Ad imageAd image

ವಿಷ್ಣು ರಥಕ್ಕೆ ಭವ್ಯ ಸ್ವಾಗತ ಕೋರಿದ.! ಕಾರುಣ್ಯ ಆಶ್ರಮದ ಡಾ. ಚನ್ನಬಸವ ಸ್ವಾಮಿ ಹಿರೇಮಠ.!

Bharath Vaibhav
ವಿಷ್ಣು ರಥಕ್ಕೆ ಭವ್ಯ ಸ್ವಾಗತ ಕೋರಿದ.! ಕಾರುಣ್ಯ ಆಶ್ರಮದ ಡಾ. ಚನ್ನಬಸವ ಸ್ವಾಮಿ ಹಿರೇಮಠ.!
WhatsApp Group Join Now
Telegram Group Join Now

ಸಿಂಧನೂರು : -ಕನ್ನಡ ನಾಡು ನುಡಿ ಜಲ ಭಾಷೆ ಉಳಿಸಿ ಬೆಳೆಸಿ ಎಂಬ ಸಾರುವ ವಿಷ್ಣು ರಥಕ್ಕೆ.! ಭವ್ಯ ಸ್ವಾಗತ ಕೋರಿದ ಕಾರುಣ್ಯ ಆಶ್ರಮದ ಆಡಳಿತದ ಅಧಿಕಾರಿ ಡಾ. ಚನ್ನಬಸವ ಸ್ವಾಮಿ ಹಿರೇಮಠ ಬೆಂಗಳೂರಿನಿಂದ ಬೀದರ್ ರವರಿಗೆ ಕನ್ನಡ ನೆಲ ಜಲ ಭಾಷೆ ಉಳಿಸಿ ಬೆಳೆಸಿ ಸಂಚಾರ ನಿಯಮಗಳನ್ನು ಪಾಲಿಸಿ ಎನ್ನುವ ಧ್ಯಯ ವಾಕ್ಯದೊಂದಿಗೆ ಸಾಗುತ್ತಿದ್ದ ವಿಷ್ಣು ರಥದ ವಿಶೇಷ ಜಾಗೃತಿ ವಾಹನ ಕಾರುಣ್ಯ ಆಶ್ರಮಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಕಾರುಣ್ಯಶ್ರುಮವು ವಿಶೇಷ ಪೂಜೆಯೊಂದಿಗೆ ಬರಮಾಡಿಕೊಂಡು ವಿಷ್ಣು ರಥದ ಸಾರಥಿ ಯಾದ ಜೂನಿಯರ್ ವಿಷ್ಣುವರ್ಧನ್ ನಾಗಬಸಯ್ಯ ಮಲ್ಲಯ್ಯ ಮಳಲಿ ಮಠ. ಅವರಿಗೆ ಕಾರುಣ್ಯ ಶ್ರಮದ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು.

ನಂತರ ಅವರು ಮಾತನಾಡಿ ನಮ್ಮ ಡಾ. ವಿಷ್ಣುವರ್ಧನ್ ಅವರ ಸೇವೆ ಕನ್ನಡ ನಾಡಿಗೆ ಅಪಾರವಾದ ಪ್ರೀತಿ ಕರುಣೆ ಮಮತೆ ಸ್ನೇಹ ಎನ್ನುವ ಈ ಪದಗಳಿಗೆ ವಿಶೇಷ ಅರ್ಥ ಕಲ್ಪಿಸಿ ಕೊಟ್ಟಿರುವಂತ ಕೀರ್ತಿ ದಿವಂಗತ ಡಾ. ವಿಷ್ಣುವರ್ಧನ್ ಅವರಿಗೆ ಸಲ್ಲುತ್ತದೆ ಅವರು ಕನ್ನಡಪರ ಹೋರಾಟ ಕನ್ನಡ ನೆಲ ಜಲ ಭಾಷೆಗಾಗಿ ನಟಿಸಿದ ಚಿತ್ರಗಳು ಇಡೀ ವಿಶ್ವದಲ್ಲಿ ಜನರ ಮನಸ್ಸಿನಲ್ಲಿ ಉಳಿದುಕೊಂಡಿದೆ ಇಂತಹ ಹಲವಾರು ಅವರ ಜೀವನದ ಆದರ್ಶವನ್ನು ನಾನು ಮೈಗೂಡಿಸಿಕೊಂಡು ನಾನು ಅವರ ಅಭಿಮಾನಿಯಾಗಿ ಅವರ ಕಂಡ ಕನಸನ್ನು ವಿಷ್ಣು ರಥದ ಮೂಲಕ ಈಡೇಸುತ್ತಿದ್ದೇನೆ.

ಈ ವಿಷ್ಣು ರಥದ ಉದ್ದೇಶ ಕನ್ನಡವನ್ನು ಉಳಿಸಿ ಹಾಗೂ ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿ ಅಪಘಾತಕ್ಕೆ ಅವಕಾಶ ಕೊಡಬೇಡಿ ಎಂದು ಇಂಥ ಹಲವಾರು ಜಾಗೃತಿಗಳ ಮೂಲಕ ಬೆಂಗಳೂರಿನಿಂದ ಬೀದರ ವರೆಗೆ ವಿಷ್ಣು ರಥದ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತೇನೆ

ಇಂದು ಕರಣೀಯ ಕುಟುಂಬವಾದ ಕಾರುಣ್ಯ ಆಶ್ರಮಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ವೃದ್ಧರಿಗೂ, ಅನಾಥರಿಗೂ ಬುದ್ಧಿಮಾಂದ್ಯರಿಗೂ ತಂದೆ ತಾಯಿ ಸ್ವರೂಪರಾದ ಡಾ. ಚನ್ನಬಸವಸ್ವಾಮಿ ಹಿರೇಮಠ ಅವರ ಧರ್ಮ ಪತ್ನಿ ಸುಜಾತ ಅಮ್ಮನವರು ಹಾಗೂ ಆಶ್ರಮದ ಸಿಬ್ಬಂದಿಗಳು ನಮ್ಮ ವಿಷ್ಣರಥವನ್ನು ಅತ್ಯಂತ ಗೌರವ ದಿಂದ ಕೊಂಡರು ಇಂಥ ಕರುಣೆಯುಳ್ಳ ದಂಪತಿಗಳಿಗೆ ಸುಖ ಶಾಂತಿ ನೀಡಲಿ ಎಂದು ಹರಿಸಿದರು

ಈ ಸಂದರ್ಭದಲ್ಲಿ. ಬಸವರಾಜ್ ಶಿಕ್ಷಕರು, ಅವಿನಾಶ್ ದೇಶಪಾಂಡೆ, ವೀರಭದ್ರಗೌಡ ಗಿಣಿವಾರ, ಆರ್ ಅಮರೇಶ್ ಗುರುಗುಂಟ, ಹಾಗೂ ಆಶ್ರಮದ ಸಿಬ್ಬಂದಿಗಳು ಇದ್ದರು

ವರದಿ:-   ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!