ಸಿಂಧನೂರು : ಜೂನ್ 20, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ಸಂಘಟನೆ ವತಿಯಿಂದ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ. ನಾಗರಾಜ್ ಕಾಟ್ವಾ ರವರನ್ನು ವರ್ಗಾವಣೆ ಖಂಡಿಸಿ ಸಿಂಧನೂರು ತಾಸಿಲ್ದಾರ್ ಅವರ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು ಎಂದು ಕಲಬುರ್ಗಿ ವಿಭಾಗೀಯ ಸಂಘಟನಾ ಸಂಚಾಲಕ ಚಿನ್ನಪ್ಪ ಹೆಡಗಿನಾಳ ಕ್ಯಾಂಪ್ ತಿಳಿಸಿದರು.

ನಂತರ ರಾಯಚೂರು ಜಿಲ್ಲಾ ಪ್ರಧಾನ ಸಂಚಾಲಕ ಅಂಬ್ರೂಸ್ ಕೊಡ್ಲಿ ಮಾತನಾಡಿ ಡಾ. ನಾಗರಾಜ್ ಕಾಟ್ವ ರವರನ್ನು ನಗರದ ಸರ್ಕಾರಿ ಆಸ್ಪತ್ರೆ ಯಿಂದ ವರ್ಗಾವಣೆಯಾಗಿದೆ ಎಂದು ತಿಳಿದಿದ್ದು ಆದರೆ ಇಂತಹ ಒಬ್ಬ ವೈದ್ಯರು ನಮ್ಮ ಸಿಂಧನೂರು ಸರ್ಕಾರ ಆಸ್ಪತ್ರೆಗೆ ಸಿಗುವುದು ತುಂಬಾ ವಿರಳ ಅವರು ಅತ್ಯಂತ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ರೋಗಿಗಳಿಗೆ ಚಿಕಿತ್ಸೆ ಮಾಡುತ್ತಿದ್ದು ಗರ್ಭಿಣಿ ಸ್ತ್ರೀಯರಿಗಂತೂ ಇವರು ದೇವರು ವಿನಾಕಾರಣ ಅಪರೇಷನ್ ಮಾಡದೆ ನಾರ್ಮಲ್ ಹೆರಿಗೆ ಮಾಡುವುದರಲ್ಲಿ ಇವರು ಅತ್ಯಂತ ನಿಪುಣರು ಸಾರ್ವಜನಿಕರು ಮತ್ತು ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ರೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಇವರ ಸೇವೆ ನಮ್ಮ ಸಿಂಧನೂರು ಸರ್ಕಾರ ಆಸ್ಪತ್ರೆಗೆ ಇನ್ನು ಬೇಕಾಗಿದೆ ಸಾರ್ವಜನಿಕರು.
ಬಾಣಂತಿಯರು ರೋಗಿಗಳ ದೃಷ್ಟಿಯಿಂದ ಈ ವೈದ್ಯರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ, ಸಂಘಟನೆಯು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತದೆ ಎಂದರು
ಈ ಸಂದರ್ಭದಲ್ಲಿ, ವಿಭಾಗೀಯ ಸಂಘಟನಾ ಸಂಚಾಲಕ ಚಿನ್ನಪ್ಪ ಹೆಡಿಗಿಬಾಳ ಕ್ಯಾಂಪ್. ಜಿಲ್ಲಾ ಪ್ರಧಾನ ಸಂಚಾಲಕ ಅಂಬ್ರುಸ್ ಕೊಡ್ಲಿ. ಜಿಲ್ಲಾ ಸಂಘಟನಾ ಸಂಚಾಲಕ ಶಿವರಾಜ ಬಾಗಲವಾಡ. ಹಿರಿಯ ಮುಖಂಡ ಅಲ್ಲಮಪ್ರಭು ಪೂಜಾರ್. ನಗರ ಘಟಕ ಸಂಚಾಲಕ ಉಮೇಶ್ ಸುಖಲಪೇಟೆ. ಇನ್ನು ಮುಂತಾದವರು ಇದ್ದರು
ವರದಿ : ಬಸವರಾಜ ಬುಕ್ಕನಹಟ್ಟಿ




