ಬೆಂಗಳೂರು : ಸರ್ವಾಧಿಕಾರಿ ಗೋಸುಂಬೆಗೆ ಈ ದೇಶದ ಪ್ರಧಾನಿಯೆನಿಸಿಕೊಳ್ಳುವ ನೈತಿಕ ಹಕ್ಕು, ಯೋಗತ್ಯೆ ಇದೆಯೇ? ಎಂದು ನಟ ಕಿಶೋರ್ ಸಾಮಾಜಿಕ ಮಾಧ್ಯಮದಲ್ಲಿ ಫೋಸ್ಟ್ ಮಾಡಿದ್ದಾರೆ.
ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ನಟ ಕಿಶೋರ್, ಕ್ಷಮಿಸಿ ,ಇದು ಬರೀ ಮನರಂಜನೆಗಾಗಿ..
ದಿನದಿನವೂ ಸುಳ್ಳು ಹೇಳಿ, ತನ್ನ ಕಾಲುನೆಕ್ಕುವ ಮಾಧ್ಯಮದ ಕೈಲೂ ಸುಳ್ಳು ಹೇಳಿಸಿ, ಮಾಡಬಾರದ ಹಗರಣ ಮಾಡಿ, ಕ್ಷಣ ಕ್ಷಣಕ್ಕೂ ಬಣ್ಣ ಬದಲಿಸುತ್ತಾ ಸರಕಾರಿ ಸಂಸ್ಥೆಗಳ ದುರುಪಯೋಗ ಮಾಡಿ, ಜಗತ್ತು ಕಂಡರಿಯದಷ್ಟು ನೀಚಸ್ತರದ ರಾಜಕೀಯ ಮಾಡಿ ನೀತಿ ನಿಯಮಗಳನ್ನು ಧೂಳೀಪಟ ಮಾಡಿದ, ಅಧಿಕಾರಕ್ಕಾಗಿ ಏನು ಮಾಡಲೂ ಹೇಸದ ಯಾವ ಸೈದ್ದಾಂತಿಕ ನಿಲುವೂ ಇಲ್ಲದ ಈ ಸರ್ವಾಧಿಕಾರಿ ಗೋಸುಂಬೆಗೆ ಒಂದು ಮಹಾನ್ ದೇಶದ ಪ್ರಧಾನಿಯೆನಿಸಿಕೊಳ್ಳುವ ನೈತಿಕ ಹಕ್ಕೂ ಯೋಗ್ಯತೆಯೂ ಇದೆಯೇ? ನೀವೇ ಹೇಳಿ ಎಂದು ಹೇಳಿದ್ದಾರೆ.