ಮೊಳಕಾಲ್ಮುರು:ತಾಲೂಕಿನ ಸುಮಾರು 40ಕ್ಕೂ ಹೆಚ್ಚು ಜನ ಆರ್‌ಎಮ್‌ಪಿ ಹೆಸರಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದ ವರಿಗೆ ಆರೋಗ್ಯ ಇಲಾಖೆಯಿಂದ ನೋಟಿಸ್ ನೀಡಿ ಬಂದ್ ಮಾಡಲಾಗಿದೆ, ಡಾಕ್ಟರ್ ಮಧುಕುಮಾರ್.
ತಾಲೂಕಿನ ಸಿದ್ದಯ್ಯನ ಕೋಟೆಯಲ್ಲಿ ವೀರೇಶ್ ಎಂಬ ಆರ್ ಎಮ್ ಪಿ ವೈದ್ಯ ನೀಡಿದ್ದ ಇಂಜೆಕ್ಷನ್ ನಿಂದ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ. ಘಟನೆ ನಡೆದ ತಕ್ಷಣವೇ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ, ಪ್ರಭಾರಿ ಟಿ ಎಚ್ ಓ ಡಾಕ್ಟರ್ ಮಧುಕುಮಾರ್ ತನ್ನ ಸಿಬ್ಬಂದಿಗಳನ್ನು ಸಿದ್ದೈನಕೋಟೆ ವೈದ್ಯ ಕ್ಲಿನಿಕ್ ನಡೆಸುತ್ತಿದ್ದ ಮನೆ ಮೇಲೆ ದಾಳಿ ನಡೆಸಿ ಮನೆಯನ್ನು ಸೀಸ್ ಮಾಡಿದ್ದಾರೆ, ಅದೇ ರೀತಿ ತಾಲೂಕಿನಾದ್ಯಂತ ಬಿಜಿಕೆರೆ ಕೊಂಡ್ಲಹಳ್ಳಿ ಕೋನಸಾಗರ ರಾಯಪುರ ನಾಗಸಮುದ್ರ ರಾಂಪುರ ಹಾನಗಲ್ ್‌ಎಮ್‌ಪಿ ಕ್ಲಿನಿಕ್ ಗಳಿಗೆ ಸಿಬ್ಬಂದಿಯೊಂದಿಗೆ ತೆರಳಿ ನೋಟಿಸ್ ನೀಡಿ, ಬೀಗ ಜಡೆಯಲಾಯಿತು.
ಈ ಸಂದರ್ಭದಲ್ಲಿ ಡಾಕ್ಟರ್ ಮಧುಕುಮಾರ್ ಮಾತನಾಡಿ ನಾವು ತಾಲೂಕಿನಾದ್ಯಂತ ಎಲ್ಲಾ ಆರ್ ಎಂ ಪಿ ವೈದ್ಯರ ಕ್ಲಿನಿಕ್ ಗಳಿಗೆ ಹೋಗಿ ಸಂಪೂರ್ಣವಾಗಿ ಬಂದ್ ಮಾಡಿಸಿದ್ದೇವೆ.. ಎಂದು ನಮ್ಮ ವಾಹಿನಿಗೆ ತಿಳಿಸಿದರು.ಒಟ್ಟಿನಲ್ಲಿ ತಾತ್ಕಾಲಿಕವಾಗಿ ಆರ್‌ಎನ್‌ಪಿ ವೈದ್ಯರ ಸೇವೆ ಬಂದ್ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಏನಾಗುವುದು ಎಂದೂ ಕಾದುನೋಡಬೇಕಿದೆ.
ವರದಿ:ಪಿಎಂ ಗಂಗಾಧರ