ಬೆಂಗಳೂರು: ಚಾಮರಾಜಪೇಟೆ ಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಪ್ರದಾನ ಕಚೇರಿ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅವರು ಅಂಡಗಿ ಪ್ರತಿಷ್ಠಾನ ಸಂಸ್ಥಾಪಕ ಅಧ್ಯಕ್ಷರಾದ ಶಿವರಾಜ್ ಅಂಡಗಿ ತೆಂಗಳಿ ಅವರು ಸಮ್ಮುಖದಲ್ಲಿ ಭಾರತ್ ವೈಭವ್ ದಿನ ಕನ್ನಡ ಪತ್ರಿಕೆಯ ಬೆಂಗಳೂರು ಬೆಸ್ಟ್ ಆಲ್ರೌಂಡರ್ ರಿಪೋರ್ಟರ್ ಪ್ರಶಸ್ತಿ ಪುರಸ್ಕೃತರು ಹಾಗೂ ವರದಿಗಾರ ಅಯ್ಯಣ್ಣ ಮಾಸ್ಟರ್ ಮತ್ತು ಸಂಜೆ ಸಮಯ ಪತ್ರಿಕೆಯ ಕನ್ನಡ ದಿನಪತ್ರಿಕೆಯ ವರದಿಗಾರ ಕೆಂಪರಾಜು ಅವರಿಗೆ “ಸೇವಾಶ್ರೀ ಪ್ರಶಸ್ತಿ” ಪ್ರಧಾನ ನಾಡೋಜ ಡಾ. ಮಹೇಶ್ ಜೋಶಿ ಮಾಡಿದರು.
ಕಲಬುರ್ಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ತೆಂಗಳಿ ಗ್ರಾಮದವರಾದ ಅಯ್ಯಣ್ಣ ಮಾಸ್ಟರ್ ಅವರು ಭಾರತ್ ವೈಭವ್ ಕನ್ನಡ ದಿನಪತ್ರಿಕೆಯ ವರದಿಗಾರರಾಗಿ ರಾಜ್ಯ ಮಟ್ಟದಲ್ಲಿ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಮಾಜಿಕ ಸೇವೆ ಪರಿಗಣಿಸಿ ಕಲಬುರ್ಗಿ ಅಂಡಗಿ ಪ್ರತಿಷ್ಠಾನ “ಸೇವಾಶ್ರೀ ಪ್ರಶಸ್ತಿ” ಪ್ರಧಾನ ಕಾರ್ಯಕ್ರಮ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜರುಗಿತು ಎಂದು ಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಶಿವರಾಜ್ ಅಂಡಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
ವರದಿ: ಅಯ್ಯಣ್ಣ ಮಾಸ್ಟರ್




