Ad imageAd image

ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಒಂದೆ ಜಾತಿಗೆ ಸಿಮಿತ ಅಲ್ಲ: ಈಶ್ವರ ಗುಡಜ

Bharath Vaibhav
ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಒಂದೆ ಜಾತಿಗೆ ಸಿಮಿತ ಅಲ್ಲ: ಈಶ್ವರ ಗುಡಜ
WhatsApp Group Join Now
Telegram Group Join Now

ಗೋಕಾಕ : ಡಾ. ಅಂಬೇಡ್ಕರ್ ಎಲ್ಲರಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ದೊರಕಿಸಲು ಶ್ರಮಿಸಿದವರು. ಅಂತಹ ಮಹಾತ್ಮರ ಜಯಂತಿ ಮಾಡುವುದು ನಮಗೆಲ್ಲರಿಗೂ ಸಂಭ್ರಮದ ವಿಚಾರ ಎಂದು ಡಾ!! ಬಾಬಾಸಾಹೇಬ ಅಂಬೇಡ್ಕರ ಅವರ 134 ನೆಯ ಜಯಂತಿಯ ನಿಮಿತ್ಯವಾಗಿ ಕರ್ನಾಟಕ ಭೀಮ ರಕ್ಷಕ ಸಂಘಟನೆ ವತಿಯಿಂದ ಸಂಕಲ್ಪ ಏಜ್ಯುಕೇಶನ ಮತ್ತು ರೂರಲ ಡವಲಪಮೆಂಟ ಸೊಸೈಟಿ ವೃದ್ಧಾಶ್ರಮ ಹಾಗು ಆಶ್ರಯ ಸರದಾರ ಮಹಿಳಾ ವಸತಿ ಗೃಹ ಹಾಗು ಶ್ರೀ ದೊದನಾನಾ ವಿಕಾಸ ಶಿಕ್ಷಣ ಸಂಸ್ಥೆ ಬುಧ್ಧಿ ಮಾಂಧ್ಯ ಮಕ್ಕಳ ವಸತಿ ಯುತ ವಿಶೇಷ ಶಾಲೆ ಹಿಡಕಲಾ ಡ್ಯಾಂ ಇವರಿಗೆ ಸೌಲಭ್ಯಗಳ ವಿತರಣಾ ಕಾರ್ಯಕ್ರಮದಲ್ಲಿ ಕರ್ನಾಟಕ ಭೀಮ ರಕ್ಷಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಈಶ್ವರ ಮಾರುತಿ ಗುಡಜ ಮಾತನಡಿದರು.

ನಂತರ ಮಾತನಾಡಿ ಒಳ್ಳೆಯ ಉದ್ದೇಶ ಇದ್ದವರಿಗೆ ಸಂಘಟನೆ ಬೆಂಬಲವಾಗಿ ನಿಲ್ಲುವುದು ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯ ಕೊಡಿಸುವುದು, ನ್ಯಾಯನೀತಿ ಧರ್ಮವನ್ನು ಕಾಪಾಡುವುದು ಸಂಘಟನೆಯ ಮುಖ್ಯ ಉದ್ದೇಶ ಅನ್ಯಾಯದ ವಿರುದ್ಧ ಸಿಡಿದೇಳುವುದೆ ನಮ್ಮ ಸಂಘಟನೆಯ ಮುಖ್ಯ ಧ್ಯೇಯವಾಗಿದೆ ಎಂದು ಹೇಳಿದರು.

ಭಾರತದ ಕಾನೂನು ಸುವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಇಂದಿಗೂ ಸ್ಮರಣೀಯವಾಗಿವೆ ಎಂದರು.

ಗೌರವ ಅಧ್ಯಕ್ಷರಾದ ಮಾಹಾನಿಂಗ ಶಿರಗುಪ್ಪಿ ಮಾತನಾಡಿ ನಾನು ಕಳೆದ 20 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ ನಾಲ್ಕು ಬಾರಿ ಸದಸ್ಯನಾಗಿ ಜನರ ಸೇವೆ ಮಾಡಿದ್ದೇನೆ ಆದ್ದರಿಂದ ಸಂಘಟನೆ ಒಂದು ಒಳ್ಳೆಯ ರೀತಿಯಲ್ಲಿ ಬೆಳೆಯಲಿ ಯುವಕರಿಗೆ ಹೆಚ್ಚಿನ ಪ್ರೋತ್ಸಾಹ ಮಾಡೋಣ ವಿದ್ಯಾಭ್ಯಾಸಕ್ಕೆ ಬಡ ಜನರಿಗೆ ನಮ್ಮಿಂದ ಸಾದ್ಯವಾದಷ್ಟು ಸಹಾಯ ಮಾಡೋಣ ಎಂದು ಸಲಹೆ ನೀಡಿದರು. ನಾವು ಸಂಘಟನೆ ಯಿಂದ ಹೆಚ್ಚಾಗಿ ಶಿಕ್ಷಣಕ್ಕೆ ಒತ್ತು ನಿಡೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಭೀಮ ರಕ್ಷಕ ಸದಸ್ಯರಾದ .ಗ್ರಾಮ ಪಂಚಾಯತ ಸದಸ್ಯರು ಮನಗುತ್ತಿ.ಕೊಣ್ಣೂರ ಪುರಸಭೆಯ ಸದಸ್ಯರಾದ ಅಶೋಕ ಕುಮಾರನಾಯಕ,ಕರ್ನಾಟಕ ಭೀಮ ರಕ್ಷಕ ಸಂಘಟನೆಯ ಪ್ರಮುಖ ಮುದಲಿಂಗ ಗೋರಬಾಳ. ನಾಗಪ್ಪ ಹರಿಜನ.ಮುತ್ತುಸ್ವಾಮಿ.ಸಂತು.ಕಿರಣ.ಕರಣ.ರೋಹಿತ.ಅಬಜಲ ಹಾಗೂ ಸಂಘಟನೆಯ ಇನ್ನೂಳಿದ ಕಾರ್ಯಕರ್ತರು ಹಾಜರಿದ್ದರು.

WhatsApp Group Join Now
Telegram Group Join Now
Share This Article
error: Content is protected !!