ಬೆಂಗಳೂರು : ಡಾ. ಫ. ಗು. ಹಳಕಟ್ಟಿ ಅವರು ನಸಸಿ ಹೋದ ವಚನ ಸಾಹಿತ್ಯ ಹುಡುಕಾಡಿ ವಚನ ಸಂಶೋಧನಾ ಮಾಡಿ ಪಿತಾಮಹ ಎಂದೇ ಹೆಸರುವಾಸಿಯಾದ ಹಳಕಟ್ಟಿ ಅವರ ಶ್ರಮ ಅಪಾರ ಎಂದರೆ ತಪ್ಪಾಗಲಾರದು ಎಂದು ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಶಿವರಾಜ್ ಅಂಡಗಿ ತೆಂಗಳಿ ಹೇಳಿದರು.
ಅವರು ನಗರದ ಸುವರ್ಣ ಕನ್ನಡ ಭವನದ ತಮ್ಮ ಕಚೇರಿಯಲ್ಲಿ ವಚನ ಸಾಹಿತ್ಯ ಹೆಚ್ಚಿಸಿದ ಕೀರ್ತಿ ಡಾ.ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ ಅವರ ಪರಿಶ್ರಮದಿಂದ ಬಸವಾದಿ ಶರಣರ ೧೨ನೇ ಶತಮಾನದ ವಚನ ಸಾಹಿತ್ಯವನ್ನು ಸಂಗ್ರಹಿಸಿ ಸಮಾಜಕ್ಕೆ ಸುರಕ್ಷಿಸಿದ ಪರಿಣಾಮ ಪೂರ್ವಜನ್ಮ ಪಡೆದಿದೆ.
ಡಾ. ಫ. ಗು. ಹಳಕಟ್ಟಿ ಅವರ ಹುಟ್ಟು ಹಬ್ಬದ ಅಂಗವಾಗಿ ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯ ಕುಮಾರ್ ಪಾಟೀಲ್ ತೇಗಲತಿಪ್ಪಿ ಅವರ ನೇತೃತ್ವದಲ್ಲಿ.
ಜಿಲ್ಲೆಯ ಶರಣ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಮಹನಿಯರಿಗೆ ಮತ್ತು ಅಮೇರಿಕಾದ ನಾಸಾ ಮತ್ತು ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಇತ್ತೀಚೆಗೆ ನಡೆದ ಬಾಹ್ಯಾಕಾಶ “ವಸಾಹತ” ಸ್ಪರ್ಧೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ಪ್ರಥಮ ಸ್ಥಾನ ಪಡೆದ ೧೧ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಡಾ. ಫ. ಗು. ಹಳಕಟ್ಟಿ ಅವರು ರಚಿಸಿದ ಪುಸ್ತಕ ನೀಡಿ ಗೌರವಿಸಲಾಯಿತು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಶಿವರಾಜ್ ಅಂಡಗಿ ತೆಂಗಳಿ ಅವರು ಬಿ ವಿ ನ್ಯೂಸ್-5 ಜೊತೆಗೆ ಮಾತನಾಡಿ ಹರ್ಷ ವ್ಯಕ್ತಪಡಿಸಿದರು.
ವರದಿ : ಅಯ್ಯಣ್ಣ ಮಾಸ್ಟರ್




