ಚಾಮರಾಜನಗರ : ತಾಲ್ಲೂಕಿನ ಇರಸವಾಡಿ ಗ್ರಾಮದಲ್ಲಿ ಶನಿವಾರ ವಿಶ್ವರತ್ನ, ಭಾರತ ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ.ಬಿ ಆರ್ ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆಯನ್ನು ಡಾ.ಬಿ ಆರ್ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ ಆರ್ ಕೃಷ್ಣಮೂರ್ತಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಮುಖ್ಯ ಭಾಷಣಕಾರರಾದ ನಾಗರಾಜ್ ಮಾತನಾಡಿ ಅಂಬೇಡ್ಕರ್ ರವರ ಒಂದು ಜಾತಿಗೆ ಸೀಮಿತವಾದ ವ್ಯಕ್ತಿ ಅಲ್ಲಾ ದಯವಿಟ್ಟು ಅಂಬೇಡ್ಕರ್ ವಿಚಾರದರೆಗಳಬಗ್ಗೆ ತಿಳಿದುಕೊಳ್ಳಿ ಅವರಂತೆ ನೆಡೆದ ದಾರಿಯಲ್ಲಿ ನೆಡೀಬೇಕು ನಾವು ಅಂಬೇಡ್ಕರ್ ಅವರನ್ನು ದಲಿತ ನಾಯಕ ದಲಿತ ಸೂರ್ಯ ಎಂದು ಕರೀತೀವಿ ಆದರೆ ಅಂಬೇಡ್ಕರ್ ರವರು ಯಾವತ್ತು ನಾನು ದಲಿತರಿಗೆ ಎಂದು ಹೇಳಿಲ್ಲ ನಾವು ಮಾತ್ರ ಅಂಬೇಡ್ಕರ್ ನೆನಪು ಮಾಡ್ಕೊಳ್ಳದು ಬರಿ ಎರಡೆದಿನ ಅವರು ಸತ್ತಾಗ, ಅವರು ಹುಟ್ಟಿದಾಗ ಮಾತ್ರ ಯಾಕೆ ನಾವು ಅವರನ್ನು ಬರಿ ಪೂಜೆಗೆ ಇಟ್ಟಿದೀವಿ ಮಾದಲು ನಾವು ಅವರ ಆಸೆಯಂತೆ ಬೆಳೆಯಬೇಕು ಎಂದು ತಿಳಿಸಿದರು.
ಶಾಸಕರಾದ ಎ ಆರ್ ಕೃಷ್ಣಮೂರ್ತಿ ರವರ ಮಾತನಾಡಿ ಈ ದೇಶದಕೆ ಮಹಾನ್ ಗ್ರಂಥ ಸಂವಿಧಾನ ಕೊಟ್ಟವರು ಅಂಬೇಡ್ಕರ್ ರವರು ಅವರು ಕೊಟ್ಟ ಮತದಾನದ ಹಕ್ಕು ನಾನು ಶಾಸಕನಗಲು ಕಾರಣ ಎಂದರು
ಮಾಜಿ ಶಾಸಕ ಬಾಲರಾಜ್ ಮಾತಾಡಿ ದೇಶದ ಶಕ್ತಿ ಅಂಬೇಡ್ಕರ್ ಅವರ ಜಯಂತಿ ಆಚರಣೆ ದೇಶದಲ್ಲಿ ಅಲ್ಲದೆ ಬೇರೆ ದೇಶದಲ್ಲೂ ನೆಡೆಯುತ್ತಿದೆ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಸಂತ ಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ SSLC ಹಾಗೂ PUC ಮಕ್ಕಳಿಗೆ ಸನ್ಮಾನಿಸಲಾಯಿತು. ವಿಶೇಷವಾಗಿ ಪುಟ್ಟ ಮಕ್ಕಳು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಸಂವಿಧಾನ ಪೀಠಿಕೆ ಓದಿದರೂ ಈ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷರಾದ ಚಂದ್ರು, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಯೋಗೇಶ್, ಕಾಂಗ್ರೆಸ್ ಮುಖಂಡರಾದ ಕಿನಕಲ್ಲಿ ರಚಣ್ಣ,ಎಸ್ ಮಹಾದೇವಯ್ಯ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು, ಜೆ ಡಿ ಎಸ್ ನಾಯಕರಾದ ಬಿ ಪುಟ್ಟಸ್ವಾಮಿ, ನಿವೃತ್ತ ಅರಣ್ಯ ಅಧಿಕಾರಿಗಳದ ಶ್ರೀನಿವಾಸ್, ನಿವೃತ್ತಿ ಪ್ರಧ್ಯಾಪಕರಾದ ರಾಜೇಂದ್ರ, ನಿವೃತ್ತಿ ಪ್ರಧಾನ ವ್ಯವಸ್ಥಾಪಕರು ಓ ಏನ್ ಜಿ ಸಿ ಮೈಸೂರು ಶ್ರೀನಿವಾಸ್, ಆಂಗ್ಲ ಉಪನ್ಯಾಸಕರು ನಾಗೇಶ್, ಗುತ್ತಿಗೆದರರಾದ ಓಲೆ ಮಹದೇವ್, ಆರಕ್ಷಕ ವೃತ್ತ ನೀರಕ್ಷಕರಾದ ಶ್ರೀಕಾಂತ್,ಇರಸವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಸಂತ್ ಕುಮಾರ್ ಗಂಗವಾಡಿ, ಸದ್ಯಸರುಗಳಾದ ಶ್ರೀಮತಿ ಚಿಕ್ಕತಾಯಮ್ಮ, ಗೋವಿಂದ ಶೆಟ್ಟಿ, ರಂಗಸ್ವಾಮಿ, ಶ್ರೀಮತಿ ಮಮತನಾಗೇಶ್, ಶ್ರೀಮತಿ ಚಿನ್ನಮ್ಮ ಹಾಗೂ ಯಜಮಾನರುಗಳಾದ ಶಿವಕುಮಾರ್, ಉಮೇಶ್, ಬಸವರಾಜ್, ಮುಖಂಡರುಗಳಾದ ಜನಾರ್ಧನ್, ನಾಗರಾಜ್ ಎಸ್, ನಂಜುಂಡಸ್ವಾಮಿ, ಶಿವಪ್ರಕಾಶ್, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷರಾದ ಸಿಂದೇಶ್, ಉಪಾಧ್ಯಕ್ಷರಾದ ಶಿವಕುಮಾರ್, ಕಾರ್ಯದರ್ಶಿ ಮಹದೇವಸ್ವಾಮಿ,ಪೃಥ್ವಿರಾಜ್ ಹಾಗೂ ಯುವಕರ ವಿದ್ಯಾರ್ಥಿಗಳು ಮಹಿಳೆಯರು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ