ಚಿಕ್ಕಮಗಳೂರು :ಜಿಲ್ಲೆಯ ಎನ್ ಆರ್ ಪುರ ತಾಲೂಕ ಮಾಲಗೋಡ್ ಎಸ್ಟೇಟ್ ನಲ್ಲಿ ಕಾರ್ಮಿಕರ ವತಿಯಿಂದ 134 ನೇ ಅಂಬೇಡ್ಕರ್ ಅವರ ಜಯಂತ್ಯೋತ್ಸವವನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಯಿತು.
ಸಂವಿದಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಸಿಹಿ ಹಂಚಿ ಕೇಕ್ ಕತ್ತರಿಸುವ ಮೂಲಕ ತಮ್ಮದೇ ಹುಟ್ಟುಹಬ್ಬ ಎನ್ನುವಂತೆ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಿದ್ದಾರೆ.

ಈ ಸಂದರ್ಭದಲ್ಲಿ,ಚಂದ್ರಶೇಖರ ಎಸ್ಟೇಟ್ ಅಯ್ಯರ್,ಸುಭಾಸ ಕೆಳಗಿನಮನಿ ಡಿಎಸ್ಎಸ್ ಸಂಘಟನಾ ಸಂಚಾಲಕರು,ಕುಮಾರ ಹಸವಿ, ಶರಣು ಮಲಗುಂದ,ನಾಗರಾಜ ಜಡೆ,ಸಿದ್ದಪ್ಪಾ ಹರವಿ ಗುರುಸಂಗಪ್ಪ ಹರವಿ,ಬ್ರಹ್ಮಾನಂದ ಬೀರವಳ್ಳಿ,ಚಂದ್ರು ಹಸವಿ,ಆನಂದ ಬೆಳಗಾವಿ,ಆನಂದ ಕೀರವಾಡಿ ,ಪ್ರದೀಪ ಕಾಮನಹಳ್ಳಿ,ಮಂಜು ಆಡುರು,ವೆಂಕಟೇಶ ವಡ್ಲ,ಪಕ್ಕಿರೇಶ ಅಕ್ಕಿಹೋಳಿ, ಮನು ಹಿರೇಚೌಟಿ,ಪ್ರಶಾಂತ ಮಕ್ರೊಳ್ಳಿ,ಆದರ್ಶ ಶೇಷಗಿರಿ,ವೀರೇಶ ಮಲಗುಂದ ಸೇರಿದಂತೆ ಮಾಲಗೋಡ್ ಎಸ್ಟೇಟ್ ನ ಎಲ್ಲ ಕಾರ್ಮಿಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ವರದಿ : ನಾಗರಾಜ ವನಳ್ಳಿ




