—————————————–ಗಾಂಜಿ ಹಳ್ಳದ ಕಿರು ಸೇತುವೆ ಶೀಘ್ರ ನಿರ್ಮಾಣಕ್ಕೆ ರೈತರ ಆಗ್ರಹ

ಮಲ್ಲಮ್ಮನ ಬೆಳವಡಿ : ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದಿಂದ ಸವದತ್ತಿ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ದೊಡವಾಡ ಸುತಗಟ್ಟಿ ಮಾರ್ಗ ಮಧ್ಯದ ಗಾಂಜಿ ಹಳ್ಳದ ಕಿರು ಸೇತುವೆ ಮೇಲಿನ ರಸ್ತೆ ಕುಸಿದು ಎರಡು ತಿಂಗಳೇ ಕಳೆದಿವೆೆ. ದೊಡವಾಡ ಸುತಗಟ್ಟಿ ಕರೀಕಟ್ಟಿ, ಗುಡಿಕಟ್ಟಿ, ನನಗುಂಡಿಕೊಪ್ಪ ಗ್ರಾಮಗಳ ಅನೇಕ ರೈತರು ತಮ್ಮ ಹೊಲಗಳಿಗೆ ಕೃಷಿ ಚಟುವಟಿಕೆಗಳಿಗೆ ತೆರಳಲು ಇದೇ ಮುಖ್ಯ ರಸ್ತೆಯಾಗಿದ್ದು ಈ ರಸ್ತೆ ಮೂಲಕ ಸವದತ್ತಿ ಮತ್ತು ಶ್ರೀ ಕ್ಷೇತ್ರ ಯಲ್ಲಮ್ಮನ ಗುಡ್ಡ ಬಹಳ ಸಮೀಪವಾಗುವುದರಿಂದ ಸುತ್ತಲಿನ ಅನೇಕ ಗ್ರಾಮಗಳ ಜನರ ನಿತ್ಯ ಸಂಚಾರಕ್ಕೆ ಈ ರಸ್ತೆ ಆಧಾರವಾಗಿದೆ ಆದರೆ ಗಾಂಜಿ ಹಳ್ಳದ ಮೇಲಿನ ರಸ್ತೆ ಭಾಗಶಃ ಕುಸಿದಿರುವುದರಿಂದ ಅಪಾಯದ ಆತಂಕದಲ್ಲೇ ಜನ ಈ ರಸ್ತೆಯಲ್ಲಿ ಓಡಾಡಬೇಕಾಗಿದೆ.
ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯುತ್ತಿರುವುದರಿಂದ ನೀರು ತುಂಬಿ ರಸ್ತೆ ಮತ್ತಷ್ಟು ಕುಸಿಯುತ್ತಿದೆ. ರಸ್ತೆ ಕುಸಿದ ಮಾಹಿತಿ ಇಲ್ಲದ ಇತರ ಗ್ರಾಮಗಳ ಬೈಕ್ ಸವಾರರು ರಾತ್ರಿ ವೇಳೆ ಇಲ್ಲಿ ದಾಟುವಾಗ ಬೈಕ್ ಸ್ಕಿಡ್ ಆಗಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಉಳಿದಿರುವ ಸ್ವಲ್ಪ ರಸ್ತೆಯಲ್ಲೇ ರೈತರು ಅನಿವಾರ್ಯವಾಗಿ ಕಷಿ ಕಾಯಕಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ ಆದರೆ ಯಾವಾಗ ಏನಾಗುತ್ತದೆಯೋ ತಿಳಿಯುತ್ತಿಲ್ಲ ಎಂದು ಇಲ್ಲಿ ಹೊಲಗಳಿರುವ ಅನೇಕ ರೈತರು ತಮ್ಮ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ದೊಡವಾಡ ಸುತಗಟ್ಟಿ ಮಾರ್ಗ ಮಧ್ಯದ ಗಾಂಜಿ ಹಳ್ಳದ ರಸ್ತೆ ಕುಸಿದು ಅನೇಕ ದಿನಗಳಾಗಿವೆ. ಜನ ಪ್ರತಿನಿಧಿಗಳಾಗಲಿ, ಸಂಬAಧಿಸಿದ ಅಧಿಕಾರಿಗಳಾಲಿ ಈವರೆಗೆ ಇತ್ತ ತಿರುಗಿ ನೋಡಿಲ್ಲ ಆದಷ್ಟೂ ಶೀಘ್ರ ಅನುದಾನ ಬಿಡುಗಡೆ ಮಾಡಿ ಇಲ್ಲಿರುವ ಗಾಂಜಿ ಹಳ್ಳದ ಕಿರು ಸೇತುವೆಯನ್ನು ಇನ್ನಷ್ಟು ಎತ್ತರಿಸಿ ರಸ್ತೆ ನಿರ್ಮಾಣ ಮಾಡಿದರೆ ಇಲ್ಲಿನ ರೈತರಿಗೆ ಬಹಳ ಅನುಕೂಲವಾಗುತ್ತದೆ.
——————————————————————————–ಸತೀಶ ಧಾರವಾಡ ದೊಡವಾಡ ಗ್ರಾಮದ ರೈತ
ಈ ರಸ್ತೆ ಕುಸಿದು ಬಿದ್ದ ಜನರ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಮಾಹಿತಿ ಇದ್ದು ಹೊಸದಾಗಿ ನಿರ್ಮಿಸಲು ಕ್ರಿಯಾಯೋಜನೆ ರೂಪಿಸಿ ಸರಕಾರಕ್ಕೆ ಕಳಿಸಲಾಗಿದೆ ಅನುದಾನ ಮಂಜೂರಾಗುವರೆಗೆ ತಾತ್ಕಾಲಿಕವಾಗಿ ಮೋರಂ ಮಣ್ಣು ಹಾಕಿ ರಸ್ತೆ ದುರಸ್ತಿ ಮಾಡಲಾವಗುವುದು.
————————————————————————————ವರದಿ: ದುಂಡಪ್ಪ ಹೂಲಿ




