ಮೊಳಕಾಲ್ಮುರು:- ವಿದ್ಯುತ್ ಕಣ್ಣಾಮುಚ್ಚಲೇಯಿಂದ ಮೊಳಕಾಲ್ಮುರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯು ಕಗ್ಗತ್ತಲ್ಲಿನಲ್ಲಿ ಮುಳುಗಿದ್ದು ಮೇಣದಬತ್ತಿ ಮತ್ತು ಮೊಬೈಲ್ ಟಾರ್ಚರ್ ಬೆಳಕಿನಲ್ಲಿಯೇ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವ ಅನಿವಾರ್ಯತೆ ಬಂದೊಗಿದೆ.
ನೂರು ಹಾಸಿಗೆಗಳ ಸರ್ಕಾರಿ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ರೋಗಿಗಳು ಚಿಕಿತ್ಸೆಗೆಂದು ಬರುತ್ತಿದ್ದಾರೆ,ಆದರೆ ವಿದ್ಯುತ್ ಸಮರ್ಪಕವಾಗಿ ದೊರೆಯದ ಕಾರಣ ರೋಗಿಗಳು ಪರದಾಡುತ್ತಿದ್ದಾರೆ. ಕಳೆದ ಐದಾರು ದಿನಗಳಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿರುವ ಕಾರಣ ವಾರ್ಡ್ಗಳಲ್ಲಿ ದಾಖಲಾಗುವ ರೋಗಿಗಳು ಹಾಗೂ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಾಲಾಗುವ ರೋಗಿಗಳ ಆರೈಕೆಗೆ ತುಂಬಾ ತೊಂದರೆ ಉಂಟಾಗುತ್ತಿದೆ.
ವಿದ್ಯುತ್ ಕಡಿತದ ಕಾರಣ ಫ್ಯಾನ್ಗಳು ಕಾರ್ಯನಿರ್ವಹಿಸುತ್ತಿಲ್ಲ, ಇದರಿಂದಾಗಿ ಸೊಳ್ಳೆಗಳ ಕಾಟ ಮತ್ತು ಸೆಕೆ ಕೂಡ ಹೆಚ್ಚಾಗಿ ಉಸಿರು ಬಿಗಿಹಿಡಿಯುವ ಸ್ಥಿತಿ ನಿರ್ಮಾಣವಾಗಿದೆ.ಅಷ್ಟೇ ಅಲ್ಲದೇ ವಿದ್ಯುತ್ ಕಡಿತದ ನಂತರ ಕೆಲಸ ನಿರ್ವಹಿಸಬೀಕಾದ ಜನರೇಟರ್ ಕೆಟ್ಟು ನಿಂತ ಪರಿಣಾಮ ಇನ್ನಷ್ಟು ಸಮಸ್ಯೆ ಉಲ್ಬಣಗೊಂಡಿದೆ. ಗರ್ಭಿಣಿಯರಿಗೆ ಆಪರೇಷನ್ ಸೇರಿದಂತೆ ಇನ್ನಿತರ ಸೀವಿಯರ್ ಕೇಸ್ಗಳನ್ನು ಅಟೆಂಡ್ ಮಾಡಲು ವಿದ್ಯುತ್ ಇಲ್ಲದ ಕಾರಣ ಇನ್ನಿಲ್ಲದ ಸಮಸ್ಯೆ ಉಂಟಾಗಿದೆ.
ಕರೆಂಟ್ ಇಲ್ಲದೇ ಮೇಣದ ಬತ್ತಿಯಲ್ಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿರುವ ವಿಡಿಯೋ ಮತ್ತು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಈ ಬಗ್ಗೆ ಬಿಜೆಪಿ ಕರ್ನಾಟಕ ಹಾಗೂ ಮಾಜಿ ಸಚಿವ ಶ್ರೀರಾಮುಲು ಫೇಸ್ಬುಕ್ ಖಾತೆಗಳಲ್ಲಿ ಸಮಸ್ಯೆ ಬಗ್ಗೆ ಹಂಚಿಕೊಂಡಿದ್ದು ಜನರೇಟರ್ ಸಹ ದುರಸ್ತಿ ಮಾಡಿಸಲಾಗದೇ ಇಡೀ ಆಸ್ಪತ್ರೆಯನ್ನು ಕತ್ತಲಲ್ಲಿರಿಸಿ ‘ಚಿಂತಾಜನಕ’ ಸ್ಥಿತಿಗೆ ತೆಗೆದುಕೊಂಡು ಹೋದದ್ದೇ ನಿಮ್ಮ ಸರ್ಕಾರದ ಒಂದು ವರ್ಷದ ಸಾಧನೆ ಎನ್ನಬಹುದೇ !?ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ವರದಿ ಪಿಎಂ ಗಂಗಾಧರ