Ad imageAd image

ಗುಂಡಾಲ್ ಜಲಾಶಯ ಸುತ್ತಮುತ್ತಲಿನ ಕಾಡಂಚಿನ ಗ್ರಾಮಗಳಲ್ಲಿ ಚಿರತೆ ದಾಳಿ ನಡೆಸಿ ಸಾಕು ಪ್ರಾಣಿಗಳು ಬಲಿ

Bharath Vaibhav
ಗುಂಡಾಲ್ ಜಲಾಶಯ ಸುತ್ತಮುತ್ತಲಿನ ಕಾಡಂಚಿನ ಗ್ರಾಮಗಳಲ್ಲಿ ಚಿರತೆ ದಾಳಿ ನಡೆಸಿ ಸಾಕು ಪ್ರಾಣಿಗಳು ಬಲಿ
WhatsApp Group Join Now
Telegram Group Join Now

ಚಾಮರಾಜನಗರ:-  ಹನೂರು ತಾಲ್ಲೂಕಿನ ಗುಂಡಾಲ್ ಜಲಾಶಯ ಸುತ್ತಮುತ್ತಲಿನ ಕಾಡಂಚಿನ ಗ್ರಾಮಗಳಲ್ಲಿ ಚಿರತೆ ದಾಳಿ ನಡೆಸಿ ಸಾಕು ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದ ಹಿನ್ನಲೆಯಲ್ಲಿ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಪ್ರದೇಶಗಳಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪ ಕಂಟ್ರಾಕ್ಟರ್ ಅಧಿಕಾರಿಗಳ ಜೊತೆ ತೆರಳಿ ಗ್ರಾಮಸ್ಥರಿಗೆ ರೈತರಿಗೆ ಧೈರ್ಯ ತುಂಬಿದರು.

BRT ಅರಣ್ಯ ಪ್ರದೇಶಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪ ಕಾಂಟ್ರಾಕ್ಟರ್ ಭೇಟಿ ನೀಡಿ ಚಿರತೆ ಬಗ್ಗೆ ಆತಂಕದಲ್ಲಿದ್ದ ಗ್ರಾಮಸ್ಥರಿಗೆ ಧೈರ್ಯ ತುಂಬಿದರು.ಗುಂಡಾಲ್ ಜಲಾಶಯದ ಬಳಿ ಚಿರತೆ ಮೇಕೆ ಮೇಲೆ ದಾಳಿ ಮಾಡಿ ರೈತರ ಹಾಗೂ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಘಟನೆ ಹಿನ್ನೆಲೆ ಡಿಸಿಎಫ್ ದೀಪ ಕಾಂಟ್ರಾಕ್ಟರ್, ವಲಯ ಅರಣ್ಯ ಪ್ರದೇಶದ ಕಾಡಂಚಿನ ಪ್ರದೇಶಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಮತ್ತು ಸುತ್ತ ಮುತ್ತಲಿನ ಜಮೀನುಗಳಲ್ಲಿ ವಾಸಿಸುವ ರೈತರೊಂದಿಗೆ ಮಾತನಾಡಿದರು

ಬೇರೆ ಕಡೆ ಕಿರುಕುಳ ನೀಡುತ್ತಿದ್ದ ಚಿರತೆಯನ್ನು ಹಿಡಿದು ಕಾಲರ್ಟ್ಯೂನ್ ಅಳವಡಿಸಿ ಈ ಭಾಗದಲ್ಲಿ ಬಿಟ್ಟಿರುವುದರಿಂದ ಚಿರತೆ ಎಲ್ಲಿದೆ ಎಂಬುದನ್ನು ಅರಣ್ಯಾಧಿಕಾರಿಗಳು ಟ್ರಾಪ್ ಮೂಲಕ ಗಂಟೆಗೊಮ್ಮೆ ಅಷ್ಟೇಟ್ ಆಗುವುದನ್ನು ಪರಿಶೀಲಿಸಿ ಅರಣ್ಯಾಧಿಕಾರಿಗಳು ಚಿರತೆ ಇರುವ ಬಗ್ಗೆ ಮಾಹಿತಿ ನೀಡುವುದರ ಮೂಲಕ ಅದರ ಚಲನವಲನವನ್ನು ಗಮನಿಸುತ್ತಿದ್ದು ಸೆರೆ ಹಿಡಿಯಲು ಎಲ್ಲಾ ರೀತಿಯ ಯತ್ನಗಳನ್ನು ಮಾಡಲಾಗುತ್ತಿದೆ. ಹೀಗಾಗಿ ರೈತರು ಅರಣ್ಯ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದುವಲಯ ಅರಣ್ಯ ಅಧಿಕಾರಿ ವಾಸು ಸಹ ಮನವಿ ಮಾಡಿದರು.

ರೈತರು ಚಿರತೆ ಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ವಲಯ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ನಿರಂತರವಾಗಿ ದಿನನಿತ್ಯ ತೊಂದರೆ ನೀಡುತ್ತಿರುವ ಚಿರತೆಯನ್ನು ಸೆರೆ ಹಿಡಿಯಲು ಸತತವಾಗಿ ಪ್ರಯತ್ನ ಪಡು ತ್ತಿದ್ದಾರೆ. ರೈತರಿಗೆ ಗ್ರಾಮಸ್ಥರಿಗೆ ಚಿರತೆ ಕಂಡು ಬಂದರೆ ತಕ್ಷಣ ವಲಯ ಅರಣ್ಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗ ದವರಿಗೆ ಮಾಹಿತಿ ನೀಡುವ ಮೂಲಕ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ಕಾರ್ಯಾಚರಣೆ ನಡೆ ಸಲು ಸಹಕಾರ ನೀಡುವಂತೆ ತಿಳಿಸಿದರು.

ಚಿರತೆ ಟಾಸ್ಕ್ ಫೋರ್ಸ್ ಮೈಸೂರಿ ನಲ್ಲಿದ್ದು ಇಲ್ಲಿಗೆ ಬರಲು ತಿಳಿಸಿದ್ದೇವೆ. ಹೀಗಾಗಿ ಚಿರತೆ ಇರುವ ಬಗ್ಗೆ ದೃಢೀಕ ರಿಸಿದ್ದಾರೆ. ಹೀಗಾಗಿ ಅದನ್ನು ಸೆರೆ ಹಿಡಿಯಲು ಎಲ್ಲ ರೀತಿಯ ವ್ಯವಸ್ಥೆ ಯನ್ನು ಮಾಡಲಾಗಿದೆ ರೈತರು ಆತಂಕ ಪಡೆದೆ ಸಹಕಾರ ನೀಡುವಂತೆ ಮನವಿ ಮಾಡಿದರು.

ವರದಿ :ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!