ಬೆಂಗಳೂರು : ಓಂ ಶಕ್ತಿಯನ್ನು ಪೂಜಿಸುವುದು ಮತ್ತು ಧ್ಯಾನಿಸುವುದು ಭಾರತೀಯ ಸಂಸ್ಕೃತಿಯಲ್ಲಿ ಬಹಳ ಮುಖ್ಯವಾಗಿದೆ. ಇದು ಭಕ್ತರಿಗೆ ಆಧ್ಯಾತ್ಮಿಕ ಶಕ್ತಿ ಮತ್ತು ದೈವಿಕ ಅನುಗ್ರಹವನ್ನು ನೀಡುತ್ತದೆ ಎಂದು ಡಾ. ಸಂಗನ ಬಸಪ್ಪ ಬಿರಾದಾರ್ ಹೇಳಿದರು.
ಅವರು ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡಿನ ವ್ಯಾಪ್ತಿಗೆ ಬರುವ ರಾಜೇಶ್ವರಿ ನಗರದಲ್ಲಿ ಮೇಲ್ ಮರುವತ್ತೂರು ಆದಿ ಪರಾ ಶಕ್ತಿ ಅರ್ಚಕರಾದ ಶಿವಾನಿ ನೇತೃತ್ವದಲ್ಲಿ ಶ್ರಾವಣ ಮಾಸದ ಅಂಗವಾಗಿ ಶ್ರೀ ಓಂ ಶಕ್ತಿ ಪೂಜಾ ಮಹೋತ್ಸವ ಹಾಗೂ ಮಹಿಳೆಯರಿಗೆ ಬಾಗಿನ ಅರ್ಪಿಸುವ ಕಾರ್ಯ ಕ್ರಮಕ್ಕೆ ಡಾ. ಸಂಗನ ಬಸಪ್ಪ ಬಿರಾದಾರ್ ಅವರು ಜಗನ್ಮಾತೆ ಓಂ ಶಕ್ತಿ ದೇವಿಗೆ ಪೂಜೆ ಪುನಸ್ಕಾರ ಸಲ್ಲಿಸಿ ದೇವಿಯ ದರ್ಶನ ಪಡೆದು ಮಹಿಳೆಯರಿಗೆ ಅರಿಷಿಣ ಕುಂಕುಮ ಎಲೆ ಅಡಿಕೆ ಬಾಳೆ ಹಣ್ಣು ಬಳೆ ಕುಪ್ಪಸದೊಂದಿಗೆ ಬಾಗಿಣ ನೀಡಿ ನೆರೆದಿದ್ದ ಮಹಿಳೆಯರನ್ನು ಉದ್ದೇಶಿಸಿ ಡಾ. ಬಿರಾದಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ನಂದೀಶ್, ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಸಂಚಾಲಕ ಶ್ರೀಕಾಂತ್, ಓಂ ಶಕ್ತಿಯ ನೂರಾರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




