ಬೆಂಗಳೂರು : ಶ್ರೀ ಗುರು ರಾಘವೇಂದ್ರ ಸೇವಾ ಕಲಾ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಅಂದರೆ ಸಮಾಜ ಸೇವೆ, ಶಿಕ್ಷಣ,ಯೋಗ ಸೇರಿದಂತೆ ಗಣನೀಯವಾಗಿ ತಮ್ಮದೇಯಾದ ಶ್ರಮದಿಂದ ಸಾಧನೆ ಮಾಡಿ ಅತ್ಯುತ್ತಮ ಯೋಗ ಶಿಕ್ಷಕ ಹಾಗೂ ಪತಂಜಲಿ ಯೋಗ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಡಾ. ಜಗದೀಶ್ ಎಂ.ಎಸ್ ಅವರ ಕಾರ್ಯ ಚಟುವಟಿಕೆಗೆ ಗುರುತಿಸಿ ಶ್ರೀ ರಾಘವೇಂದ್ರ ಸೇವಾ ಟ್ರಸ್ಟಿನ ಅಧ್ಯಕ್ಷ ಅರಸೀಕೆರೆ ಉಮೇಶ್, ಖಜಾಂಚಿ ಕಲಾವತಿ ವಿ.ಎನ್, ಉಪಾಧ್ಯಕ್ಷ ಗಂಗಾ ಹೆಚ್ ಮತ್ತು ಕಾರ್ಯದರ್ಶಿ ಪ್ರಜ್ವಲ್ ಕೆ.ಬಿ ಇವರುಗಳ ನೇತೃತ್ವದಲ್ಲಿ ಡಾ.ಎಂ. ಲೀಲಾವತಿ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನ ಪ್ರತಿಷ್ಠಿತ ರವೀಂದ್ರ ಕಲಾ ಕ್ಷೇತ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಗ್ಗೆರೆ ಡಾ. ಜಗದೀಶ್ ಎಂ.ಎಸ್ ಅವರಿಗೆ ಡಾ.ಎಂ. ಲೀಲಾವತಿ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗೌರವ ಸ್ವೀಕರಿಸಿ ನನ್ನ ವ್ಯಕ್ತಿತ್ವ, ಶ್ರಮ,ಕಾರ್ಯ ಚಟುವಟಿಕೆಗಳು ಗುರುತಿಸಿ ಪ್ರಶಸ್ತಿ ನೀಡಿದ್ದು ನನಗೆ ಖುಷಿ ತಂದಿದೆ ಮತ್ತು ಪ್ರಶಸ್ತಿಯಿಂದ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಇವೆಲ್ಲ ಪಡೆಯ ಬೇಕಾದರೆ ಗುರು ಹಿರಿಯರ ಆಶೀರ್ವಾದ ಎಂದು ಭಾವುಕರಾಗಿ ಮಾತನಾಡಿ ಇದೆ ವೇಳೆ ಸರ್ವರಿಗೂ ಡಾ. ಜಗದೀಶ್ ಧನ್ಯವಾದಗಳು ತಿಳಿಸಿದರು.
ವರದಿ: ಅಯ್ಯಣ್ಣ ಮಾಸ್ಟರ್