ಆಪರೇಷನ್ ಸಿಂದೂರ ಕಾರ್ಯಾಚರಣೆಯ ವಿವರವನ್ನು ಜಗತ್ತಿಗೆ ಸಾರಿದ ನಮ್ಮ ಹೆಮ್ಮೆಯ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದ ಕರ್ನಲ್ ಸೋಫಿಯಾ ಖುರೇಷಿ ಅವರ ಮನೆಗೆ ಡಾ ಮಹಾಂತೇಶಅಣ್ಣಾ ಕಡಾಡಿಯವರು ಭೇಟಿ ನೀಡಿ ಕರ್ನಲ್ ಸೋಫಿಯಾ ಅವರ ಮಾವ ಗೌಸ್ ಬಾಗೇವಾಡಿ ಅವರನ್ನು ಸತ್ಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗೌಸರವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಸಂದರ್ಭದಲ್ಲಿ ಆದ ಘಟನೆಗಳನ್ನು ಮೆಲುಕು ಹಾಕಿದರು. ಈಗ ಮಗ ಮತ್ತು ಸೊಸೆಯ ಸಾಧನೆಗೆ ಎಲ್ಲರೂ ನನ್ನ ಕುಟುಂಬವನ್ನು ಕೊಂಡಾಡುತ್ತೀರುವುದು ಸಂತಸ ತಂದಿದೆ ಎಂದು ಆನಂದ ಭಾಷ್ಪ ಹರಿಸಿದರು.
ಈ ಸಂದರ್ಭದಲ್ಲಿ ಕೊಣ್ಣೂರ ಪಟ್ಟಣದ ಕಾಂಗ್ರೆಸ್ ಮುಖಂಡರು ಹಾಗೂ ಗೌಸ ಕುಟುಂಬಸ್ಥರು ಉಪಸ್ಥಿತರಿದ್ದರು.




