ಸೇಡಂ:- ತಾಲೂಕಿನ ರಂಜೊಳ ಗ್ರಾಮದ ಬಾರಹಿಮಾಮ್ ಮಜೀದ್ ನಲ್ಲಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರಲ್ ರಿಸರ್ಚ್ ಯುನಿವರ್ಸಿಟಿ ಅವರು ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ರಕ್ಷಣಾ ವೇದಿಕೆ ಸೇಡಂ ತಾಲೂಕ ಅಧ್ಯಕ್ಷರಾದ ರಾಮಚಂದ್ರ ಗುತ್ತೇದಾರ್ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡಿದ್ದಕ್ಕೆ ರಂಜೋಳ ಗ್ರಾಮದಲ್ಲಿ ವಿಶೇಷ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ನೇತೃತ್ವ ಸತೀಶ್ ರೆಡ್ಡಿ ಪಾಟೀಲ್ ವಾಸವಾದತ್ತ ಕಾರ್ಮಿಕ ಸಂಘದ ಅಧ್ಯಕ್ಷರು ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾಗಿ ಅಬ್ದುಲ್ ರಶೀದ್ ರಂಜೋಳ ಪುರಸಭಾ ಸದಸ್ಯರ ಸೇಡಂ ವೆಂಕಟನರಸಿಂಹರೆಡ್ಡಿ ಮುಖಂಡರು ನಾರಾಯಣ ರೆಡ್ಡಿ ಸೇರಿಕಾರ್ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಗೋಪಾಲ್ ಜಿ ಮಾರಾಠ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮಹಾಂತೇಶ್ ಸುತಾರ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸತೀಶ್ ರೆಡ್ಡಿ ಅವರು ಮಾತನಾಡಿ ಸಮಾಜ ಸೇವೆ ನಿರಂತರವಾಗಲಿ ನಮ್ಮ ರಂಜೋಳ ಗ್ರಾಮದ ಕೀರ್ತಿ ಪತಾಕಿ ಯಾವತ್ತು ಮೇಲೆ ಇರಲಿ ನಾವು ಎಂದಿಗೂ ಒಳ್ಳೆಯ ಕೆಲಸಕ್ಕೆ ನಿರಂತರವಾಗಿ ತಮ್ಮ ಬೆನ್ನು ಹಿಂದೆ ಇರುತ್ತೇವೆ ಹಾಗೂ ಡಾಕ್ಟರೇಟ್ ನಿಡೆದಕ್ಕೆ ನಮ್ಮ ಊರಿನ ಸಮಸ್ತ ಜನತೆಗೆ ಸಂತೋಷ ವಾಗಿದೆ ಎಂದು ಅಭಿಪ್ರಾಯಪಟ್ಟರು.
ನಿರೂಪಣೆ ಚಂದ್ರಶೇಖರ್ ಪೂಜಾರಿ ಅನೇಕ ಯುವಕರು ಹಿರಿಯರು ಸನ್ಮಾನ ಮಾಡಿ ಸಂತೋಷ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಡಾ. ರಾಮಚಂದ್ರ ಗುತ್ತೇದಾರ್ ಅವರು ಮಾತನಾಡಿ ಈ ಪ್ರಶಸ್ತಿಯನ್ನು ನಾನು ನಮ್ಮ ಕನ್ನಡ ಸೈನಿಕರಿಗೆ ಅರ್ಪಿಸುತ್ತೇನೆ ತಾವೆಲ್ಲರೂ ನಿರಂತರ 19ವರ್ಷಗಳ ಕಾಲ ನನ್ನ ಬೆನ್ನಹಿಂದೆ ಇದ್ದು ನನಗೆ ಅನೇಕ ಹೋರಾಟಗಳಲ್ಲಿ ಸಹಕಾರ ನೀಡಿದ್ದಕ್ಕೆ ನಿಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ತಿಳಿಸುತ್ತೇನೆ ಎಂದು ಕೆಲ ಕ್ಷಣ ಕಣ್ಣೀರಿಂದ ಭಾವುಕದರು.ಸೇಡಂ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.