Ad imageAd image

ಧನ್ಯತಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ಡಾಲಿ – ಡಾಕ್ಟರ್ 

Bharath Vaibhav
ಧನ್ಯತಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ಡಾಲಿ – ಡಾಕ್ಟರ್ 
WhatsApp Group Join Now
Telegram Group Join Now

ಮೈಸೂರು : ಡಾಲಿ ಧನಂಜಯ ಹಾಗೂ ಧನ್ಯತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ ನಲ್ಲಿ ನಡೆದ ಕಲ್ಯಾಣದಲ್ಲಿ ಧನ್ಯತಾಗೆ ಡಾಲಿ ತಾಳಿ ಕಟ್ಟಿದ್ದಾರೆ. ಆ ಮೂಲಕ ಬ್ಯಾಚುಲರ್‌ ಲೈಫ್‌ಗೆ ಟಾಟಾ ಹೇಳಿ ನವಜೋಡಿ ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದಾರೆ.

ಶಾಸ್ತ್ರೋಕ್ತವಾಗಿ ವೇದಘೋಷಗಳ ಪಠಣೆಯೊಂದಿಗೆ ಧನ್ಯತಾಗೆ ಡಾಲಿ ತಾಳಿ ಕಟ್ಟಿದ್ದಾರೆ. ಕುಟುಂಬಸ್ಥರು , ಅಭಿಮಾನಿಗಳು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಡಾಲಿ ತಾಳಿ ಕಟ್ಟಿದ್ದಾರೆ.

ಧನ್ಯತಾ ಚಿತ್ರದುರ್ಗ ಮೂಲದ ವೈದ್ಯೆಯಾಗಿದ್ದಾರೆ. ಡಾಲಿ ಧನಂಜಯ ಸ್ಯಾಂಡಲ್ ವುಡ್ ನ ಹೆಸರಾಂತ ನಟರಾಗಿದ್ದು, ಅನೇಕ ಚಿತ್ರಗಳಲ್ಲಿ ನಟಿಸಿ ಪ್ರಖ್ಯಾತಿಗಳಿಸಿದ್ದಾರೆ.

ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆದಿದ್ದು ಶನಿವಾರ ಸಂಜೆ ಅದ್ಧೂರಿಯಾಗಿ ರಿಸೆಪ್ಶನ್ ನಡೆದಿತ್ತು. ಅನೇಕ ಗಣ್ಯಾತಿಗಣ್ಯರು ಬಂದು ಆಗಮಿಸಿ ನವಜೋಡಿಗೆ ಶುಭಕೋರಿದ್ದರು

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!