ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ತಾಲೂಕ ಆಡಳಿತ ತಾಲೂಕ ಪಂಚಾಯತ ಪುರಸಭೆ ಮತ್ತು ಸಮಾಜ ಕಲ್ಯಾಣ್ ಇಲಾಖೆ ಸಹಯೋಗ ದೊಂದಿಗೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 134ನೇಯ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬೆಳಿಗ್ಗೆ ಪಟ್ಟಣ ದ ಅಂಬೇಡ್ಕರ್ ವೃತ್ತದಲ್ಲಿ ಎಲ್ಲ ಸರಕಾರಿ ಅಧಿಕಾರಿಗಳು ಹಾಗೂ ದಲಿತ ಸಮುದಾಯದ ಮುಖಂಡರು ಹಾಗೂ ಗಣ್ಯ ರು ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಅಂಬೇಡ್ಕರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಲಾಯಿತು ಮೆರವಣಿಗೆ ಯು ಅಂಬೇಡ್ಕರ್ ವೃತ ದಿಂದ ನಗರದ ಪ್ರಮುಖ ಬೀದಿ ಗಳಲ್ಲಿ ಸಂಚರಿಸಿ ಬಸವ ಭವನಕ್ಕೆ ಆಗಮಿಸಿತು ನಂತರ ವೇದಿಕೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು ಸಮಾಜದ ಮುಖಂಡರು ಸೇರಿಕೊಂಡು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ನಂತರ ಕಾರ್ಯಕ್ರಮ ಉದ್ದೇಸಿಸಿ ತಾಲೂಕಿನ ದಂಡಾ ಧಿಕಾರಿಗಳಾದ ಶ್ರೀ ಯಮನಪ್ಪ ಸೋಮನಕಟ್ಟಿ ಯವರು ಡಾ. ಬಿ. ಆರ್. ಅಂಬೇಡ್ಕರ್ ಅವರ ಬಗ್ಗೆ ವಿಸ್ತಾರವಾಗಿ ಮಾತನಾಡಿದರು.
ಇದೆ ಸಮಯದಲ್ಲಿ ಕಾರ್ಯಕ್ರಮದಲ್ಲಿ ತಾಲೂಕು ದಂಡಾ ಧಿಕಾರಿಗಳಾದ ಶ್ರೀ ಯಮನಪ್ಪ ಸೋಮನಕಟ್ಟಿ ಸಮಾಜ ಕಲ್ಯಾಣ ಅಧಿಕಾರಿಗಳಾದ ಶ್ರೀಮತಿ ಮಂಜುಳಾ ಹಿರೇಮನಿ ಶ್ರೀ ಶಿವನಗೌಡ ಬಿರಾದಾರ್ ಬಲ್ಲಪ್ಪ. ನಂದಗಾವಿ ಜಗದೇವಿ ಗುಂಡಳ್ಳಿ ಅಶೋಕ ಹಾರಿವಾಳ ಸುರೇಶ ಹಾರಿವಾಳ ದಲಿತ ಮುಖಂಡರಾ ದ ಅರವಿಂದ್ ಸಾಲವಾಡಗಿ ಅಶೋಕ್ ಚ ಲ ವಾದಿ ಸಂಜೀವ್ ಕಲ್ಯಾಣಿ ಮಹಾಂತೇಶ್ ಸಾಸಬಾಳ್ ಗುರುರಾಜ್ ಗುಡಿಮನಿ ಮತ್ತು ಸರ್ಕಾರಿ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಯುವಕರು ಉಪಸ್ಥಿತರಿದ್ದರು