Ad imageAd image

ನ್ಯಾಯಾಲಯ ನೇಮಕಾತಿ ಪರೀಕ್ಷೆ : ಹಾಲ್ ಟಿಕೆಟ್ ನಲ್ಲಿ ನಾಯಿ ಫೋಟೋ 

Bharath Vaibhav
ನ್ಯಾಯಾಲಯ ನೇಮಕಾತಿ ಪರೀಕ್ಷೆ : ಹಾಲ್ ಟಿಕೆಟ್ ನಲ್ಲಿ ನಾಯಿ ಫೋಟೋ 
WhatsApp Group Join Now
Telegram Group Join Now

ಬಿಹಾರದ ರೋಹ್ತಾಸ್‌ ಜಿಲ್ಲೆಯಲ್ಲಿ ನ್ಯಾಯಾಲಯ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಯೊಬ್ಬರು ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿದಾಗ ಅಚ್ಚರಿಗೊಂಡ ಘಟನೆ ನಡೆದಿದೆ. ಕಾರಣ, ಅವರ ಫೋಟೋ ಇರಬೇಕಾದ ಸ್ಥಳದಲ್ಲಿ ಗೋಲ್ಡನ್ ರಿಟ್ರೈವರ್ ನಾಯಿಯ (Dog) ಚಿತ್ರ ಕಾಣಿಸಿಕೊಂಡಿದೆ.

ಅಭ್ಯರ್ಥಿ ರಾಕೇಶ್ ಕುಮಾರ್ ಅವರು ಸುಮಾರು ನಾಲ್ಕು ವರ್ಷಗಳ ಹಿಂದೆ ಜಿಲ್ಲಾ ನ್ಯಾಯಾಲಯದ ಪಿಯೋನ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ಸಲ್ಲಿಸುವ ವೇಳೆ ತಮ್ಮ ಸರಿಯಾದ ಫೋಟೋ ಹಾಗೂ ದಾಖಲೆಗಳನ್ನು ನೀಡಿದ್ದಾಗಿ ಅವರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಅರ್ಜಿ ಸ್ವೀಕೃತಿಯ ರಶೀದಿಯೂ ತಮ್ಮ ಬಳಿ ಇದೆ ಎಂದು ಹೇಳಿದ್ದಾರೆ.

2022ರಿಂದ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಲ್ಲಿ ಕಾಯುತ್ತಿದ್ದ ಕುಮಾರ್ ಅವರಿಗೆ, ಮಾರ್ಚ್ 15, 2026ರಂದು ನಡೆಯಲಿರುವ ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆಗೊಂಡಿತ್ತು. ಆದರೆ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿದಾಗ ತಮ್ಮ ಫೋಟೋ ಬದಲು ನಾಯಿಯ ಚಿತ್ರ ಕಂಡು ಅವರು ಬೆಚ್ಚಿಬಿದ್ದರು.

ಈ ತಪ್ಪಿನಿಂದ ಕುಟುಂಬದವರಲ್ಲಿಯೂ ಹಾಗೂ ಸುತ್ತಮುತ್ತಲಿನವರಲ್ಲಿಯೂ ಆಶ್ಚರ್ಯ ಮತ್ತು ಮುಜುಗರದ ವಾತಾವರಣ ಉಂಟಾಗಿದೆ. ದೋಷ ಸರಿಪಡಿಸುವಂತೆ ಸಂಬಂಧಿತ ನೇಮಕಾತಿ ಪ್ರಾಧಿಕಾರಕ್ಕೆ ಹಲವು ಬಾರಿ ದೂರು ನೀಡಿದ್ದರೂ ಇನ್ನೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಪರೀಕ್ಷೆಗೆ ಯಾವುದೇ ತೊಂದರೆಯಿಲ್ಲದೆ ಹಾಜರಾಗಲು ಅವಕಾಶ ಕಲ್ಪಿಸುವಂತೆ ಹಾಗೂ ಪ್ರವೇಶ ಪತ್ರದಲ್ಲಿನ ದೋಷವನ್ನು ತಕ್ಷಣ ಸರಿಪಡಿಸುವಂತೆ ಕುಮಾರ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!