ಚಿಂಚೋಳಿ: ಚಿಂಚೋಳಿ ಪಟ್ಟಣದ ಚಂದಾಪುರದ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕ ವೀರಶೈವ ಲಿಂಗಾಯತ್ ಸಮಾಜದ ವತಿಯಿಂದ ಕಲ್ಯಾಣ ಕರ್ನಾಟಕ ನಡೆದಾಡುವ ದೇವರು,ಶಿವಾಚಾರ್ಯ ರತ್ನ, ಧರ್ಮ ರತ್ನ, ಸದ್ಧರ್ಮ ಶಿಖಾಮಣಿ,ಪೂಜ್ಯ ಶ್ರೀ ಷ.ಬ್ರ.ಡಾ.ಚೆನ್ನವೀರ ಶಿವಾಚಾರ್ಯರು ಸಂಸ್ಥಾನ ಮಠ ಹಾರಕೂಡ ಚಿಂಚೋಳಿ ಅವರ 63ನೇ ಜನ್ಮದಿನೋತ್ಸವದ ಅಂಗವಾಗಿ ಆಸ್ಪತ್ರೆಯ ರೋಗಿಗಳಿಗೆ ಚಿಂಚೋಳಿಯ ಸಿಪಿಐ ಕಪಿಲದೇವ ಅವರು ಹಣ್ಣು ಹಂಪಲ ವಿತರಣೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಅಬ್ದುಲ್ ಹಜೀಜ್, ವೀರಶೈವ ಲಿಂಗಾಯತ ಸಮಾಜದ ತಾಲೂಕ ಅಧ್ಯಕ್ಷರಾದ ಸಂಜೀವಕುಮಾರ್ ಪಾಟೀಲ್, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಜಗದೀಶ್ ಸಜ್ಜನ್ ಕಲ್ಲೂರ, ರೇವಣಸಿದ್ದಪ್ಪ ದಾದಾಪುರ್, ವಿಜಯಕುಮಾರ್ ಬಳಕೆರಿ, ಚಂದ್ರಶೇಖರ್ ಪಾರ, ವೀರೇಶ್ ದೇಸಾಯಿ, ಶಿವಶರಣಪ್ಪ ಡೈಂಗಿ, ಪವನ ಪಾಟೀಲ ಹುಡದಳ್ಳಿ, ಮಲ್ಲಿನಾಥ ಮೇಲಗಿರಿ, ಚೇತನ್ ಹುಡದಳ್ಳಿ, ಇದ್ದರು.
ವರದಿ: ಸುನಿಲ್ ಸಲಗರ




