ಚಿಟಗುಪ್ಪ : ವಿದ್ಯಾರ್ಥಿ ಜೀವನದಲ್ಲಿ ಗುರು ಮತ್ತು ಗುರಿ ಬಹಳ ಮುಖ್ಯವಾಗಿದೆ ಎಂದು ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೆಂದ್ರ ಬೆಲ್ದಾಳೆ ಹೇಳಿದರು.
ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಬುಧವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವೇಕಾನಂದರು ಪ್ರಭುದ್ದ ರಾಷ್ಟ್ರ ನಿರ್ಮಾಣ ಮಾಡಲು ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಅವರ ತತ್ವ ಆದರ್ಶವನ್ನು ಯುವಕರು ಪಾಲಿಸಿ ದೇಶ ಕಟ್ಟಲು ಮುಂದಾಗಬೇಕು ಎಂದು ಹೇಳಿದರು.
ಸ್ವಾಮಿ ವಿವೇಕಾನಂದ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಾ.ರವಿ ಸ್ವಾಮಿ ಮಾತನಾಡಿ, ನಮ್ಮ ಟ್ರಸ್ಟ್ ಸ್ಥಾಪನೆಯಾಗಿ ಕೆಲವೇ ದಿನಗಳಾದರೂ ಕೂಡ ಸಮಾಜ ಮುಖಿ ಕಾರ್ಯ ಮಾಡುತ್ತ ಬರುತ್ತಿದೆ.ಬರುವ ದಿನಗಳಲ್ಲಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಅಲ್ಲದೆ ವೃದ್ದಾಶ್ರಮ ಮತ್ತು ಅನಾಥ ಆಶ್ರಮ ನಡೆದಲಾಗುತ್ತದೆ ಎಂದು ಹೇಳಿದರು.
ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ನಾಟಕ, ದೇಶ ಭಕ್ತಿ ಗೀತೆಯ ಮೇಲೆ ನೃತ್ಯ ಜರುಗಿದವು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಡಾ.ಅಭಿನವ ಘನಲಿಂಗ ರುದ್ರಮಣಿ ಶಿವಾಚಾರ್ಯರು ವಹಿಸಿ ಆಶೀರ್ವಾಚನ ನೀಡಿದರು.
ಈ ಸಂದರ್ಭದಲ್ಲಿ ಸಜೀವಕುಮಾರ ಕಿರಣ,ತಹಸೀಲ್ದಾರ ಮಂಜುನಾಥ ಪಂಚಾಳ,ಗುರುಶಾಂತ ಟೆಂಗಳೇ ಸೇರಿ ಅನೇಕರು ಉಪಸ್ಥಿತರಿದ್ದರು.
ವರದಿ : ಸಜೀಶ ಲಂಬುನೋರ