ಕಾಳಗಿ:ಡಾ ಬಾಬಾ ಸಾಹೇಬ ಅಂಬೇಡ್ಕರ ರವರ 134ನೇ ಜಯಂತೋತ್ಸವದ ಅಂಗವಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಳಗಿಯಲ್ಲಿ ಸೋಮವಾರ ನಡೆದ ಡಾ ಬಿ ಆರ್ ಅಂಬೇಡ್ಕರ್ ರವರ ಜೀವನ ಮತ್ತು ಸಂದೇಶ ಕುರಿತು ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು, ಮೊದಲಿಗೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಿಂದ ಮತ್ತು ಜಯಂತಿ ಸಮಿತಿ ಪದಾಧಿಕಾರಿಗಳಿಂದ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಲಾಯಿತು.
ನಂತರ ಜಯಂತಿ ಸಮಿತಿ ಅಧ್ಯಕ್ಷ ಗಂಗಾಧರ್ ಮಾಡಬೂಳ ಮಾತನಾಡಿ, ತಮ್ಮ ಅವಿರತ ಹೋರಾಟದಿಂದ ಈ ಹಿಂದಿನ ಸಮಾಜ ಸುಧಾರಕರು ಯಾರು ಸಾಧಿಸದಿದ್ದಂಥ ಮಹಾ ಕ್ರಾಂತಿಯನ್ನು ಎಸಗಿ ಹೊಸ ಇತಿಹಾಸವನ್ನೇ ಸೃಷ್ಟಿಸಿದರು,ಸಾಮಾಜಿಕ ಆರ್ಥಿಕ ಸಂಕಷ್ಟಗಳನ್ನು ಮೀರಿ ನಿಂತು ಅನೇಕ ಪ್ರಥಮಗಳನ್ನು ಅವರು ಸಾಧಿಸಿದರು, ಅಂಬೇಡ್ಕರ್ ಈ ದೇಶದ ಶಕ್ತಿ, ಸರ್ವ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರು ಎಂದರು ,ಈ ವೇಳೆ ಸುಮಾರು 46 ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಸಂತೋಷ ಎಮ್ ನಾರನಳ, ಉಪಾಧ್ಯಕ್ಷರು ಅಂಬರೀಶ್ ಮೊಘಾ, ಕಾರ್ಯಧ್ಯಕ್ಷ ಅಮರ ಗೊಟೂರ್, ಕೋಶಧ್ಯಕ್ಷ ಕಪಿಲ್ ಎಸ್ ದೊಡ್ಡಮನಿ,ಹಣಮಂತ ಕುಡಹಳ್ಳಿ,ಅವಿನಾಶ್ ಕೊಡದೂರ್, ಮಂಜುನಾಥ ದಂಡಿನ, ಅನೇಕರು ಇದ್ದರು.
ವರದಿ : ಹಣಮಂತ ಕುಡಹಳ್ಳಿ