ಸಿಂಧನೂರು : ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ. ಬಿಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ನಗರದಲ್ಲಿ ಸಾವಿರಾರು ವಿದ್ಯಾರ್ಥಿಗಳಿಂದ ಸಂಜೆ 6 ಗಂಟೆಗೆ ಬೃಹತ್ ಕ್ಯಾಂಡಲ್ ಮಾರ್ಚ ಬೆಳಗಿಸುವುದರ ಮೂಲಕ ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನದ ಆಚರಿಸಲಾಯಿತು ಎಂದು ದಲಿತ ಪರಿಷತ್ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಮೌನೇಶ್ ಜಾಲವಾಡಗಿ ತಿಳಿಸಿದರು.
ಮೆರವಣಿಗೆ ಕಾರ್ಯಕ್ರಮಕ್ಕೆ ತಾಲೂಕು ಪಂಚಾಯಿತಿ ಇಓ. ಚಂದ್ರಶೇಖರ್ ಅವರು ಚಾಲನೆ ನೀಡಿದರು.
ಮಹಾತ್ಮ ಗಾಂಧೀಜಿ ವೃತ್ತದ ವರೆಗೆ ಸಹಸ್ರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ದಲಿತ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು, ವಿವಿಧ ಸಂಘಟನೆಯ ಮುಖಂಡರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಕ್ಯಾಂಡಿಲ್ ಹಿಡಿದು ಬೃಹತ್ ಕಾಲ್ನಡಿಗೆ ಜಾಥಾದ ಮುಖಾಂತರ ಮಹಾತ್ಮ ಗಾಂಧಿ ವೃತದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಸಲ್ಲಿಸಿ ನುಡಿ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಮೌನೇಶ ಜಾಲವಾಡಗಿ.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವೆಂಕಟೇಶ್. ಮುಖಂಡರಾದ ಎಚ್,ಎನ್.ಬಡಿಗೇರ್. ನಾರಾಯಣ ಬಳಗುರ್ಕಿ ಡಾ. ಹುಸೇನಪ್ಪ ಅಮರಾಪುರ, ಅಮರೇಶ್ ಗಿರಿಜಾಲಿ ಹನುಮಂತ ಕರ್ನಿ. ಯಂಕಪ್ಪ, ಬಸವರಾಜ ಪಿಡಿಒ, ಹೆಚ್. ಎಪ್ ಮಸ್ಕಿ, ಬಸವರಾಜ ಬಾದರ್ಲಿ. ಚನ್ನಬಸವ ಯಾಪಲಪರ್ವಿ, ತಾಲೂಕಾಧ್ಯಕ್ಷ ದುರುಗೇಶ ಕಲಮಂಗಿ, ನರಸಪ್ಪ ಬಡಿಗೇರ್, ಶರಣಬಸವ ಕಲ್ಮಂಗಿ. ಉಮೇಶ್ ಕಲಮಂಗಿ. ಅಶೋಕ ಜಾಲವಾಡಗಿ ಸೇರಿದಂತೆ ದಲಿತ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ




