ಹಟ್ಟಿ ಚಿನ್ನದ ಗಣಿ ಪಟ್ಟಣ ಪಂಚಾಯತಿ ಚುನಾಯಿತ ಪ್ರತಿನಿಧಿಗಳು ಮತ್ತು ನಾಮನಿರ್ದೇಶೀತ ಸದಸ್ಯರು ಗೈರು
ಲಿಂಗಸ್ಗೂರು: ಹಟ್ಟಿ ಪಟ್ಟಣ ಪಂಚಾಯತಿಯಲ್ಲಿ ದೇಶಕ್ಕೆ ಸಂವಿಧಾನ ಬರೆದುಕೊಟ್ಟ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡುವಾಗ ಪಾಲ್ಗೊಂಡು ಗೌರವ ತೋರಿಸುವುದು ಬಿಟ್ಟು, ಜಯಂತಿಗೂ ನಮಗೂ ಸಂಬಂಧ ಇಲ್ಲ ಅನ್ನುವ ರೀತಿಯಲ್ಲಿ ಹಟ್ಟಿ ಪಟ್ಟಣ ಪಂಚಾಯತಿ ಚುಣಾಯಿತ ಪ್ರತಿನಿಧಿಗಳು ಇದ್ದಾರೆ.
ಪಟ್ಟಣ ಪಂಚಾಯಿತಿಯಲ್ಲಿ ಅನುದಾನ ಬರುತ್ತದೆ ಎಂದರೆ ಸಾಕು ಎಲ್ಲಿದ್ದರೂ ಹಾಜರಾಗುವ ಈ ಸದಸ್ಯರು,ದೇಶದ ಮಹಾನಾಯಕರ ಜಯಂತಿ ದಿನದಂದು ಗೈರಾಗುವುದು ಸರ್ವಸಾಮಾನ್ಯ ಇಂಥ ಚುನಾಯಿತ ಪ್ರತಿನಿಧಿಗಳಿದ್ದರೆ ನಮ್ಮ ದೇಶ ಉದ್ಧಾರವಾದ ಹಾಗೆ…?
ಇಡೀ ಭಾರತ ದೇಶವು ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಿಸಲೆಂದು ರಜಾ ಘೋಷಿಸಿದ್ದರು ಸರಕಾರಿ ಇಲಾಖೆಯ ಅಧಿಕಾರಿಗಳು ಸಹ ಇದಕ್ಕೆ ಹೊರತಾಗಿಲ್ಲ
ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಹಾಗೂ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಇಂಥ ಮಹಾ ನಾಯಕರ ಜಯಂತಿ ದಿನದಂದು ಜಯಂತಿ ಆಚರಿಸುವ ಸಂದರ್ಭದಲ್ಲಿ ಅದಕು ನನಗೂ ಸಂಬಂಧವಿಲ್ಲ ಅನ್ನುವ ರೀತಿಯಲ್ಲಿ ವರ್ತನೆ ಮಾಡುವ ಹಟ್ಟಿ ಪಟ್ಟಣ ಪಂಚಾಯತ್, ತಾಲೂಕಿನ ಗ್ರಾಮ ಪಂಚಾಯತ್, ಚುನಾಯಿತ ಪ್ರತಿನಿಧಿಗಳು, ಮತ್ತು ಸರಕಾರದ ವಿವಿಧ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದಲಿತ ಮುಖಂಡರಾದ ಯೋಗಪ್ಪ ದೊಡ್ಮನಿ, ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ
ಮಹಾ ನಾಯಕರ ಜಯಂತಿಗೆ ಗೈರಾಗುವ ಸದಸ್ಯರು ಮತ್ತು ಸರಕಾರಿ ಇಲಾಖೆಯ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಿದರೆ ಮುಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರೂ ಹಾಜರಿದ್ದು ಮಹಾ ನಾಯಕರಿಗೆ ಗೌರವ ಸಲ್ಲಿಸಲು ಮುಂದಾಗುತ್ತಾರೆ.
—ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ದಿನದಂದು ಗೈರಾದ ಸದಸ್ಯರ ವಿರುದ್ಧ ಮುಖ್ಯಮಂತ್ರಿಗಳು ಕಠಿಣ ಕ್ರಮ ಕೈಗೊಳ್ಳಬೇಕು : ಯೋಗಪ್ಪ ದೊಡ್ಮನಿ
ವರದಿ : ಶ್ರೀನಿವಾಸ ಮಧುಶ್ರೀ