ಹುಮನಾಬಾದ:- ಐದು ಕೋಟಿ ವೆಚ್ಚದ ರಸ್ತೆ ಕಾಮಗಾರಿ ಕೆಲವೇ ದಿನಗಳಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಕ್ಷೇತ್ರದ ಶಾಸಕ ಡಾ.ಸಿದ್ದು ಪಾಟೀಲ ಹೇಳಿದರು.ಪಟ್ಟಣದ SBI ಬ್ಯಾಂಕ್ ದಿಂದ ಹೈವೇ ರಸ್ತೆವರೆಗೆ ಕೈಗೊಳ್ಳಲಿರುವ ಕಾಮಗಾರಿ ಹಿನ್ನಲೆಯಲ್ಲಿ ಮಂಗಳವಾರ ವೀಕ್ಷಣೆ ಮಾಡಿದ ಬಳಿಕ ಶಾಸಕ ಸಿದ್ದು ಪಾಟೀಲ ಮಾಧ್ಯಮ ಜೊತೆಗೆ ಮಾತನಾಡಿದರು.
ಲೋಕಸಭೆ ಚುನಾವಣೆ ಮುಂಚೆಯೇ ಸರ್ಕಾರದ ಮೇಲೆ ಒತ್ತಡ ಹಾಕಿ ಐದು ಕೋಟಿ ರೂಪಾಯಿಯ ವಿಶೇಷ ಅನುದಾನ ತರಲಾಗಿದೆ.ಅನುದಾನ ತಂದ ಕೂಡಲೇ ಲೋಕ ಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿತ್ತು,ಅದರಿಂದಾಗಿ ಕಾಮಗಾರಿಗೆ ಟೆಂಡರ್ ಕರೆಯಲಿಲ್ಲ,ಹೀಗಾಗಿ ಹಿಂದೆ ಬಿದ್ದ ಈ ಕಾಮಗಾರಿ ಶೀಘ್ರದಲ್ಲಿ ಟೆಂಡರ್ ಮೂಲಕ ಪ್ರಾರಂಭವಗೊಂಡು ಒಂದು ವರ್ಷದ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಸುನಿಲ್ ಪ್ರಭಾ,ಸುಭಾಸ್,ಸಂತೋಷ,ಅಂಬದಾಸ,ವಾಜಿದ್,ಅಲಿ ಸಾಬ್, ಮುಖಂಡರಾದ ಒಂಪ್ರಕಾಶ್ ಪ್ರಭಾ,ರಮೇಶ ಕಲ್ಲೂರ್,ಭದ್ರೇಶ್ ಪಾಟೀಲ,ಸಂಗಮೇಶ ಪಾಟೀಲ,ಸಂತೋಷ ನವದಗಿ,ಗಿರೀಶ್ ಪಾಟೀಲ, ಸಂಜು ವಡೆಕಾರ,ಪಪ್ಪುರಾಜ್ ಚತುರೆ,ಸುನಿಲ್ ಪತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ:- ಸಜೀಶ ಲಂಬುನೋರ್