ನವದೆಹಲಿ: ಭಾರತದ ಮೇಲೆ ಸುಂಕ ನೀತಿಯ ಮಹಾ ಸಮರವನ್ನೇ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಿದ್ದಾರೆ.
ಈಗಾಗಲೇ ಶೇ.25ರಷ್ಟು ಸುಂಕ ವಿಧಿಸಿದ್ದಂತ ಯುಎಸ್ ಅಧ್ಯಕ್ಷ ಟ್ರಂಪ್, ಇದೀಗ ಹೆಚ್ಚುವರಿಯಾಗಿ ಶೇ.25ರಷ್ಟು ಸುಂಕ ವಿಧಿಸಿದ್ದಾರೆ. ಈ ಮೂಲಕ ಭಾರತದಿಂದ ಆಮದಾಗುವಂತ ವಸ್ತುಗಳ ಮೇಲೆ ಶೇ.50ರಷ್ಟು ಸುಂಕವನ್ನು ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಬುಧವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ರಷ್ಯಾದ ತೈಲ ಖರೀದಿಯ ಮೇಲೆ ಹೆಚ್ಚುವರಿಯಾಗಿ ಶೇ.25 ರಷ್ಟು ಸುಂಕ ವಿಧಿಸಿದ್ದು, ಒಟ್ಟು ದರವನ್ನು ಶೇ.50 ಕ್ಕೆ ಏರಿಸಿದ್ದಾರೆ. ಆಗಸ್ಟ್ 27 ರಂದು ಜಾರಿಗೆ ಬರಲಿರುವ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ.




