ಯಳಂದೂರು: ತಾಲ್ಲೋಕಿನ ವೈ ಕೆ ಮೋಳೆ ಗ್ರಾಮದಲ್ಲಿ ಭಾನುವಾರ ವಿಶ್ವಮಾನವ, ವಿಶ್ವರತ್ನ, ಭಾರತ ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ.ಬಿ ಆರ್ ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆಯನ್ನು ಡಾ.ಬಿ ಆರ್ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಸೋಮವಾರ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಗ್ರಾಮದ ಮುಖಂಡರು .ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಡಾ.ಬಿ ಆರ್ ಅಂಬೇಡ್ಕರ್ ಭಾವ ಚಿತ್ರವನ್ನು ಗ್ರಾಮದ ಬೀದಿಗಳಿಗೆ ಮೆರವಣಿಗೆಯ ಮೂಲಕ ಸಾಗಿ ಜಯಂತಿಯನ್ನಯ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮೆರವಣಿಗೆಯಲ್ಲಿ ಎಲ್ಲಾರೂ ಬಿಳಿ ಶರ್ಟ್ ಹಾಗೂ ನೀಲಿ ಶಾಲು ಧರಿಸಿ
ಅಂಬೇಡ್ಕರ್ ಘೋಷಣೆಯನ್ನು ಕೂಗಿದರು.
ಗ್ರಾಮವು ವಿವಿಧ ಬಗೆಯ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿತು.
ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸದರು
ವಿಶೇಷವಾಗಿ ಯುವತಿಯರು ಮಹಿಳೆಯರು ಕುಣಿದು ಹಬ್ಬಕೆ ಮೆರಗು ತಂದರು
ಈ ಸಂದರ್ಭದಲ್ಲಿ ಶಿವು,ರಾಕಿ, ವಿಶ್ವ, ಸಚಿನ್,ಪ್ರಸಾದ್, ಅಭಿ, ಕಿರಣ, ಸಿಪಾಯಿ, ಹರ್ಷ,ವೆಂಕಟೇಶ್, ಅಗ್ನಿ, ಗ್ರಾಮದ ಯಜಮಾನರುಗಳು ಯುವಕರ ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ