ಸರ್ಕಾರಿ ಅರೆ ಸರ್ಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘದ ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನಾಚರಣೆ ಅಂಗವಾಗಿ ವೃದ್ಧಾಶ್ರಮದ ವೃದ್ಧರಿಗೆ ಅನ್ನಸಂತರ್ಪಣೆ
ಬೆಂಗಳೂರು : ಈ ಪವಿತ್ರ ದಿನದಂದು ಭಾರತಾದ್ಯಂತ ಕೋಟ್ಯಂತರ ಜನರು ಸಮಗ್ರ ಸಮಾಜವನ್ನು ನಿರ್ಮಿಸುವ ಬದ್ಧತೆಯನ್ನು ಪ್ರತಿ ಬಿಂಬಿಸುವ ಮೂಲಕ ಅವರ ಪರಂಪರೆಗೆ ಅಂದರೆ ಭಾರತ ಸಂವಿಧಾನದ ಶಿಲ್ಪಿ ಭಾರತ ರತ್ನ ಬಾಬಾಸಾಹೇಬ್ ಅಂಬೇಡ್ಕರ್ ಅವರು ಎಂದು ರಾಜ್ಯ ಸರ್ಕಾರಿ ಅರೆ ಸರ್ಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಕರುಣ ಶೀಲ ಮೊರೆ ಅಭಿಪ್ರಾಯಪಟ್ಟರು.
ಪೂಜ್ಯ ಶ್ರೀ ನಾಗರತ್ನ ಭಂತೇಜಿ ರವರ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.
ಯಲಹಂಕ ಕ್ಷೇತ್ರದ ಅಧ್ಯಕ್ಷ ಅಶೋಕ್ ಕಲಾದಗಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಉಸ್ತುವಾರಿ ಸುಧಾಕರ್ ಎಸ್ ಜಡಗಿ ಅವರ ನೇತೃತ್ವದಲ್ಲಿ ಯಲಹಂಕ ಕಚೇರಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ ಹಾಗೂ ದಿನಾಚರಣೆ ಅಂಗವಾಗಿ ವೃದ್ಧಾಶ್ರಮದ ವೃದ್ಧರಿಗೆ ಅನ್ನಸಂತರ್ಪಣೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಚನೆ ಮಾಡಿ ಮೇಣದ ಬತ್ತಿಯನ್ನು ಮೂಲಕ ಚಾಲನೆ ನೀಡಿ ಮೊರೆ ಮಾತನಾಡಿದರು.
ಈ ಸಂದರ್ಭದಲ್ಲಿ ನಾಗೇಂದ್ರ ಎಸ್, ನಾಗರಾಜ್ ಆರ್, ಶ್ರೀಧರ್ ಕೊಟ್ರೆ, ಮಾರುತಿ ಗಾವ್ಕರ್, ವಕೀಲರಾದ ಪಾಂಡುರಂಗ, ಅನಿಲ್ ಕುಮಾರ್, ಅಂಜನಮೂರ್ತಿ ಎಸ್. ಎಸ್, ಸದಾಶಿವ ಕಾಂಬಳೆ ಸೇರಿದಂತೆ ಸಂಘದ ರಾಜ್ಯ, ಜಿಲ್ಲಾ ಮತ್ತು ತಾಲೂಕ ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.
ವರದಿ : ಅಯ್ಯಣ್ಣ ಮಾಸ್ಟರ್




