Ad imageAd image

ಜೈ ಜನ್ಮಭೂಮಿ ರಕ್ಷಣಾ ಪಡೆ ಕಛೇರಿಗೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ

Bharath Vaibhav
ಜೈ ಜನ್ಮಭೂಮಿ ರಕ್ಷಣಾ ಪಡೆ ಕಛೇರಿಗೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ
WhatsApp Group Join Now
Telegram Group Join Now

ಪೀಣ್ಯ,ದಾಸರಹಳ್ಳಿ: –‘ದೇಶದ ಅಭ್ಯುದಯಕ್ಕೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಅಪಾರ. ಅವರ ಚಿಂತನೆಗಳು ರಾಷ್ಟ್ರಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿವೆ ಅಂಬೇಡ್ಕರ್‌ ರವರ ವಿಚಾರ ಧಾರೆಗಳನ್ನು ಅರ್ಥ ಮಾಡಿಕೊಂಡರೆ ಯುವ ಪೀಳಿಗೆ ಭವಿಷ್ಯ ಉಜ್ವಲವಾಗುತ್ತದೆ’, ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.

ಜೈ ಜನ್ಮಭೂಮಿ ರಕ್ಷಣಾ ಪಡೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಫೈರೋಜ್ ಖಾನ್ ರವರ ನೇತೃತ್ವದಲ್ಲಿ ದಾಸರಹಳ್ಳಿ ಮೆಟ್ರೋ ಹಿಂಭಾಗದಲ್ಲಿರುವ ಸಂಘದ ಕೇಂದ್ರ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಬಾಬಾಸಾಹೇಬ ಅಂಬೇಡ್ಕರ್ ಜಯಂತಿ ಹಾಗೂ ಜೈ ಜನ್ಮಭೂಮಿ ರಕ್ಷಣಾ ಪಡೆಯ 7ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾನು ದಾಸರಹಳ್ಳಿ ಕ್ಷೇತ್ರಕ್ಕೆ ಬಂದಾಗ ನನ್ನನ್ನು ತುಂಬಾ ಅಕ್ಕರೆಯಿಂದ ಸ್ವಾಗತಿಸಿ ನನಗೆ ಗೌರವಿಸಿದ ನನ್ನ ಸಹೋದರ ಫೈರೋಜ್ ಖಾನ್ ಎಂದರೆ ತಪ್ಪಾಗಲಾರದು. ಒಳ್ಳೆಯ ಮಾನವೀಯತೆ ಗುಣವುಳ್ಳ ವ್ಯಕ್ತಿ. ಅವರ ಬೆಳವಣಿಗೆಗೆ ನನ್ನ ಸಹಕಾರ ಯಾವಾಗಲೂ ಇರಲಿದೆ’, ಎಂದು ಹೇಳಿದರು.

ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಡಾ. ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಕೇಕ್ ಕತ್ತರಿಸಿ ನೆರೆದಿದ್ದವರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿಯವರಿಗೆ ಫೈರೋಜ್ ಖಾನ್ ಹಾಗೂ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಮಾತನಾಡಿದ ಜೈ ಜನ್ಮಭೂಮಿ ರಕ್ಷಣಾ ಪಡೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಫೈರೋಜ್ ಖಾನ್, ‘ಪ್ರಜಾ ಪ್ರಭುತ್ವ ವ್ಯವಸ್ಥೆ ಉಳಿದಿದೆ ಎಂದರೆ ಅದು ಸಂವಿಧಾನದಿಂದ ಮಾತ್ರ. ಸಮಾಜದ ಎಲ್ಲಾ ವರ್ಗದವರಿಗೂ ಅವರ ಹಕ್ಕುಗಳನ್ನು ಕೊಟ್ಟ ಕೀರ್ತಿ ನಮ್ಮ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಸಲ್ಲುತ್ತದೆ. ಹಾಗೆಯೇ ನಮ್ಮ ನಾಯಕಿ ಡಾ. ನಾಗಲಕ್ಷ್ಮಿ ಚೌಧರಿಯವರು ಮಹಿಳಾ ಆಯೋಗದ ಅಧ್ಯಕ್ಷೆಯಾಗಿರುವುದು ನಮಗೆ ಅತ್ಯಂತ ಖುಷಿಯ ವಿಚಾರ. ಮಹಿಳಾ ಆಯೋಗಕ್ಕೆ ಅವರು ಮಾಡುವ ಸೇವೆ ಇತಿಹಾಸದಲ್ಲಿ ದಾಖಲಾಗಲಿದೆ’, ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಿಳಾ ಮುಖಂಡರುಗಳಾದ ಎನ್.ನಾಗರತ್ನ, ಕೆಎಂಡಿಸಿ ಹಾಗೂ ವಖ್ಫ್ ಅಧೀನದ ಎಂಡಬ್ಲ್ಯ ಇಸಿ ಸದಸ್ಯೆ ರಿಹಾನ ಖಲೀಲ್, ಬಾಗಲಗುಂಟೆ ಬ್ಲಾಕ್ ಮಹಿಳಾ ಅಧ್ಯಕ್ಷ ಸುಶೀಲ, ಫಹೀಮಾ, ಜಯ, ಹೇಮ ಮತ್ತು ಸಹೋದರರಾದ ಅಬ್ಝಲ್ ಷರೀಫ್, ಅಜೀಝ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ವರದಿ:-ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!