ಜಗತ್ತಿನಲ್ಲಿರುವ ಎಲ್ಲ ಉದ್ಯೋಗಿಗಳಿಗೂ ಕೂಡ, ವಾರದಲ್ಲಿ ಮೂರು ದಿನ ವೀಕ್‌ಆಫ್ ಸಿಗೋದು ನಿಜಕ್ಕೂ ಒಂದು ರೀತಿಯ ಕನಸಿದ್ದಂತೆ. ಈಗ ಜಪಾನ್‌ಮಾತ್ರ ವಾರದಲ್ಲಿ 3 ದಿನ ವೀಕ್‌ಆಫ್‌ಕೊಡಲು ನಿರ್ಧಾರ ಮಾಡಿದೆ. ಕೊರೊನಾ ನಂತರದಲ್ಲಿ ವರ್ಕ್‌ಕಲ್ಚರ್‌ತುಂಬ ಬದಲಾಗುತ್ತಿದೆ. ಕೆಲವು ಕಂಪೆನಿಗಳು ಶಾಶ್ವತ ವರ್ಕ್‌ಫ್ರಂ ಹೋಮ್‌ಕೊಟ್ಟರೆ, ಇನ್ನೂ ಕೆಲವು ಕಂಪೆನಿಗಳು ವಾರದಲ್ಲಿ ಮೂರು ದಿನ ವರ್ಕ್‌ಫ್ರಂ ಹೋಮ್, ಇನ್ನು ಎರಡು ದಿನ ಕೆಲಸ ಎಂದು ಹೇಳಿದೆ. ಆದರೆ ಎಷ್ಟೋ ಕಂಪೆನಿಗಳು, ಕೆಲಸ ಮಾಡುವವರು ನಿಜಕ್ಕೂ ಆರೋಗ್ಯಕರ ಕೆಲಸ ಹೇಗಿರಬೇಕು ಎಂದು ಆಲೋಚಿಸಬೇಕಿದೆ.
ಜಪಾನಿನಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಗಮನಿಸಿ ಅಲ್ಲಿನ ಕಂಪನಿಗಳು ಈ ನಿಯಮ ಜಾರಿಗೆ ತರುತ್ತಿವೆ. ಮನೆ ಗೆಲಸ ಹಾಗೂ ಕಚೇರಿಗಳಲ್ಲಿನ ಒತ್ತಡದಿಂದಾಗಿ ಜಪಾನಿನಲ್ಲಿ ಮಹಿಳೆಯರಿಗೆ ತೀವ್ರ ಒತ್ತಡ ಹೆಚ್ಚಾಗಿ ಮಕ್ಕಳ ಪಾಲನೆ, ಪೋಷಣೆಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೇ ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಅಲ್ಲಿನ ಜನಸಂಖ್ಯೆ ಪ್ರಮಾಣ ತೀವ್ರತರವಾಗಿ ಕುಸಿಯುತ್ತಿದೆ.
ಕಾರಣ ಅಲ್ಲಿನ ಕಂಪನಿಗಳು ವಾರದಲ್ಲಿ ಮೂರು ದಿನ ರಜೆ ನೀಡಿ ದೇಶದ ಜನಸಂಖ್ಯೆ ಹೆಚ್ಚಳಕ್ಕೆ ಹಾಗೂ ಇರುವ ಮಕ್ಕಳನ್ನು ಗಟ್ಟಿಮಟ್ಟಾಗಿ ಬೆಳೆಸಲು ಅನುಕೂಲ ವಾಗುಂವತೆ ವಾರದಲ್ಇಲ ಕೇವಲ ಮೂರು ದಿನ ಕಚೇರಿ ಆಫೀಸ್ ಮಾಡಲು ನಿರ್ಧರಿಸಿವೆ. ಅಲ್ಲದೇ ಅಲ್ಲಿನ ಕಂಪನಿಗಳು ತನ್ನ ನೌಕರರಿಗೆ ವರ್ಕ ಪ್ರಾಂ ಹೋಂ ಸೌಲಭ್ಯಗಳನ್ನು ಹೇರಳವಾಗಿ ನೀಡುತ್ತಿವೆ.