸಮಯದವರೆಗೆ ರೂಪವತಿಯಾಗಿ ಕಾಣಿಸಿಕೊಳ್ಳಬಹುದು.

ಸಲಹೆ 1:
ಮಲಗುವ ಮುನ್ನ ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಇದರಿಂದ ಮುಖದ ಮೇಲಿನ ಧೂಳು, ಕೊಳಕು ಮತ್ತು ಮಲೀನತೆ ಹೋಗುತ್ತದೆ. ಮುಖದ ಮೇಲಿನ ಚರ್ಮದ ರಂಧ್ರಗಳ ಮೇಲೆ ಸಂಗ್ರಹವಾದ ಹೆಚ್ಚುವರಿ ಎಣ್ಣೆ ಅಥವ ಜಿಡ್ಡು ನಿವಾರಣೆಯಾಗುತ್ತದೆ. ಮುಖ ಸ್ವಚ್ಛಗೊಳಿಸಲು ನಿಮ್ಮ ಚರ್ಮಕ್ಕೆ ಅಡ್ಜಸ್ಟ್ ಆಗೋ ಕ್ಲೆನ್ಸರ್ ಬಳಸಿ. ತಜ್ಞ ವೈದ್ಯರ ಸಲಹೆ ಪಡೆದು ಕ್ಲೆನ್ಸರ್ ಆಯ್ಕೆ ಮಾಡಿಕೊಳ್ಳಬಹುದು.

ಸಲಹೆ 2:
ಮುಖದ ಕಾಂತಿಯನ್ನು ಕಾಪಾಡಿಕೊಳ್ಳಲು ಎಫ್ಫೋಲಿಯೇಟ್ ಮಾಡಿಕೊಳ್ಳಬೇಕು. ಇದು ನಿಮ್ಮ ಮುಖದ ಮೇಲಿನ ಡೆಡ್ ಸ್ಕಿನ್ ತೆಗೆಯಲು ಸಹಾಯ ಮಾಡುತ್ತದೆ. ಎಫ್ಫೋಲಿಯೇಟ್ ಮಾಡಿಕೊಂಡಾಗ ನಿಮ್ಮ ಚರ್ಮ ಹೊಳೆಯುತ್ತದೆ. ವಾರಕ್ಕೆ ಎರಡು ಬಾರಿಯಾದರೂ ಎಫ್ಫೋಲಿಯೇಟ್ ಮಾಡಿಕೊಂಡರೆ . ನಿಮ್ಮ ಚರ್ಮವನ್ನು ಸುಂದರವಾಗಿಟ್ಟುಕೊಳ್ಳಬಹುದು.

ಸಲಹೆ 3:
ಕ್ಲೀನಿಂಗ್ ಮತ್ತು ಎಫ್ಫೋಲಿಯೇಟ್ ಮಾಡಿಕೊಂಡ ಬಳಿಕ ಟೋನರ್ ಬಳಸುವುದು ಬಹಳ ಮುಖ್ಯ. ಟೋನರ್ ನಿಮ್ಮ ಚರ್ಮದ ನೈಸರ್ಗಿಕ pH ಮಟ್ಟವನ್ನು ಕಾಪಾಡುತ್ತದೆ. ಟೋನರ್‌ ನಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ.

ಸಲಹೆ 4:
ಚರ್ಮದ ಸಮಸ್ಯೆಗಳ ನಿವಾರಣೆಗೆ ಸೀರಮ್ ಬಳಕೆ ಮಾಡಬೇಕಾಗುತ್ತದೆ. ಸೂಕ್ಷ್ಮ ರೇಖೆಗಳು, ಸುಕ್ಕುಗಳು ಮತ್ತು ಅಸಮ ಚರ್ಮದ ಟೋನ್ ಸಮಸ್ಯೆಯನ್ನು ತೊಡೆದುಹಾಕಲು ಸೀರಮ್ ಸಹಾಯ ಮಾಡುತ್ತದೆ. ರೆಟಿನಾಲ್ ಅಥವಾ ವಿಟಮಿನ್ ಸಿ ನಂತಹ ಪವರ್‌ಫುಲ್ ಸೀರಮ್ ಬಳಸಬೇಕು.

ಸಲಹೆ 5:
ಮುಖದ ಚರ್ಮವು ಒಣಗದಂತೆ ರಕ್ಷಿಸಲು ಮತ್ತು ತಾಜಾ ಆಗಿ ಕಾಣಲು ಮಾಯಿಶ್ಚರೈಸರ್ ಬಳಸಬೇಕು. ಮಾಯಿಶ್ಚರೈಸರ್ ಮಾಡಿಕೊಳ್ಳೋದರಿಂದ ಮುಖದ ಮೇಲಿನ ಗೆರೆಗಳು, ಸುಕ್ಕುಗಳ ನಿವಾರಣೆಯಗುತ್ತದೆ. ನೈಸರ್ಗಿಕ ತೈಲಗಳನ್ನು ಒಳಗೊಂಡಿರುವ ಮಾಯಿಶ್ಚರೈಸರ್ ಬಳಕೆ ಮಾಡೋದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು.

WhatsApp Group Join Now
Telegram Group Join Now
Share This Article
error: Content is protected !!