ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ ಸಮಿತಿ ಹುಕ್ಕೇರಿ

Bharath Vaibhav
ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ ಸಮಿತಿ ಹುಕ್ಕೇರಿ
WhatsApp Group Join Now
Telegram Group Join Now

ಹುಕ್ಕೇರಿ : ಪಟ್ಟಣದ ಕೋರ್ಟ್ ಸರ್ಕಲ್ ಬಳಿ ಹಳೆ ತಶಿಲ್ದಾರ್ ಕಚೇರಿ ಮುಂಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಸ್ಮಾರಕವನ್ನಾಗಿ ರೂಪಿಸುವ ಮಹತ್ವಾಕಾಂಕ್ಷಿಯೊಂದಿಗೆ ಇದರ ಮೊದಲ ಹೆಜ್ಜೆಯಾಗಿ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ( ಮೂರ್ತಿ) ಯನ್ನು ಪ್ರತಿಷ್ಠಾಪಿಸಲಾಗಿದೆ.

ಇದೇ ತಿಂಗಳು ಜನೇವರಿ 25 ರಂದು ಈ ಪುತ್ತಳಿ ಅನಾವರಣ ( ಉದ್ಘಾಟನೆ ) ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಐತಿಹಾಸಿಕವಾಗಿ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಅಂದು ಬೆಳೆಗ್ಗೆ 10 ರಿಂದ ಸಂಜೆ 5 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾಜಿ ಸಂಸದ ರಮೇಶ್ ಕತ್ತಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಲಾಗುವುದು. ಈ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತ ಮತ್ತು ಅಚ್ಚುಕಟ್ಟಾಗಿ ಆಯೋಜಿಸಲು ರೂಪರೇಷೆಗಳನ್ನು ಸಿದ್ಧಪಡಿಸಲಾಗಿದೆ.

ಗೃಹ ಸಚಿವ ಜಿ ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಡಾ. ಎಚ್. ಸಿ. ಮಹದೇವಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ, ಶಾಸಕ ನಿಖಿಲ್ ಕತ್ತಿ ಹಾಗೂ ಬೌದ್ಧ ಬಿಕ್ಕುಗಳಾದ ಭಂತೇಜಿ, ಮೈಸೂರು ಜ್ಞಾನಪ್ರಕಾಶ ಸ್ವಾಮೀಜಿ ಸೇರಿದಂತೆ ಮತ್ತಿತರರನ್ನು ಆಹ್ವಾನಿಸಲಾಗುವುದು.

ಅಡ್ವಿಸಿದ್ದೇಶ್ವರ ಮಠದಿಂದ ಕೋರ್ಟ್ ಸರ್ಕಲ್ ವರೆಗೆ ಬೈಕ್ ರಾಲಿ, ಖ್ಯಾತ ಅಂಬೇಡ್ಕರ್ ವಿಚಾರವಾದಿಗಳಿಂದ ವಿಶೇಷ ಉಪನ್ಯಾಸ, ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಸ್ವಾಗತ ಕೋರುವ ಕಮಾನ್ ಮತ್ತು ಬ್ಯಾನರ್ಗಳ ಅಡವಳಿಕೆ , ಪ್ರಮುಖ ಬೀದಿ ಮತ್ತು ವೃತ್ತಗಳಲ್ಲಿ ಅಂಬೇಡ್ಕರ್ ಜೀವನ ದಾರಿತ ಗೋಡೆ ಬರಹಗಳನ್ನು ಬರೆಯಿಸುವುದು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸುವುದು ಸೇರಿದಂತೆ ಇಡೀ ಪಟ್ಟಣವನ್ನು ನೀಲಿಮಯಗೊಳಿಸಲು ತೀರ್ಮಾನಿಸಲಾಗಿದೆ.

ತಾಲೂಕಾ ಸೇರಿದಂತೆ ಇಲ್ಲಿ ವಿವಿಧ ಭಾಗಗಳಿಂದ ಸಾವಿರಾರು ದಲಿತ ಜನರು ಅಂಬೇಡ್ಕರ್ ಅವರ ಪುತ್ತಳಿ ಅನಾವರಣದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳ್ಳಿಸಬೇಕು.

ಈ ಸಂದರ್ಭದಲ್ಲಿ

ಕೆ. ಡಿ. ಪಿ. ಜಿಲ್ಲಾ ಸಮಿತಿ ಸದಸ್ಯ ಬಸವರಾಜ ಕೋಳಿ , ಮುಖಂಡರಾದ ಉದಯ್ ಹುಕ್ಕೇರಿ, ಮಲ್ಲಿಕಾರ್ಜುನ್ ರಾಶಿಂಗೆ, ದಿಲೀಪ್ ಹೊಸಮನಿ, ರಮೇಶ್ ಹುಂಜಿ ಸದಾಶಿವ್ ಕಾಂಬಳೆ, ಅಕ್ಷಯ್ ವೀರಮುಖ ರವಿ ಕಾಂಬಳೆ, ಕೆಂಪಣ್ಣ ಶಿರಹಟ್ಟಿ , ಶ್ರೀಮತಿ ಸರೋಜಾ ಲ ಕಾಂಬಳೆ, ಕೆ ವೆಂಕಟೇಶ್, ರಾಜೇಂದ್ರ ಮೊಶಿ, ಅಪ್ಪಣ್ಣ ಖಾತೆದಾರ್, ಶಂಕರ ತಿಪ್ಪನಾಯಿಕ, ಕುಮಾರ್ ತಳವಾರ್, ಪ್ರಕಾಶ್ ಮೈಲಾಖೆ, ಶಿವು ಕಣಗಲಿ, ಮುತ್ತು ಕಾಂಬಳೆ, ರೋಹಿತ್ ತಳವಾರ್, ಶಿವು ಮಾಳಗೆ, ರಾಜು ಮುಥಾ, ಕಾಶಪ್ಪ ಹರಿಜನ, ಶಾಂತಾ ಹೇಳವಿ, ಸತೀಶ್ ದಿನ್ನಿಮನಿ, ನಾಗೇಶ್ ವಾಳವಿ, ಚಿದಾನಂದ್ ಹಿರೇಕೆಂಚೆನ್ನವ್ವರ, ಸಂಜು ಶಿರಗಾಂವಕರ, ಮಾರುತಿ ಚಿಕ್ಕೋಡಿ, ಮತ್ತು ವಿಜಯನ್ನವ್ವರ ಉಪಸ್ಥಿತರಿದ್ದರು.

 ವರದಿ: ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!