ಬೆಂಗಳೂರು : (ಗೋವಾ ) ದೇಶದ ಪ್ರತಿಷ್ಠಿತ ಪ್ರವಾಸಿ ತಾಣವಾದ ನೆರೆ ರಾಜ್ಯ ಗೋವಾದ ಕರ್ಮಭೂಮಿ ಕನ್ನಡ ಸಂಘ ಬಿಚೋಲಿಯಂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಷಕನ್ನಡ ಜಾಗೃತಿ ವೇದಿಕೆಯ ಮುಖ್ಯಸ್ಥ ಮಹೇಶ್ ಬಾಬು ಸುರ್ವೆ ಮತ್ತು ನಂದೀಶ್ ಅವರ ನೇತೃತ್ವದಲ್ಲಿ ಆಯೋಜಿಸಿದ ಗೋವಾದಲ್ಲಿ16ನೇ ಸಾಂಸ್ಕೃತಿಕ ಸಮ್ಮೇಳನ ಅಂಗವಾಗಿ ಸುಮಂಗಲಿಯರು ಹೊತ್ತ 751 ಕುಂಭಮೇಳವನ್ನು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಹಾಗೂ ಸಮ್ಮೇಳನದ ಅಧ್ಯಕ್ಷ ಡಾ. ಸಂಗನ ಬಸಪ್ಪ ಬಿರಾದಾರ್ ಉದ್ಘಾಟನೆ ಮಾಡಿದರು.

ಗೋವಾ ಸಮ್ಮೇಳನ ಅಧ್ಯಕ್ಷ ಡಾ. ಸಂಗನ ಬಸಪ್ಪ ಬಿರಾದಾರ್ ಅವರು ಭವ್ಯ ಬೆಳ್ಳಿ ರಥದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ ಕನ್ನಡ ಬಾವುಟ ಹಿಡಿದು ಪ್ರದರ್ಶನ ರಾಜಬೀದಿಗಳಲ್ಲಿ ಕನ್ನಡ ರಾರಾಜಿಸಿದವು ಮತ್ತು ಡೊಳ್ಳು ಕುಣಿತ ವೀರಗಾಸೆ ನೃತ್ಯ ಕೋಲಾಟ ಕಂಸಾಳೆ ವಿವಿಧ ಕಲಾ ತಂಡಗಳಿಂದ ಮೆರವಣಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ವಿಭುಶಿತ ಸದ್ಗುರು ಬ್ರಮ್ಹೇಶಾನಂಧ ಆಚಾರ್ಯ ಸ್ವಾಮಿಜಿ ಗೋವಾ, ಶ್ರೀಶ್ರೀಷಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಹುಕ್ಕೇರಿ,ಶ್ರೀ ಕರಿಸಿದ್ದೇಶ್ವರ ಪಟ್ಟದ ಪೂಜ್ಯರು ಹಳೆತೋರಗಲ್ಲ ಇವರು ದಿವ್ಯ ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಸಕ ಪ್ರೇಮೆಂದ್ರ ವಿ ಶೇಠ್ , ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಮಾಜಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರ, ಹನುಮಂತ ಶಿರೂರ, ಡಾ. ಸಂಗನ ಬಸಪ್ಪ ಬಿರಾದಾರ್ ಅವರ ಸಹೋಧರ ರಾಜ್ ಕುಮಾರ್ ಮತ್ತು ಕುಟುಂಬ ಸದಸ್ಯರು, ಬಾಗಲಗುಂಟೆ ವಾರ್ಡ ಬಿಜೆಪಿ ಅಧ್ಯಕ್ಷ ಮಧುಸೂದನ್, ಖ್ಯಾತ ವೈದ್ಯ ಡಾ ಬಿ ಎಂ ಬಳ್ಳಾರಿ,ಸುರೇಶ್ ದೊಡ್ಡಮನಿ, ಶರಣಬಸವೇಶ ಆಲೂರ್, ನಿವೃತ್ತ ವೀರ ಯೋಧರ ಚನ್ನಾರೆಡ್ಡಿ, ನಾಗರಾಜ್ ಹುಬ್ಬಳ್ಳಿ, ಮುತ್ತುರಾಜ್ ಹಾಳಕಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ವರದಿ : ಅಯ್ಯಣ್ಣ ಮಾಸ್ಟರ್




