ಮುದಗಲ್ : ಪೋಲಿಸ್ ಠಾಣೆಯ ಮುಂಭಾಗದಲ್ಲಿ ಡಾ!! ಬಿ .ಆರ್. ಅಂಬೇಡ್ಕರ್ ರವರ ನಾಮಪಲಕಕ್ಕೆ ಇಂದು ಸಂವಿಧಾನ ಜಾರಿಗೆ ಆದ ದಿನದಂದು ಬಾಬಸಾಹೇಬ್ ಅವರ ನಾಮ ಫಲಕಕ್ಕೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸಿದ್ದರು
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷರಾದ ಶರಣಪ್ಪ ಕಟ್ಟಿಮನಿ ಅವರು ಮಾತನಾಡಿದರು ಜನವರಿ 26, 1950 ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ ವಿಶ್ವದಲ್ಲಿರುವ ಎಲ್ಲಾ ರಾಷ್ಟ್ರಗಳಿಗಿಂತ ನಮ್ಮ ದೇಶದ ಸಂವಿಧಾನ ವಿಶಿಷ್ಟವಾಗಿದ್ದು, ಬೃಹತ್ ಸಂವಿಧಾನವಾಗಿದೆ ಎಂದು
ಮಹಾತ್ಮ ಗಾಂದಿಜೀ ಅವರ ಸಹಕಾರದಂತೆ ನಮ್ಮ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ವಿಶ್ವದ ಬೇರೆ ದೇಶಗಳ ಸಂವಿಧಾನಗಳ ಬಗ್ಗೆ ತಿಳಿದುಕೊಂಡು ಬೇರೆ ದೇಶಗಳಿಗಿಂತ ವಿಭಿನ್ನವಾಗಿ ಸಂವಿಧಾನವನ್ನು ರಚಿಸಿದ್ದಾರೆ. ಅವರು ರಚಿಸಿರುವ ನಮ್ಮ ಸಂವಿಧಾನದಲ್ಲಿ ದೇಶದ ಒಂದೇ ಜಾತಿ-ಜನಾಂಗಕ್ಕೆ ಮಾತ್ರ ಮೀಸಲಾಗದಂತೆ ಎಲ್ಲಾ ಧರ್ಮ, ಜಾತಿ-ಜನಾಂಗದವರಿಗೆ ಉದ್ಯೋಗಾವಕಾಶಗಳು, ಸೌಲಭ್ಯ ಹಾಗೂ ಸರ್ವಾಂಗೀಣ ಹಕ್ಕುಗಳು ಸಮಾನವಾಗಿರುವಂತೆ ಕಾನೂನು ರಚಿಸಿದ್ದಾರೆ ಎಂದರು.

ಎಲ್ಲಾ ಧರ್ಮ, ಜಾತಿ-ಜನಾಂಗದವರಿಗೆ ಸಮಾನವಾಗಿ ಉದ್ಯೋಗ, ಹಕ್ಕುಗಳು ಸೇರಿಂದಂತೆ ಮೀಸಲಾತಿ ಸೌಲಭ್ಯಗಳನ್ನು ಸಂವಿಧಾನದಲ್ಲಿ ನೀಡಲಾಗಿದೆ. ಈ ನಿಟ್ಟಿನಲ್ಲಿ ವಿದ್ಯಾವಂತರು, ಯುವಕರು ಡಾ.ಅಂಬೇಡ್ಕರ್ ಅವರು ರಚಿಸಿರುವ ನಮ್ಮ ಸಂವಿಧಾನದ ಮಹತ್ವ ಅರಿತುಕೊಂಡು ಸಂವಿಧಾನದಲ್ಲಿರುವ ನಾನಾ ಹಕ್ಕುಗಳನ್ನು ಸದುಪಯೋಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಸವರಾಜ ಬಂಕದಮನಿ, ಪ್ರಕಾಶ ಬಡಿಗೇರ್ ,ವಿರೇಶ ವ್ಯಾಕ್ರನಾಳ, ವಿಶ್ವ ಕುದರಿ ,ಹನುಮಂತ ತೇರಿಬಾವಿ, ಉಪಸ್ಥಿತರಿದ್ದರು..
ವರದಿ:- ಮಂಜುನಾಥ ಕುಂಬಾರ




