ಮುದಗಲ್: ಪಟ್ಟಣ ಪೊಲೀಸ್ ಠಾಣೆ ಮುಂಭಾಗದಲ್ಲಿ ಡಾ. ಅಂಬೇಡ್ಕರ್ ಮೂರ್ತಿ ನಿರ್ಮಾಣಕ್ಕೆ ಅನುದಾನ ನೀಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ)ಮುದಗಲ್ ಘಟಕದ ಪದಾಧಿಕಾರಿಗಳು ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಅವರಿಗೆ ಮನವಿ ಸಲ್ಲಿಸಿದರು.
ಹರಿಜನವಾಡಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ಶೀತಲಗೊಂಡಿದ್ದು, ಭವನಕ್ಕೆ ಒಂದು ಕೋಟಿ ರೂಪಾಯಿ ಹಾಗೂ ಬಾಬು ಜಗಜೀವನ ರಾಮ್ ಭವನಕ್ಕೆ ಒಂದು ಕೋಟಿ ರೂಪಾಯಿ ಹಣ ಮಂಜೂರು ಮಾಡಬೇಕು. ಮುದಗಲ್ ನ್ನು ತಾಲ್ಲೂಕು ಕೇಂದ್ರವೆಂದು ಘೋಷಣೆ ಮಾಡಬೇಕು.
ಮುದಗಲ್ ಗೆ ನಿರಂತರ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಕೆ.ಎಸ್.ಆರ್.ಟಿ ಬಸ್ ಡಿಪೋವನ್ನು ನಿರ್ಮಾಣ ಮಾಡಬೇಕೆಂದು ಮನವಿ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ಕಟ್ಟಿಮನಿ, ಮುದಗಲ್ ಹೋಬಳಿ ಘಟಕದ ಅಧ್ಯಕ್ಷ ಬಸವರಾಜ ಬಂಕದ ಮನೆ ವೆಂಕಟೇಶ ಹಿರೇಮನಿ ಇನ್ನಿತರ ಇದ್ದರು.
ವರದಿ: ಮಂಜುನಾಥ ಕುಂಬಾರ