Ad imageAd image

ಸಂಕ್ರಾಂತಿ ದಿನದಂದು ಕಾರುಣ್ಯ ಆಶ್ರಮದಲ್ಲಿ ಜನ್ಮದಿನ ಆಚರಿಸಿಕೊಂಡ ಡಾ. ನಾಗವೇಣಿ 

Bharath Vaibhav
ಸಂಕ್ರಾಂತಿ ದಿನದಂದು ಕಾರುಣ್ಯ ಆಶ್ರಮದಲ್ಲಿ ಜನ್ಮದಿನ ಆಚರಿಸಿಕೊಂಡ ಡಾ. ನಾಗವೇಣಿ 
WhatsApp Group Join Now
Telegram Group Join Now

ಸಿಂಧನೂರು : ರಾಯಚೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಡಾ ನಾಗವೇಣಿ ಎಸ್. ಪಾಟೀಲ್ ಅವರು 37ನೇ ವರುಷದ ಜನ್ಮ ದಿನಾಚರಣೆ ಕಾರ್ಯಕ್ರಮ ನಗರದ ಕಾರುಣ್ಯ ವೃದ್ಧ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಆಶ್ರಯದಾತರೊಂದಿಗೆ ಜನ್ಮ ದಿನಾಚರಣೆ ಆಚರಿಸಿಕೊಂಡು ವೃದ್ಧ ಹಾಗೂ ಅನಾಥ ಬುದ್ಧಿಮಾಂದ್ಯರಿಗೆ ಹಣ್ಣು ಹಂಪಲಗಳನ್ನು ವಿತರಿಸಿ ಕಾರುಣ್ಯ ಆಶ್ರಮಕ್ಕೆ ದವಸ ಧಾನ್ಯಗಳನ್ನು ಕೊಡುವುದರ ಮೂಲಕ ತಮ್ಮ ಜನುಮ ದಿನಾಚರಣೆಯನ್ನು ಆಚರಿಸಿಕೊಂಡು ಮಾತನಾಡಿ ಈ ಕರುಣೆಯ ಕುಟುಂಬದಂತಿದ್ದ ಕಾರುಣ್ಯ ಆಶ್ರಮದ ಕರುಣಾಮಯಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಹಾಗೂ ಅವರ ಧರ್ಮಪತ್ನಿ ಸುಜಾತ ಹಿರೇಮಠ ಇವರುಗಳ ಸಮ್ಮುಖದಲ್ಲಿ ಹಾಗೂ ವಿಶೇಷವಾಗಿ ಸಂಕ್ರಾಂತಿ ದಿನದಂದು ನನ್ನ ಜನುಮ ದಿನಾಚರಣೆಯನ್ನು ಆಚರಿಸಿಕೊಳ್ಳುವುದು ನನಗೆ ಆತ್ಮಕ್ಕೆ ತೃಪ್ತಿ ತಂದಿದೆ ಯಾಕೆಂದರೆ ಎಲ್ಲೋ ಹೋಗಿ ಗುಡಿ ಗುಂಡಾರಗಳಿಗೆ ಎಥೀಚ್ಛವಾಗಿ ಹಣ ಖರ್ಚು ಮಾಡುತ್ತೀವಿ ಅದರ ಬದಲಾಗಿ ಇಂಥ ಆಶ್ರಮಗಳಿಗೆ ನಮ್ಮ ಕೈಲಾದಷ್ಟು ಸೇವೆ ಮಾಡಿದರೆ ಬಡಪಾಯಿ ವೃದ್ಧ ಹಾಗೂ ಬುದ್ಧಿಮಾಂದರಿಗೆ ಒಂದು ಒಪ್ಪತ್ತಿನ ಊಟ ಹಾಕಿದೀನಲ್ಲ ಎಂದು ನಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು.

ಈ ಸಂದರ್ಭದಲ್ಲಿ ಲಿಂಗರಾಜ್ ಹೊಸಳ್ಳಿ ತಾಲೂಕ ಅಧ್ಯಕ್ಷರು ಅಖಿಲ ಕರ್ನಾಟಕ ಸಿದ್ದರಾಮಯ್ಯ ಅಭಿಮಾನಿಗಳ ಸಂಘ ಸಿಂಧನೂರು, ಪ್ರಕಾಶ್ ಗೌಡ ಗ್ರಾಮ ಪಂ, ಸದಸ್ಯರು, ಚಂದ್ರಕಲಾ ನಿಂಗರಾಜ ಹೊಸಳ್ಳಿ ಈಜೆ, ಶೇಕ್ಷ ವಲಿ ಮಸ್ಕಿ, ಲಿಂಗಣ್ಣ ಮಲ್ಕಾಪುರ್, ಅಶೋಕ ಬಾಂಡಿಗೆ, ಪ್ರಶಾಂತ್ ಮಾಲಿಗೌಡ್ರು, ಅನೇಕರಿದ್ದರು.

ವರದಿ:ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!