Ad imageAd image

ಸಾಹಿತ್ಯ -ಸಂಸ್ಕೃತಿಯಿಂದ ಸಮಾಜ ಸುಧಾರಣೆ : ಶಿಕ್ಷಣ ತಜ್ಞೆ ಡಾ.ಗೀತಾ ರಾಮಾನುಜಂ

Bharath Vaibhav
WhatsApp Group Join Now
Telegram Group Join Now

ಬೆಂಗಳೂರು: ಪೀಣ್ಯ ದಾಸರಹಳ್ಳಿ ಸಾಹಿತ್ಯ -ಸಂಸ್ಕೃತಿ ಸಮಾಜದ ಬದಲಾವಣೆಯ ಪ್ರಮುಖ ಕಣ್ಣಗಳು, ಜಾತಿ,ಧರ್ಮಗಳೆನ್ನಲ್ಲಾ ಬಿಟ್ಟು ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಆಧುನಿಕ ಸಮಾಜವನ್ನು ಸುಧಾರಣೆ ಮಾಡಬೇಕಿದೆ ಎಂದು ಶಿಕ್ಷಣ ತಜ್ಞೆ, ಚಿಂತಕಿ ಡಾ.ಗೀತಾ ರಾಮಾನುಜಂ ಅಭಿಪ್ರಾಯಪಟ್ಟರು. ಅವರು ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಬೆಂಗಳೂರಿನ ನಯನ ಸಭಾಂಗಣದಲ್ಲಿ ದತ್ತಿದಾನಿ ಸಾಹಿತಿ ಮತ್ತು ಉದ್ಯಮಿ ಶಶಿಕಾಂತ್ ರಾವ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ‘ಪುನೀತ್ ರಾಜಕುಮಾರ್ ಸಂಸ್ಕೃತಿ ಮತ್ತು ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾ’ನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಇವತ್ತು ಜಾತಿ ಮತ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಚುನಾವಣೆಗಳು, ಧರ್ಮ ಭಾಷೆ ಸಂಸ್ಕೃತಿಯನ್ನು ಮರೆತು ಸಮಾಜದಲ್ಲಿ ಸ್ವಾರ್ಥವೇ ತುಂಬಿ ತುಳುಕುತ್ತಿದೆ. ಮನುಷ್ಯತ್ವ ಉಳಿಯಬೇಕಾದರೆ ಪುನೀತ್ ರಾಜಕುಮಾರ್ ಇದ್ದ ಹಾಗೆ ಇದ್ದು ದೇಹವಿಲ್ಲದೆಯು , ಹೆಸರು ಉಸಿರು ಹಚ್ಚಹಸಿರಾಗಿರುವಂತೆ ಬದುಕಬೇಕೆಂದರು.

ಡಾ.ಸಿಸಿರಾ ಮಹಾತ್ಮರ ಹೆಸರಲ್ಲಿ ಒಂದು ಒಳ್ಳೆಯ ಸಂಸ್ಥೆ ಕಟ್ಟಿ ಸಾರ್ಥಕ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದು ಇಂದಿನ ಸಮಾಜಕ್ಕೆ ವ್ಯಕ್ತಿ ಮತ್ತು ಸಂಸ್ಥೆ ಮಾರ್ಗದರ್ಶನವಾಗಿದೆ ಎಂದು ಶ್ಲಾಘಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಸಹಕಾರ ಮಹಾಮಂಡಳದ ನಿಬಂಧಕರು, ಕಾರ್ಯದರ್ಶಿಗಳಾದ ಲಕ್ಷ್ಮೀಪತಯ್ಯ ಅವರು ಮಾತನಾಡಿ ಇಂದಿನ ಕುಟುಂಬ ವ್ಯವಸ್ಥೆಯಲ್ಲಿ ವಿದ್ಯೆ, ಆರೋಗ್ಯ, ಉದ್ಯೋಗ ‌ಸಂಸ್ಕಾರವಂತ ಜನರ ನಿರ್ಮಾಣ ಮಾಡಲು ನಾವೆಲ್ಲ ಕಂಕಣಬದ್ದರಾದಾಗ ಮಾತ್ರ ಗುರು, ಗುರಿಯಿಂದ ಸತ್ಪ್ರಜೆಗಳಾಗಿಸಲು ಸಾಧ್ಯ ಹಾಗೆಯೇ ನಾವೆಲ್ಲ ಸಾಂಸ್ಕೃತಿಕ ಸಮಾಜ ನಿರ್ಮಾಣ ಮಾಡಬೇಕಿದೆ ಸಾಮಾನ್ಯ ಕಲಾವಿದರನ್ನು ಬೆಳಸಬೇಕಿದೆ , ಹಳ್ಳಿ ಪ್ರತಿಭೆಗಳನ್ನು ಮುಂದೆಲೆಗೆ ತಂದು ಪ್ರೋತ್ಸಾಹ ನೀಡುತ್ತಿರುವ ಸಮಾಜ ಸೇವಕರಾದ‌ ಶಶಿಕಾಂತರಾವ್, ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ನ ಸೇವೆಗೆ ಧನ್ಯವಾದಗಳನ್ನು ಅರ್ಪಿಸಿದರು.

ಹೊಸ ಕವಿಗಳಿಗೆ, ಕಲಾವಿದರಿಗೆ ಸಹಕಾರ ನೀಡಿ ಪ್ರೋತ್ಸಾಹ ನೀಡಿ ಬೆಂಬಲವಾಗಬೇಕು
ಅಪ್ರಿಯವಾದುದ್ದನ್ನು ಪ್ರಿಯವಾಗಿ ಹೇಳುವುದನ್ನು ಬಿಟ್ಟು ಸತ್ಯವನ್ನು ಕವಿತೆ ಸಾಹಿತ್ಯ ನಿರಂತರವಾಗಿ ಕಟ್ಟಿಕೊಡಬೇಕೆಂದು ಪ್ರಶಸ್ತಿ ಪುರಸ್ಕೃತರ ಪರವಾಗಿ ಗಾಯಕ ಕಂಟನಕುಂಟೆ ಅಶ್ವತ್ಥ್ ನಾರಾಯಣ ಮತ್ತು ಸದಾಶಿವ ಸಂಕಲ್ಪ‌, ಮಧು ಕಾರಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.‌ವಿಶೇಷ‌ ಆಹ್ವಾನಿತರಾಗಿ ಹಳ್ಳಿ ಜನಪದ ಸಂಘದ ಹೊಸಹಳ್ಳಿ ವಾಸುದೇವ್ ತತ್ವಪದ ಗೀತೆ ಹಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದತ್ತಿದಾನಿ ಸಾಹಿತಿ ಶಶಿಕಾಂತ್ ರಾವ್ ಅವರು ಸಮಾಜದಲ್ಲಿ ಸಂಪಾದಿಸಿದ್ದನ್ನು ಸಮಾಜಕ್ಕೆ ಹಿಂದಿರುಗಿಸುವ ಹೊಣೆ ಈ‌ ಮನುಷ್ಯ ಸಮಾಜದ ಕೆಲಸವಾಗಬೇಕು ಆವಾಗ ಮಾತ್ರ ಈ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ ಎಂದರಲ್ಲದೆ ಬೆಂಗಳೂರಿನ ಈ ಜಂಜಡದ ಬದುಕಿನಲ್ಲಿ ಪ್ರೀತಿ ಪ್ರೇಮ ಸ್ನೇಹ ಇರಲಿ ದ್ವೇಷ ಯಾರಲ್ಲಿಯೂ ಮೂಡಬಾರದೆಂದರು.

ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ರಾಮಲಿಂಗೇಶ್ವರ(ಸಿಸಿರಾ) ‌ಪ್ರಾಸ್ಥಾವಿಕವಾಗಿ ಮಾತನಾಡಿ ಸಂಸ್ಥೆ ಬೆಳೆದುಬಂದ ಬಗೆಯನ್ನು ತಿಳಿಸಿ ಎಲ್ಲರನ್ನು ಸ್ವಾಗತಿಸಿದರು. ಹಳ್ಳಿ ಜನಪದ ಕಲಾವಿದರಾದ ಕಂಟನಕುಂಟೆ ಅಶ್ವತ್ಥ್ ನಾರಾಯಣ, ಹೊಂಬೇಗೌಡ , ಅಂಬುಜಾ ಬೀರೇಶ್ ಅವರು ಸುಶ್ರಾವ್ಯವಾಗಿ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಿಶೇಷ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಯಿತ್ರಿ ಜಯಶ್ರೀ ರಾಜು ವಹಿಸಿದ್ದರು.ಶಾಂತಿವಾಸು, ಕೆ.ಎಂ.ರೇವಣ್ಣ, ಎಂ.ಎಸ್.ಆಶಾಲತಾ, ಯೋಗೇಶ್ ದ್ಯಾವಾಪಟ್ಣ, ಇಂದಿರಾ ಶರಣ್, ಲೇಖಕಿ ‌ಅಂಬುಜಾ ಪ್ರಕಾಶ್ ವಿ.ರೇಣುಕಾಪ್ರಸನ್ನ ಸ್ವರಚಿತ ಕವನ ವಾಚಿಸಿದರು. ವೇದಿಕೆಯಲ್ಲಿ ಕಾರ್ಯದರ್ಶಿ ‌ಸಿ.ಹೇಮಾವತಿ, ಭರವಸೆ ತಂಡದ ಸುನಿಲ್, ಮಂಜೇಶ್ , ಯುವಕವಿ ಡಾ.ಕೃಷ್ಣಹಾನ್ ಬಾಳ್, ನಿರೂಪಕ ಬಸವಲಿಂಗ ಸೇರಿದಂತೆ ಸಾಹಿತಿಗಳು ಬರಹಗಾರರು ಚಿಂತಕರು ಮುಂತಾದವರು ಇದ್ದರು.

ವರದಿ : ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
Share This Article
error: Content is protected !!