Ad imageAd image

ಡಾ.ಬಾಬು ಜಗಜೀವನ ರಾಮ್ ಜಯಂತಿ ಪೂರ್ವಭಾವಿ ಸಭೆ

Bharath Vaibhav
ಡಾ.ಬಾಬು ಜಗಜೀವನ ರಾಮ್ ಜಯಂತಿ ಪೂರ್ವಭಾವಿ ಸಭೆ
WhatsApp Group Join Now
Telegram Group Join Now

ಸಿಂಧನೂರು: ಏಪ್ರಿಲ್ ೧ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ ಜಯಂತಿ ಆಚರಣೆ ಅಂಗವಾಗಿ ಪೂರ್ವಭಾವಿ ಸಭೆ ನಡೆಸಲಾಯಿತು.

ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಸಿಲ್ದಾರ್ ಅರುಣ್ ಎಚ್. ದೇಸಾಯಿ ಮಾತನಾಡಿ ಎಪ್ರಿಲ್ ೫ರಂದು ಡಾ. ಬಾಬು ಜಗಜೀವನ ರಾಮ್ ಅವರ ಜಯಂತಿ ಕಾರ್ಯಕ್ರಮವನ್ನು ತಾಲೂಕಿನ ಆಡಳಿತದಿಂದ ಆಚರಿಸಲಾಗುತ್ತಿದ್ದು ಬೆಳಿಗ್ಗೆ ಅಂಬೇಡ್ಕರ್ ವೃತ್ತದಿಂದ ತಹಸಿಲ್ದಾರ್ ಕಛೇರಿ ವರೆಗೂ ಜಗಜೀವನ್ ರಾಮ್ ಅವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ ನಂತರ ಬಪ್ಪೂರ ರಸ್ತೆಯಲ್ಲಿರುವ ಜಗಜೀವನ್ ರಾಮ್ ರವರ ವೃತ್ತದ ನಾಮಪಲಕಕ್ಕೆ ಪೂಜೆ ಸಲ್ಲಿಸಿದ ನಂತರ ತಹಸಿಲ್ ಕಛೇರಿ ಆವರಣದಲ್ಲಿ ಜಯಂತಿ ಕಾರ್ಯಕ್ರಮ ನಡೆಯಲಿದ್ದು ಎಲ್ಲಾ ಇಲಾಖೆಗಳು ಅಧಿಕಾರಿಗಳು ಜಗಜೀವನ್ ರಾಮ್ ಅವರ ಅಭಿಮಾನಿಗಳು ಭಾಗವಹಿಸಿ ಹಾಗೂ ತಾಲೂಕಿನ ಎಲ್ಲಾ ಕಛೇರಿ ಹಾಗೂ ಶಾಲಾ ಕಾಲೇಜುಗಳಲ್ಲಿ ಬೆಳಗ್ಗೆ ಕಡ್ಡಾಯವಾಗಿ ಜಯಂತಿ ಆಚರಿಸುವಂತೆ ತಿಳಿಸಿದರು.

ಈ ವೇಳೆ ತಹಸಿಲ್ದಾರ್ ಅರುಣ್ ಹೆಚ್. ದೇಸಾಯಿ. ಸಮಾಜ ಕಲ್ಯಾಣ ಅಧಿಕಾರಿ ವಿಜಯಲಕ್ಷ್ಮಿ. ತಾಲೂಕ ಪಂಚಾಯತಿ ಎಡಿ. ಅಮರಗುಂಡಪ್ಪ ಸಿ ಡಿ ಪಿ ಓ. ಲಿಂಗನಗೌಡ. ಅಶೋಕ. ವಿಸ್ತರಣೆಧಿಕಾರಿ ಲಿಂಗಪ್ಪ ಅಂಗಡಿ. ಕೃಷಿ ಇಲಾಖೆ ವೀರೇಶ್.ಮುಖಂಡರಾದ ಅಲ್ಲಮಪ್ರಭು ಪೂಜಾರಿ. ಆರ್. ಅಂಬ್ರುಸ್. ಗುರುರಾಜ್ ಮುಕ್ಕುಂದ. ಹನುಮಂತ ಹಂಪನಾಳ. ಹನುಮಂತ. ಪಂಪಾಪತಿ ಬೂದಿವಾಳ

ವರದಿ:ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
Share This Article
error: Content is protected !!