Ad imageAd image

ಕಾರುಣ್ಯಶ್ರಮದ ವೃದ್ಧ ,ಬುದ್ಧಿಮಾಂದ್ಯರ ಜೊತೆ ಜನುಮದಿನ ಆಚರಿಸಿಕೊಂಡ ಡಾ. ಜಾನ್ಸಿ ಲಕ್ಷ್ಮಿಬಾಯಿ ಬೋಪನ .!

Bharath Vaibhav
ಕಾರುಣ್ಯಶ್ರಮದ ವೃದ್ಧ ,ಬುದ್ಧಿಮಾಂದ್ಯರ ಜೊತೆ ಜನುಮದಿನ ಆಚರಿಸಿಕೊಂಡ ಡಾ. ಜಾನ್ಸಿ ಲಕ್ಷ್ಮಿಬಾಯಿ ಬೋಪನ .!
WhatsApp Group Join Now
Telegram Group Join Now

ಸಿಂಧನೂರು : -ಕಾರುಣ್ಯಶ್ರಮದ ಆಡಳಿತ ಅಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಹಾಗೂ ವೃದ್ಧರೂ ಮತ್ತು ಬುದ್ಧಿಮಾಂದ್ಯರ ಸಮ್ಮುಖದಲ್ಲಿ ನಡೆದ ಶ್ರೀ ಚೈತನ್ಯ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕಿಯರಾದ ಡಾ. ಜಾನ್ಸಿ ಲಕ್ಷ್ಮೀಬಾಯಿ ಬೋಪನ” ಅವರ ಜನುಮದಿನ ಸಮಾರಂಭ ಉತ್ತರ ಕರ್ನಾಟಕದ ಎ. ಜೆ. ಎಂ. ಡಾ. ರಾಜಕುಮಾರ್ ಅವರ ನೇತೃತ್ವದಲ್ಲಿ ವೃದ್ಧರಿಗೂ ಮತ್ತು ಬುದ್ಧಿಮಾಂದ್ಯರಿಗೂ ಮಹಾಪ್ರಸಾದ ಸೇವೆ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಜನುಮದಿನ ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಬಾಲಸ್ವಾಮಿ ದಿದ್ದಗಿ. ಯವರು ಮಾತನಾಡಿ -ನಮ್ಮ ಶ್ರೀ ಚೈತನ್ಯ ಸಮೂಹ ಸಂಸ್ಥೆಗಳ ಸಂಸ್ಥಾಪಕಿಯಾದ ಡಾ. ಜಾನ್ಸಿ ಲಕ್ಷ್ಮೀಬಾಯಿ ಅವರು ಅನೇಕ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ಸಮಾಜಕ್ಕೆ ಉತ್ತಮ ಕೊಡುಗೆ ಕೊಡುವುದರ ಮೂಲಕ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ ಅದೆಷ್ಟೋ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿ ಕೊಡುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ ಸರಳ ಸಾಮಾನ್ಯ ವ್ಯಕ್ತಿಯಾದ ಇವರು ಇಡೀ ನಮ್ಮ ದೇಶದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ಶಿಸ್ತಿನ ಶಿಕ್ಷಣಕ್ಕೆ ಮಾದರಿಯಾಗಿದ್ದಾರೆ.

ಇಂದು ನಮ್ಮ ಶಿಕ್ಷಣ ಸಂಸ್ಥಾಪಕರ ಜನುಮದಿನವನ್ನು ಈ ಕಾರುಣ್ಯ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ ಈ ಶಿಕ್ಷಣ ಸಂಸ್ಥೆ ಕಾರುಣ್ಯ ಆಶ್ರಮ ಜೊತೆಗೆ ಸದಾ ಕಾಲ ಇರುತ್ತದೆ ಇಲ್ಲಿಗೆ ಬಂದಿರುವಂತ ಎಲ್ಲಾ ಶಿಕ್ಷಕರು ಹಾಗೂ ದಾನಿಗಳು ಮಕ್ಕಳಿಗೆ ಶಿಕ್ಷಣ ಜೊತೆಗೆ ಒಳ್ಳೆಯ ಸಂಸ್ಕಾರದ ಪಾಠವನ್ನು ನೀಡುವ ಮೂಲಕ ಇಂತಹ ವೃದ್ಧಾಶ್ರಮಗಳಿಗೆ ತೆರೆ ಎಳೆಯಬೇಕು ಎನ್ನುವ ಸಂದೇಶ ನೀಡಿ ನಾವು ನೋಡಿದ ಅನೇಕ ವೃದ್ಧಾಶ್ರಮಗಳ ಪೈಕಿ ಈ ಕಾರುಣ್ಯ ಆಶ್ರಮ ವಿಶೇಷವಾಗಿದೆ ಎಂದರು,
ಇದೇ ಸಂದರ್ಭದಲ್ಲಿ, ಶ್ರೀ ಚೈತನ್ಯ ಟೆಕ್ನೋ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಕೃಷ್ಣವೇಣಿ ಅವರನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ,, ಕಾರುಣ್ಯ ಆಶ್ರಮದ ಡಾ. ಚನ್ನಬಸವ ಸ್ವಾಮಿ ಹಿರೇಮಠ, ಸಿದ್ದರಾಮೇಶ್ವರ ರೀಜನಲ್ ಇಂಚಾರ್ಜರ್, ವಿಕ್ರಂ ಮ್ಯಾನುವಲ್, ಶಿಕ್ಷಕ ಬಾಲಸ್ವಾಮಿ ದಿದ್ದಗಿ, ಮಂಜುಳ ಶಿಕ್ಷಕರು, ಶೇಖರ್ ಶಿಕ್ಷಕರು., ಸೆಕ್ಸ್ ವಲಿ ಶಿಕ್ಷಕರು, ಉಲ್ಲಾಸ್ ಶಿಕ್ಷಕರು, ಶಿವರಾಜ, ಇದ್ದರು

ವರದಿ:-   ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!