ಧಾರವಾಡ: ಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನ ಹೃದಯ ಶಸ್ತ್ರಚಿಕಿತ್ಸಕ ಡಾ. ಸಾಯಿ ಸೂರಜ ಕೋಟೇರ ಅವರಿಗೆ ವಾಯ್ಸ್ ಆಫ್ ಹೆಲ್ತ್ ಕೇರ್ ನಿಂದ ಕೊಡಮಾಡಲ್ಪಡುವ ‘ವರ್ಷದ ಉದಯೋನ್ಮುಖ CTVS (ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕ್ಯೂಲರ್ ಸರ್ಜರಿ) ಸರ್ಜನ್ – ಪ್ರಾದೇಶಿಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನವ ದೆಹಲಿಯಲ್ಲಿ ನಡೆದ ಕಾರ್ಡಿಯಾಕ್ ಎಕ್ಸಲೆನ್ಸ್ -೨೦೨೫ ಪ್ರಶಸ್ತಿ ಸಮಾರಂಭದಲ್ಲಿ ಅವರು ಈ ಪ್ರಶಸ್ತಿಯನ್ನು ಪಡೆದರು. ವಿಒಎಚ್ ಆಯೋಜಿಸಿದ್ದ ಮತ್ತು ನಾರಾಯಣ ಹೆಲ್ತ್ ಬೆಂಬಲಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಮನ್ನಣೆಯು ಡಾ. ಕೋಟೇರ ಅವರಿಗೆ ಅವರ ಶಸ್ತ್ರಚಿಕಿತ್ಸಾ ಪರಿಣತಿ, ಕ್ಲಿನಿಕಲ್ ಶ್ರೇಷ್ಠತೆ ಮತ್ತು ಈ ಕ್ಷೇತ್ರದಲ್ಲಿ ಅವರು ನೀಡುತ್ತಿರುವ ಕೊಡುಗೆಗಳನ್ನು ಪರಿಗಣಿಸಿ ಕೊಡಲಾಗಿದೆ.
ಎಸ್.ಡಿ.ಎಂ ನಾರಾಯಣ ಹಾರ್ಟ್ ಸೆಂಟರ್ ಸಹೋದ್ಯೋಗಿಗಳು, ಸಿಬ್ಬಂದಿಗಳು ಹಾಗೂ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಶ್ರೀ ಶಶಿಕುಮಾರ ಪಟ್ಟಣಶೆಟ್ಟಿಯವರು ಡಾ. ಸಾಯಿ ಸೂರಜ ಕೋಟೇರ ಅವರಿಗೆ ಅಭಿನಂದಿಸಿದ್ದಾರೆ.
ವರದಿ:ಸುಧೀರ್ ಕುಲಕರ್ಣಿ




