ಬೆಂಗಳೂರು : ಈಗಿನ ಕಂಪ್ಯೂಟರ್ ಯುಗದಲ್ಲಿ ಪಠ್ಯ ಪುಸ್ತಕ ಜೊತೆಗೆ ಸಾಮಾನ್ಯ ಜ್ಞಾನದ ಅರಿವನ್ನು ಹೇಳಿಕೊಡುವ ಕೆಲಸ ಶಿಕ್ಷಣ ಸಂಸ್ಥೆಗಳು ಮಾಡಬೇಕಾಗಿದೆ ಶಿಕ್ಷಕ ಶಿಕ್ಷಕಿಯರು ಆಸಕ್ತಿ ತೋರಬೇಕು ಎಂದು ಕುಣಿಗಲ್ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ರಂಗನಾಥ್ ಹೇಳಿದರು.
ಅವರು ಯಶವಂತಪುರ ವಿಧಾನಸಭಾ ಕ್ಷೇತ್ರದ ದೊಡ್ಡ ಬಿದರಿಕಲ್ಲು ವಾರ್ಡಿನ ವ್ಯಾಪ್ತಿಗೆ ಬರುವ ಅಂದ್ರಹಳ್ಳಿಯ ವಿದ್ಯಾ ಭೂಷಣ್ ಇಂಟರ್ನ್ಯಾಷನಲ್ ಎಜುಕೇಷನ್ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಬ.ನಾ ರವಿ ಹಾಗೂ ಅವರ ಧರ್ಮಪತ್ನಿ ಶಾಲಾ ಪ್ರಿನ್ಸಿಪಾಲ್ ಶ್ರೀಮತಿ ಪಾರ್ವತಿ ರವಿ ಅವರ ನೇತೃತ್ವದಲ್ಲಿ ವಿದ್ಯಾಸಿರಿ-2024-25 ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶ್ರೀಶ್ರೀಶ್ರೀ ಸಿದ್ದರಾಮ ಚೈತನ್ಯ ಮಹಾ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ವಿದ್ಯಾ ಭೂಷಣ್ ಇಂಟರ್ನ್ಯಾಷನಲ್ ಎಜುಕೇಷನ್ ಸೊಸೈಟಿ ಸಂಸ್ಥಾಪಕ ಕಾರ್ಯದರ್ಶಿ ಬ.ನಾ ರವಿ ಸರ್ವರಿಗೂ ಸ್ವಾಗತ ಕೋರಿ ಸನ್ಮಾನಿಸಿದರು.
ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಬ.ನಾ.ರವಿ ಅವರ ಪೂಜ್ಯ ತಂದೆ ತಾಯಿ, ಸಹನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಲಿಂಗೆ ಗೌಡ, ಚಲನ ಚಿತ್ರ ನಿರ್ಮಾಪಕರು, ನಟ ನಟಿಯರು ಸೇರಿದಂತೆ ಸ್ಥಳೀಯ ಮುಖಂಡರು, ಮಹಿಳೆಯರು ಮತ್ತು ಪೋಷಕರು ಶಾಲಾ ಶಿಕ್ಷಕ ಶಿಕ್ಷಕಿಯರು ಸಿಬ್ಬಂದಿ ವರ್ಗದವರು ಮುಂತಾದವರು ಉಪಸ್ಥಿತರಿದ್ದರು.
ವರದಿ: ಅಯ್ಯಣ್ಣ ಮಾಸ್ಟರ್




